ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ,ವಸಂತ ಋತು ಚೈತ್ರ ಮಾಸೆ, ಕೃತಿಕಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಯವರಿಗೆ ಸಂಸಾರದ ವಿಚಾರದಲ್ಲಿ ತೊಂದರೆಯಾಗಬಹುದು. ಎಲ್ಲವೂ ತನ್ನದೇ ಯೋಚನೆಯಂತೆ ನಡೆಯಬೇಕು ಎನ್ನುವ ಮನೋಭಾವ ನಿಮ್ನಲ್ಲಿ ಇದ್ದರೂ ಸರಿಯಾದ ಮಾರ್ಗದಲ್ಲಿ ನಡೆಯುವುದು ಉತ್ತಮ
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೂ ತನ್ನದೇ ಯೋಚನೆ, ತನ್ನದೇ ಭಾವನೆಗೆ ಹೆಚ್ಚಿನ ಒತ್ತನ್ನು ನೀಡುತ್ತೀರಿ. ಆದ್ದರಿಂದ ಬೇರೆಯವರ ಪರಿಸ್ಥಿತಿಯನ್ನು ನೀವು ಅರ್ಥಮಾಡಿ ಕೊಳ್ಳಬೇಕಾಗುತ್ತದೆ
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ನಿಮ್ಮ ಪ್ರೀತಿ ಪಾತ್ರರಿಂದ ಯಾವುದೇ ಸಹಕಾರ ಸಿಗುವುದಿಲ್ಲ.
ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:
ಕಟಕ ರಾಶಿ: ಕಟಕ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿ ಯಾಗುತ್ತದೆ. ಬಂಧು- ಬಾಂಧವರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಾರ್ಯಕ್ಷೇತ್ರ ಹಾಗೂ ಸಂಸಾರವನ್ನು ಸಮತೋಲನದಲ್ಲಿ ಇಡಲು ಕಷ್ಟವಾಗಬಹುದು. ಆದರೂ ಸರಿಯಾದ ರೀತಿಯಲ್ಲಿ ನಿಭಾಯಿಸಲು ನೀವು ಪ್ರಯತ್ನ ಪಡಬೇಕು.
Vastu Tips: ಸುಖ ದಾಂಪತ್ಯಕ್ಕೆ ನಾಂದಿ ಹಾಡಲಿದೆ ರಾಧಾ–ಕೃಷ್ಣರ ಚಿತ್ರ; ಆದರೆ ವಾಸ್ತು ನಿಯಮ ಪಾಲಿಸಿದ್ರೆ ಮಾತ್ರ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಖುಷಿಯಾದ ದಿನವನ್ನು ಕಳೆಯಲಿದ್ದೀರಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಮಧ್ಯಾಹ್ನ ದಿಂದ ಸಂಜೆಯವರೆಗೂ ನೆಮ್ಮದಿ ಸಿಗುತ್ತದೆ..
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದೂ ಎಲ್ಲ ಕೆಲಸ ಕಾರ್ಯಗಳು ನಡೆಯಬಹುದು. ಆದರೆ ಸಂಜೆಯ ಸಮಯದಲ್ಲಿ ಪ್ರೀತಿ ಪಾತ್ರರ ಜೊತೆ ಕಲಹ ಉಂಟಾಗಬಹುದು.
ಧನಸ್ಸು ರಾಶಿ: ಧನಸ್ಸು ರಾಶಿಗೆ ಸಂಜೆಯವರೆಗೂ ನಾನಾ ರೀತಿಯ ತೊಂದರೆಗಳು ಕಾಡುತ್ತವೆ. ಸಂಜೆಯ ನಂತರ ಮನಸ್ಸಿಗೆ ನೆಮ್ಮದಿ ಇದ್ದು ಶತ್ರುಗಳನ್ನು ಹಿಮ್ಮೆಟ್ಟಬಹುದು. ಆರೋಗ್ಯದಲ್ಲೂ ಸುಧಾರಣೆ ಕಂಡು ಬರುತ್ತದೆ
ಮಕರ ರಾಶಿ: ಮಕರ ರಾಶಿಯವರು ಹಣ ಕಾಸಿನ ಬಗ್ಗೆ ಹೆಚ್ಚಿನ ಯೋಚನೆ ಮಾಡಬೇಕಾಗುತ್ತದೆ. ಅದೇ ರೀತಿ ಸಂಸಾರದ ಬಗ್ಗೆಯೂ ಜವಾಬ್ದಾರಿ ಇರಬೇಕಾಗುತ್ತದೆ.
ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಸೋಷಿಯಲ್ ಮೀಡಿಯಾ, ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಉತ್ತಮವಾಗಿದೆ. ಆತ್ಮವಿಶ್ವಾಸ ಕೂಡ ಚೆನ್ನಾಗಿ ಇರುತ್ತದೆ.
ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಕೂಡ ಅತೀ ಹೆಚ್ಚಿನ ಯಶಸ್ಸು ನಿಮಗೆ ದೊರೆಯುತ್ತದೆ.