ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಮಘಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಹಣಕಾಸು ವಿಚಾರದಲ್ಲಿ ಲಾಭವಾಗಲಿದ್ದು, ಹೂಡಿಕೆಯಿಂದ ಆದಾಯ ಗಳಿಸುತ್ತೀರಿ. ಸ್ನೇಹಿತರಿಂದ ಇಂದು ಸಂತೋಷದ ಸುದ್ದಿ ನಿಮಗೆ ಬರುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಹಾಗೂ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಕೆಲಸದ ಸ್ಥಳದಲ್ಲಿ ಉತ್ತಮ ಮನ್ನಣೆ ಸಿಗುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹೊಸ ಯೋಜನೆಗಳಿಗೆ ಇಂದು ಪ್ಲ್ಯಾನ್ ಮಾಡಿಕೊಳ್ಳುತ್ತೀರಿ. ಸ್ನೇಹಿತರ ಸಹಾಯದಿಂದ ಕೆಲಸ ಪೂರ್ಣಗೊಳ್ಳುತ್ತದೆ.
ಕಟಕ ರಾಶಿ: ನೆಮ್ಮದಿಯ ದಿನವಾಗಲಿದ್ದು, ಮಕ್ಕಳಿಂದ ಶುಭ ಸುದ್ದಿ ಕೇಳಿ ಬರುತ್ತದೆ. ಆರೋಗ್ಯದಲ್ಲೂ ಇಂದು ಸುಧಾರಣೆಯನ್ನು ಕಾಣುತ್ತೀರಿ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಬಹುದಿನದಿಂದ ಅಂದುಕೊಂಡ ಕೆಲಸ ಇಂದು ಸಕ್ಸಸ್ ಆಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಿದ್ದರೂ ಅನಗತ್ಯ ಖರ್ಚು ವೆಚ್ಚ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಇಂದು ಯಶಸ್ಸಿನ ಫಲ ಸಿಗುತ್ತದೆ.
ತುಲಾ ರಾಶಿ: ತುಲಾ ರಾಶಿಯವರು ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತೀರಿ. ಸ್ನೇಹಿತರಿಂದ ಸಹಕಾರ ಸಿಗಲಿದ್ದು, ದಾಂಪತ್ಯ ಜೀವನದಲ್ಲೂ ಸಾಮರಸ್ಯ ಕೂಡಿ ಬರುತ್ತದೆ.
ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ಎಲ್ಲಿರಬೇಕು?
ವೃಶ್ಚಿಕ ರಾಶಿ: ಈ ರಾಶಿಯವರು ಇಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಪಡಬೇಡಿ. ಉದ್ಯೋಗದಲ್ಲಿಯೂ ಬದಲಾವಣೆ ಕಂಡು ಬರಲಿದ್ದು ಯೋಚಿಸಿ ನಿರ್ಧಾರ ಕೈಗೊಳ್ಳಿ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಹಾಗೂ ಹಣಕಾಸಿನ ವಿಚಾರದಲ್ಲಿ ಉತ್ತಮ ಬೆಳವಣಿಗೆ ಸಾಧ್ಯ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದು ಕೊಳ್ಳಬೇಕಾಗುತ್ತದೆ. ನಿಮ್ಮ ಯೋಜನೆಗಳು ಯಶಸ್ವಿಯಾಗಲು ಹಿರಿಯರ ಮಾರ್ಗದರ್ಶನ ಅಗತ್ಯ.
ಕುಂಭ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಸೃಜನಶೀಲತೆ ನಿಮಗೆ ಯಸಸ್ಸು ತಂದುಕೊಡಲಿದೆ. ಹಿಂದಿನ ದಿನಗಳಲ್ಲಿ ಇದ್ದ ತೊಂದರೆ ನಿವಾರಣೆಯಾಗಬಹುದು.
ಮೀನ ರಾಶಿ: ಮೀನ ರಾಶಿಯವರ ಮನಸ್ಸಿನ ಗೊಂದಲಗಳು ದೂರವಾಗಬಹುದು. ಉದ್ಯೋಗದಲ್ಲಿಯೂ ಪ್ರಗತಿಯ ಸೂಚನೆಗಳಿದ್ದು, ಲಾಭ ಗಳಿಸುತ್ತೀರಿ.