ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಆಗಸ್ಟ್‌ 26, 2026: ಇಂದು ಹೊಸ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ

Horoscope Today August 26th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ತ್ರಯೋದಶಿ ತಿಥಿ, ಶ್ರವಣ ನಕ್ಷತ್ರದ, ಆಗಸ್ಟ್ 26ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಇಂಟರ್‌ನೆಟ್ ಚಿತ್ರ

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಶ್ರವಣನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಹೊಸ ಕೆಲಸಗಳಿಗೆ ಅವಕಾಶಗಳು ಸಿಗುವ ದಿನವಾಗಿದೆ. ಆದರೆ ಹಣಕಾಸು ವ್ಯವಹಾರದಲ್ಲಿ ಜಾಗೃತಿ ಅಗತ್ಯವಾಗಿ ಬೇಕು.

ವೃಷಭ ರಾಶಿ: ಈ ರಾಶಿಯವರು ಇಂದು ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು‌. ಅದೇ ರೀತಿ ಹಳೆಯ ಬಾಕಿ ಹಣ ಕೂಡ ನಿಮ್ಮ ಕೈ ಸೇರುತ್ತದೆ.

ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ನಿಮ್ಮ ಪರಿಶ್ರಮ ಹಾಗೂ ಪ್ರಯತ್ನಗಳಿಗೆ ಉತ್ತಮ ಫಲ ಸಿಗುತ್ತದೆ. ಅಂದುಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಅದೇ ರೀತಿ ಒತ್ತಡಗಳು ಇಂದು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಇಂದು ಕುಟುಂಬದ ಜತೆಗೆ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು. ವ್ಯವಹಾರದಲ್ಲೂ ನೀವು ಅಂದುಕೊಂಡ ಮಟ್ಟದಲ್ಲಿ ಇಂದು ಲಾಭ ಗಳಿಸುತ್ತೀರಿ‌.

ಈ ವಸ್ತುಗಳನ್ನು ಉಡುಗೊರೆಗಳನ್ನು ನೀಡಬೇಡಿ ಎನ್ನುತ್ತದೆ ವಾಸ್ತು ಶಾಸ್ತ್ರ!

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಕೆಲಸದಲ್ಲಿ ವಿಳಂಬವಾಗಬಹುದು.‌ ಆದರೆ ಇಂದು ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳಿತಲ್ಲ.

ತುಲಾ ರಾಶಿ: ತುಲಾ ರಾಶಿಯವರಿಗೆ ಹೊಸ ಸಂಪರ್ಕಗಳು ಇಂದು ಹೆಚ್ಚಾಗಬಹುದು. ದಾಂಪತ್ಯ ಜೀವನದಲ್ಲಿ ಇಂದು ಹೆಚ್ಚಿನ ನೆಮ್ಮದಿಯನ್ನು ನೀವು ಕಾಣುತ್ತೀರಿ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ಹೂಡಿಕೆ ಮಾಡುವ ಕೆಲಸದಲ್ಲಿ ಹೆಚ್ಚಿನ ಲಾಭ ಇರುತ್ತದೆ. ಅದೇ ರೀತಿ ವಿದೇಶಕ್ಕೆ ಪ್ರಯಾಣ ಮಾಡುವ ಯೋಗ್ಯವು ಕೂಡ ಇರುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಉದ್ಯೋಗದಲ್ಲಿ ಬದಲಾವಣೆಯನ್ನು ಇಂದು ಕಾಣುತ್ತೀರಿ. ಕುಟುಂಬದಲ್ಲಿ ಕೂಡ ಶುಭ ಕಾರ್ಯಗಳು ನಡೆಯಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕೆಲಸದಲ್ಲಿ ಯಶಸ್ಸು ಹಾಗೂ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಆದರೆ ಅನಗತ್ಯ ಖರ್ಚನ್ನು ನೀವು ತಪ್ಪಿಸಬೇಕಾಗುತ್ತದೆ.

ಕುಂಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಲಿದೆ. ಸ್ನೇಹಿತರಿಂದ ಬೇಕಾದ ನೆರವು ಸಿಗುತ್ತದೆ. ಆದರೆ ಖರ್ಚಿನ ಮೇಲೆ ನಿಯಂತ್ರಣ ಮಾಡುವುದು ಅಗತ್ಯ.

ಮೀನ ರಾಶಿ: ಮೀನ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ವೃತ್ತಿಯಲ್ಲಿ ಲಾಭ. ಆದರೆ ಗೊಂದಲಗಳು ಹೆಚ್ಚಾಗಬಹುದು.