ಬೆಂಗಳೂರು: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಉತ್ತರಾಷಾಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕೆಲಸ-ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು, ಗೆಲುವು ಸಾಧಿಸುತ್ತೀರಿ. ಅದೇ ರೀತಿ ಗಜಕೇಸರಿ ಯೋಗದ ಪ್ರತಿಫಲ ಇಂದು ನಿಮಗೆ ಗೋಚರವಾಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಲಿದೆ. ಪ್ರತಿಷ್ಠೆ, ಗೌರವ ಇಂದು ಪ್ರಾಪ್ತಿಯಾಗುತ್ತದೆ. ಉನ್ನತ ಸ್ಥಾನದಲ್ಲಿ ಇರುತ್ತೀರಿ.
ಮಿಥುನ ರಾಶಿ: ಇಂದು ಅಷ್ಟಮಕ್ಕೆ ಗುರು ದೃಷ್ಟಿ ಬೀಳುತ್ತಿದೆ. ಹೀಗಾಗಿ ಮನಸ್ಸಿಗೆ ಬೇಸರವಾಗಬಹುದು. ನಿಮ್ಮ ಪ್ರೀತಿ ಪಾತ್ರರಿಂದಲೇ ನೋವು ಉಂಟಾಗಬಹುದು.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಅಷ್ಟೊಂದು ಒಳ್ಳೆಯ ದಿನ ಅಲ್ಲ, ಕೆಲಸ ಕಾರ್ಯದಲ್ಲಿ ಲಾಭ ಸಿಗೋದಿಲ್ಲ. ಪಾರ್ಟನರ್‌ಶಿಪ್ ವ್ಯವಹಾರದಲ್ಲಿ ಲಾಭ ಸಿಕ್ಕರೂ ನಿಮಗೆ ನಷ್ಟ ಉಂಟಾಗಬಹುದು.
ಅಡುಗೆಮನೆಯ ಈ 5 ವಾಸ್ತು ನಿಯಮ ಪಾಲಿಸಿದರೆ ಮನೆಯಲ್ಲಿ ಹೆಚ್ಚಲಿದೆ ಸುಖ-ಸಮೃದ್ಧಿ
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕೆಲವು ಜನರ ಜತೆ ವೈಮನಸ್ಸು ಮೂಡುವ ಸಾಧ್ಯತೆ ಇದೆ. ಸಹೋದ್ಯೋಗಿಗಳು ಹಾಗೂ ಬಾಸ್ ಜತೆ ಜಗಳ ಉಂಟಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕ್ರಿಯಾತ್ಮಕ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ. ಕಲಾವಿದರಿಗೆ ಧನ ಲಾಭದ ಸೂಚನೆ ಇದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಗಜಕೇಸರಿ ಯೋಗದ ಪ್ರಭಾವ ನಿಮಗೆ ಇರಲಿದ್ದು, ಯಶಸ್ಸು ನಿಮಗೆ ಸಿಗಬಹುದು.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಯಶಸ್ಸು ದೊರೆಯಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗುತ್ತವೆ. ನೆಮ್ಮದಿಯಾಗಿ ಇಂದು ದಿನ ಕಳೆಯುತ್ತೀರಿ.
ಮಕರ ರಾಶಿ: ಮಕರ ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ. ನಾಯಕತ್ವವಹಿಸುವ ದಿನ ನಿಮ್ಮದಾಗಬಹುದು. ಕೆಲಸ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ಕಾಣುತ್ತೀರಿ.
ಕುಂಭ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕೆಲವೊಂದು ವಿಚಾರದಲ್ಲಿ ತೊಂದರೆ ಉಂಟಾದರೂ ಪರಿಹಾರ ಸಿಗಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಲಾಭ ಸ್ಥಾನದಲ್ಲಿ ಗುರು ಇದ್ದಾನೆ. ಇಷ್ಟಾರ್ಥ ಸಿದ್ಸಿಯಾಗಲಿದ್ದು ಧನಾಗಮನವಾಗುತ್ತದೆ.