ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ ಚತುರ್ಥಿ ತಿಥಿ, ಆರಿದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಇಂದು ನಿಮ್ಮ ಕಾರ್ಯಚಟುವಟಿಕೆಯಲ್ಲಿ ಅತೀ ಹೆಚ್ಚಿನ ಹುರುಪು ನಿಮಗೆ ಸಿಗುತ್ತದೆ. ಆದರೆ ಕೆಲವೊಂದು ವಿಚಾರವಾಗಿ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ ಇರುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ನಿಮ್ಮ ಮನೆಯಲ್ಲಿ ಇಷ್ಟವಾಗದೇ ಇರುವ ಘಟನೆಗಳು ನಡೆಯಬಹುದು. ನಿಮ್ಮ ಕುಟುಂಬದ ವಿಚಾರದಲ್ಲಿ ಕೂಡ ನಿಮಗೆ ಬೇಸರ ಉಂಟಾಗಬಹುದು.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ನಿಮ್ಮ ವ್ಯಕ್ತಿತ್ವದಲ್ಲಿ ದೊಡ್ಡ ಬದಲಾವಣೆ ಉಂಟಾಗಬಹುದು. ಅದೇ ರೀತಿ ವಿವಾದಾತ್ಮಕ ತಿರುವು ಕೂಡ ನೀವು ಪಡೆಯಬಹುದು.
ಕಟಕ ರಾಶಿ: ಕಟಕ ರಾಶಿ ಅವರಿಗೆ ಪ್ರೀತಿ ಪ್ರೇಮ ವಿಚಾದಲ್ಲಿ ನೋವು ಉಂಟಾಗುವ ಸಾಧ್ಯತೆ ಇರುತ್ತದೆ. ಶತ್ರುಗಳ ಕಾಟ ಜಾಸ್ತಿಯಾಗಲಿದ್ದು ಬೇಡವಾದ ವಿಚಾರದಲ್ಲಿ ನೀವು ಸಿಲುಕಿಕೊಳ್ಳಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಗುಂಪಿನ ವ್ಯವಹಾರದಲ್ಲಿ ಯಶಸ್ಸು ಕಾಣಬಹುದು. ಹೊಸ ಸ್ನೇಹಿತರ ಪರಿಚಯ ಆಗಲಿದ್ದು ಖುಷಿದಿಂದ ದಿನವನ್ನು ಕಳೆಯಲಿದ್ದೀರಿ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಒಮ್ಮೆಲೆ ಯಶಸ್ಸು ಕಾಣುತ್ತದೆ. ಮನಸ್ಸಿಗೆ ನೆಮ್ಮದಿ ಇದ್ದು ನೀವು ಎನಿಸದಂತಹ ಬದಲಾವಣೆಯೊಂದು ಇಂದು ಕಂಡು ಬರಬಹುದು
Vastu Tips: ವಾಸ್ತು ದೋಷ , ಆರೋಗ್ಯ: ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ? ಇಲ್ಲಿದೆ ಮಾಹಿತಿ
ತುಲಾ ರಾಶಿ: ತುಲಾ ಅವರಿಗೆ ಇಂದು ಭಾಗ್ಯೋದಯವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಅತೀ ಹೆಚ್ಚಿನ ಯಶಸ್ಸು ನಿಮಗೆ ಪ್ರಾಪ್ತಿಯಾಗುತ್ತದೆ.
ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಮನಸ್ಸಿಗದ ಅತೀ ಕ್ಲೇಷಕರವಾದ ದಿನವಾಗಿದೆ. ಸ್ನೇಹಿತರಿಂದ ಹಾಗೂ ಬಂಧು ಮಿತ್ರರಿಂದ ಬೇಸರ ಉಂಟಾಗುವ ಸಾಧ್ಯತೆ ಇರುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಪಾರ್ಟ್ನರ್ಸ್ ಶೀಲ್ ವ್ಯವಹಾರದಲ್ಲಿ ಯಶಸ್ಸು ಸಿಗಬಹುದು.ಅದೇ ರೀತಿ ಮಿತ್ರತ್ವದಲ್ಲಿ ಕೂಡ ಪ್ರಚೋದನೆ ಸಿಗಬಹುದು
ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ ಬಿಸೆನೆಸ್ ವ್ಯವಹಾರದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.
ಕುಂಭರಾಶಿ: ಈ ರಾಶಿಗೆ ಇಂದು ಮಕ್ಕಳ ವಿಚಾರವಾಗಿ ತೊಂದರೆ ಉಂಟಾಗಬಹುದು. ನಿಮಗೆ ತಿಳಿಯದಂತೆ ಮಕ್ಕಳು ಏನೋ ಒಂದು ವ್ಯವಹಾರದಲ್ಲಿ ಪಾಲ್ಗೊಳ್ಳಬಹುದು.
ಮೀನ ರಾಶಿ: ಮೀನ ರಾಶಿಗೆ ಇಂದು ಆಸ್ತಿ ಪಾಸ್ತಿ ವಿಚಾರವಾಗಿ ಎಚ್ಚರಿಕೆ ಅಗತ್ಯ. ಕೋರ್ಟ್ ಕಛೇರಿ ವ್ಯವಹಾರದಲ್ಲೂ ಅತೀ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು.