ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಹಳೆಯ ಪೀಠೋಪಕರಣದಿಂದ ಬರಬಹುದು ಸಂಕಷ್ಟ

ವಾಸ್ತು ನಿಯಮಗಳ ಪ್ರಕಾರ ಮನೆಯಲ್ಲಿ ಇರಿಸುವ ಪ್ರತಿಯೊಂದು ವಸ್ತುವು ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಬೇರೆಯವರು ಈ ಹಿಂದೆ ಬಳಸಿರುವ ಯಾವುದೇ ವಸ್ತುವನ್ನು ಮನೆಯಲ್ಲಿ ಇಡಬಾರದು ಎನ್ನಲಾಗುತ್ತದೆ. ಮುಖ್ಯವಾಗಿ ಹಳೆಯ ಪೀಠೋಪಕರಣಗಳು. ಇದನ್ನು ಬಳಸಿದರೆ ಅದು ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಹಳೆಯ ಪೀಠೋಪಕರಣ ಮನೆಗೆ ಶುಭವಲ್ಲ

ಕೆಲವೊಮ್ಮೆ ಇಷ್ಟವಾಗಿ, ಇನ್ನು ಕೆಲವೊಮ್ಮೆ ಕಡಿಮೆ ಬೆಲೆಗೆ ಸಿಗುತ್ತೆ ಎಂದುಕೊಂಡು ನಾವು ಹಳೆಯ ಪೀಠೋಪಕರಣಗಳನ್ನು (old furniture ) ತೆಗೆದುಕೊಂಡು ಮನೆಗೆ ಬರುತ್ತವೆ. ಆದರೆ ಈ ರೀತಿ ತರುವ ಪೀಠೋಪಕರಣಗಳೊಂದಿಗೆ (second hand furniture) ನೀವು ಸಮಸ್ಯೆಗಳನ್ನು ಹೊತ್ತುಕೊಂಡು ಬರುತ್ತಿಲ್ಲವಲ್ಲ ಎಂದು ಖಚಿತ ಪಡಿಸಿಕೊಳ್ಳುವುದು ಮುಖ್ಯ. ಇಲ್ಲವಾದರೆ ಮುಂದೆ ಮನೆಯಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಚ್ಚರ ಎನ್ನುತ್ತದೆ ವಾಸ್ತುಶಾಸ್ತ್ರ (Vastu Tips). ವಾಸ್ತು ನಿಯಮಗಳ ಪ್ರಕಾರ ಮನೆಯಲ್ಲಿ ಇರಿಸುವ ಪ್ರತಿಯೊಂದು ವಸ್ತುವು ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಬೇರೆಯವರು ಈ ಹಿಂದೆ ಬಳಸಿರುವ ಯಾವುದೇ ವಸ್ತುವನ್ನು ಮನೆಯಲ್ಲಿ ಇಡಬಾರದು ಎನ್ನಲಾಗುತ್ತದೆ. ಮುಖ್ಯವಾಗಿ ಹಳೆಯ ಪೀಠೋಪಕರಣಗಳು. ಇದನ್ನು ಬಳಸಿದರೆ ಅದು ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಪೀಠೋಪಕರಣಗಳು ಶಕ್ತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳು ನಮ್ಮ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವನ್ನು ಬೀರುತ್ತವೆ. ಮಾರುಕಟ್ಟೆಯಿಂದ ಆಕರ್ಷಕವಾಗಿ ಕಾಣುವ ಪೀಠೋಪಕರಣಗಳನ್ನು ನಾವು ಮನೆಗೆ ತರುತ್ತೇವೆ. ಆದರೆ ಇದನ್ನು ತರುವ ಮುಂಚೆ ಅದನ್ನು ಈಗಾಗಲೇ ಯಾರಾದರೂ ಬಳಸಿದ್ದಾರೆಯೇ ಎಂಬುದನ್ನು ಖಚಿತ ಪಡಿಸುವುದು ಒಳ್ಳೆಯದು. ವಾಸ್ತು ಶಾಸ್ತ್ರದ ಪ್ರಕಾರ ಹಳೆಯ ಪೀಠೋಪಕರಣಗಳು ಮನೆಯ ಸಾಮರಸ್ಯ, ಆರೋಗ್ಯ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಪೀಠೋಪಕರಣಗಳನ್ನು ಮನೆಗೆ ಹೊಸದಾಗಿಯೇ ತರುವುದು ಉತ್ತಮ.

ಹಳೆಯ ಪೀಠೋಪಕರಣ ಖರೀದಿಸಿದರೆ ಏನಾಗುತ್ತದೆ?

ಹಳೆಯ ಪೀಠೋಪಕರಣಗಳನ್ನು ಖರೀದಿಸಿದರೆ ಯಾವ ರೀತಿಯ ತೊಂದರೆಗಳು ಉಂಟಾಗುತ್ತವೆ ಎಂಬುದರ ಕುರಿತು ವಾಸ್ತು ತಜ್ಞ ಡಾ. ಮಧು ಕೋಟಿಯಾ ಅವರು ಹೇಳುವುದು ಹೀಗೆ. ಸಾಮಾನ್ಯವಾಗಿ ಹಳೆಯ ಪೀಠೋಪಕರಣಗಳು ಅದರ ಹಿಂದಿನ ಮಾಲೀಕರ ಭಾವನೆಗಳಿಂದ ಪ್ರಭಾವಿತವಾಗಿರುತ್ತವೆ. ಹೀಗಾಗಿ ಅದು ಒಂದು ರೀತಿಯ ಶಕ್ತಿ ಪಡೆದಿರುತ್ತದೆ. ಅದು ಧನಾತ್ಮಕ ಅಥವಾ ಋಣಾತ್ಮಕವಾಗಿರಬಹುದು. ಇದು ಹೊಸ ಖರೀದಿದಾರರ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ಋಣಾತ್ಮಕ ಶಕ್ತಿ ಆ ಪೀಠೋಪಕರಣಗಳಲ್ಲಿ ಇದ್ದರೆ ಅದು ಹೊಸದಾಗಿ ಖರೀದಿ ಮಾಡಿರುವ ಮನೆಯವರಿಗೆ ಆರ್ಥಿಕ ನಷ್ಟ, ಆರೋಗ್ಯ ಸಮಸ್ಯೆ, ಸಂಬಂಧಗಳಲ್ಲಿ ಸಂಘರ್ಷವನ್ನು ಉಂಟು ಮಾಡಬಹುದು.

old (1)

ನಕಾರಾತ್ಮಕ ಪರಿಣಾಮ

ಹಳೆಯ ಪೀಠೋಪಕರಣಗಳು ಅದರ ಹಿಂದಿನ ಮಾಲೀಕರು, ಪರಿಸರದ ಶಕ್ತಿಯನ್ನು ಜೊತೆಗೆ ಕೊಂಡೊಯ್ಯುತ್ತದೆ. ಪೀಠೋಪಕರಣಗಳು ಹಿಂದೆ ಇರಿಸಿರುವ ಸ್ಥಳದಲ್ಲಿ ನಕಾರಾತ್ಮಕ ಘಟನೆ, ವಿವಾದ ಅಥವಾ ಉದ್ವಿಗ್ನತೆ ಉಂಟಾಗಿದ್ದರೆ ಅದು ಹೊಸ ಸ್ಥಳದಲ್ಲಿಯೂ ಆ ಪರಿಣಾಮವನ್ನು ಬೀರಬಹುದು.

ಹೀಗಾಗಿ ಮನೆಗೆ ತರುವ ಹಳೆಯ ಪೀಠೋಪಕರಣಗಳು ನಕಾರಾತ್ಮಕ ಶಕ್ತಿಯ ಮೂಲವಾಗಬಹುದು. ಬೇರೊಬ್ಬರ ನಕಾರಾತ್ಮಕ ಶಕ್ತಿಯು ಅದರ ಮೂಲಕ ಮನೆಗೆ ಪ್ರವೇಶಿಸಬಹುದು. ಅಲ್ಲದೇ ಇಂತಹ ಪೀಠೋಪಕರಣಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ತಡೆಯಬಹುದು. ಇದರಿಂದ ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯದ ವಾತಾವರಣಕ್ಕೆ ಅಡ್ಡಿಯಾಗುವುದು.

ಆರೋಗ್ಯ ಸಮಸ್ಯೆ

ಹಳೆಯ ಅಥವಾ ಸರಿಯಾಗಿ ನಿರ್ವಹಿಸದ ಪೀಠೋಪಕರಣಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ತಂದರೆ ಅದು ಅಲರ್ಜಿಗಳಿಗೆ ಕಾರಣವಾಗಬಹುದು. ಈ ಪೀಠೋಪಕರಣಗಳ ಮೂಲಕ ಧೂಳು ಮತ್ತು ಕ್ರಿಮಿ ಕೀಟಗಳು ಮನೆಗೆ ಬರಬಹುದು. ಇದು ಮನೆಯಲ್ಲಿ ನಕಾರಾತ್ಮಕ ಕಂಪನಗಳನ್ನು ಹೆಚ್ಚಿಸುತ್ತದೆ. ಕುಟುಂಬ ಸದಸ್ಯರು ವಿವಿಧ ಆರೋಗ್ಯ ಸಮಸ್ಯೆಗಳನ್ನು, ಮಾನಸಿಕ ಒತ್ತಡವನ್ನು ಇದರಿಂದ ಅನುಭವಿಸಬೇಕಾಗುತ್ತದೆ.

old (2)

ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ

ಮನೆಯಲ್ಲಿ ಮುರಿದ ಅಥವಾ ಸರಿಯಾಗಿ ನಿರ್ವಹಿಸದ ಪೀಠೋಪಕರಣಗಳು ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತವೆ. ಇದು ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಪೀಠೋಪಕರಣಗಳು ಮನೆಯ ಸೌಂದರ್ಯವನ್ನು ಕುಗ್ಗಿಸುವುದಲ್ಲದೆ, ಸಮೃದ್ಧಿ ಮತ್ತು ಶಾಂತಿಯ ಹರಿವಿಗೆ ಅಡ್ಡಿಯಾಗಬಹುದು. ಇದು ಮನೆಯಲ್ಲಿ ಹಣದ ಕೊರತೆ, ಅನಗತ್ಯ ವೆಚ್ಚಗಳು ಮತ್ತು ಅನಿರೀಕ್ಷಿತ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಅದರಲ್ಲೂ ವಿಶೇಷವಾಗಿ ಪೀಠೋಪಕರಣಗಳು ಕಳಪೆಯಾಗಿದ್ದರೆ ಅಥವಾ ದೀರ್ಘಕಾಲದವರೆಗೆ ಅದನ್ನು ಬಳಸದಿದ್ದರೆ ಅದು ಮನೆಯ ಶಕ್ತಿ ಚಕ್ರವನ್ನು ಅಸಮತೋಲನಗೊಳಿಸುತ್ತದೆ.

ಸಂಬಂಧಗಳ ಮೇಲೆ ಪ್ರಭಾವ

ಹಳೆಯ ಪೀಠೋಪಕರಣಗಳು ಮನೆ ಮಂದಿಯಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು. ಇದರಿಂದ ಪರಸ್ಪರ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಹಳೆಯ ಪೀಠೋಪಕರಣಗಳನ್ನು ಮಲಗುವ ಸ್ಥಳದಲ್ಲಿ ಇರಿಸಿದರೆ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಸಂಗಾತಿಯೊಂದಿಗೆ ಸಂಬಂಧ ಹದಗೆಡಲು ಕಾರಣವಾಗುತ್ತದೆ.

ಇದನ್ನೂ ಓದಿ: Vastu Tips: ಕಾರಿನಲ್ಲಿ ಯಾವ ದೇವರ ವಿಗ್ರಹ ಇಡಬೇಕು?

ಪ್ರಗತಿಗೆ ಅಡ್ಡಿ

ಹಳೆಯ ಪೀಠೋಪಕರಣಗಳು ಮನೆ ಮಂದಿಯ ಪ್ರಗತಿಗೆ ಅಡ್ಡಿಯಾಗುತ್ತದೆ. ಇದು ವೃತ್ತಿಜೀವನದ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಬಹುದು.

ಏನು ಪರಿಹಾರ?

ಮನೆಯಲ್ಲಿ ಹಳೆಯ ಮತ್ತು ಮುರಿದ ಪೀಠೋಪಕರಣಗಳಿದ್ದರೆ ಅವುಗಳನ್ನು ತೆಗೆದು ಹಾಕುವುದು ಉತ್ತಮ. ಒಂದು ವೇಳೆ ಅಗತ್ಯವಿದ್ದರೆ ಅವುಗಳನ್ನು ದುರಸ್ತಿ ಮಾಡಿ ಬಳಸಿ, ಹೀಗೆ ಮಾಡುವುದರಿಂದ ಮನೆಯಲ್ಲಿ ಶುದ್ಧ ಮತ್ತು ಸಕಾರಾತ್ಮಕ ಶಕ್ತಿಯ ಹರಿವು ಉಳಿಯುತ್ತದೆ. ಇದು ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಗೆ ಉತ್ತಮ. ಅಲ್ಲದೇ ಮನೆಯ ಶಕ್ತಿಯನ್ನು ಸಮತೋಲನದಲ್ಲಿಡಲು ಈ ಪೀಠೋಪಕರಣಗಳ ಸ್ಥಾನಕ್ಕೆ ಗಮನ ಕೊಡುವುದು ಕೂಡ ಬಹು ಮುಖ್ಯ.