ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಅನುರಾಧ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ವೃಶ್ಚಿಕ ರಾಶಿಯಲ್ಲಿ ಇಂದು ಚಂದ್ರ ಪ್ರವೇಶ ಮಾಡುತ್ತಿದ್ದಾನೆ. ಹೀಗಾಗಿ ಹೆಚ್ಚಿನ ರಾಶಿಯವರ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಆದರೆ ಗುರುದೃಷ್ಟಿ ಇರುವುದರಿಂದ ಆಧ್ಯಾತ್ಮಿಕವಾಗಿ ಪ್ರಗತಿ ಕಾಣುತ್ತೀರಿ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಸಪ್ತಮದಲ್ಲಿ ಚಂದ್ರ ಇದ್ದಾನೆ. ಹೀಗಾಗಿ ಅತೀ ಹೆಚ್ಚಿನ ನೆಮ್ಮದಿಯನ್ನು ನೀವು ನೋಡಬಹುದು. ಬೇರೆಯವರು ಎಲ್ಲರೂ ನಿಮಗೆ ಸಹಾಯ ಮಾಡುತ್ತಾರೆ.
ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಉತ್ತಮವಾದ ದಿನವಾಗಲಿದೆ. ಶತ್ರು ನಾಶವಾಗಲಿದೆ. ಗುರು ದೃಷ್ಟಿ ಬೀಳುವುದರಿಂದ ಕೆಲವು ವಿಚಾರದಲ್ಲಿ ಜಾಗೃತಿ ಅಗತ್ಯ. ಅದೇ ರೀತಿ ಆರೋಗ್ಯದಲ್ಲೂ ನೀವು ಗಮನ ನೀಡಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಪಂಚಮದಲ್ಲಿ ಚಂದ್ರ ಇದ್ದಾನೆ. ಹೀಗಾಗಿ ಪ್ರೀತಿ ವಿಚಾರ ಹಾಗೂ ವ್ಯವಹಾರದಲ್ಲಿ ತೊಡಕು ಎದುರಾಗಬಹುದು. ಆದರೆ ಧಾರ್ಮಿಕವಾಗಿ ಸ್ವಲ್ಪ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮಕ್ಕಳಿಗೆ ಇಂದು ಒಳ್ಳೆಯ ಸಮಯ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಚತುರ್ಥದಲ್ಲಿ ಚಂದ್ರ ಇದ್ದಾನೆ. ಮನೆ ಹಾಗೂ ಆಸ್ತಿ ಪಾಸ್ತಿ ವಿಚಾರವಾಗಿ ಇಂದು ತೊಂದರೆ ಎದುರಿಸಬೇಕಾಗಿ ಬರಬಹುದು. ಅದೇ ರೀತಿ ವ್ಯಕ್ತಿತ್ವದಲ್ಲಿಯೂ ಕೆಲವು ಬದಲಾವಣೆ ಮಾಡಬೇಕಾಗಿ ಬರಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಎಲ್ಲ ಕೆಲಸ ಕಾರ್ಯದಲ್ಲಿ ನೀವು ಜಯ ಗಳಿಸುತ್ತೀರಿ. ಬರವಣಿಗೆ ಹಾಗೂ ಮಾತಿನ ಮೂಲಕವೇ ಎಲ್ಲವನ್ನು ಇಂದು ಗೆಲ್ಲುತ್ತೀರಿ.
ಜೇಡ್ ಸಸ್ಯವನ್ನು ಈ ದಿಕ್ಕಿನಲ್ಲಿ ಇಟ್ಟರೆ ಸಂಪತ್ತು ವೃದ್ಧಿ! ಫೆಂಗ್ ಶೂಯಿ ಹೇಳುವ ವಾಸ್ತು ನಿಯಮ ಇದು
ತುಲಾ ರಾಶಿ: ಕುಟುಂಬದವರಿಂದ ಇಂದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸ್ನೇಹಿತರಿಂದ ಧನ ಆಗಮನದ ಸೂಚನೆ ಇದೆ.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಹಿಂದಿನ ಎರಡು ಮೂರು ದಿನಗಳ ತೊಂದರೆ ಎಲ್ಲವೂ ಮಾಯವಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ವ್ಯಯದಲ್ಲಿ ಚಂದ್ರ ಇದ್ದಾನೆ. ಧಾರ್ಮಿಕ ವಿಚಾರವಾಗಿ ಇಂದು ಯಶಸ್ಸು ಕಾಣುತ್ತೀರಿ. ಆದರೆ ಆರೋಗ್ಯದಲ್ಲಿ ನೀವು ಜಾಗರೂಕತೆಯಿಂದ ಇರುವುದು ಒಳಿತು.
ಮಕರ ರಾಶಿ: ಮಕರ ರಾಶಿಯವರಿಗೆ ಲಾಭ ಸ್ಥಾನದಲ್ಲಿ ಚಂದ್ರ ಇರುವುದರಿಂದ ಅತೀ ಉತ್ತಮ ದಿನವಾಗಲಿದೆ. ಧನಾಗಮನದ ಸೂಚನೆ ಇದೆ. ಕಾರ್ಯಕ್ಷೇತ್ರದಲ್ಲಿ ಕೂಡ ಗಜಕೇಸರಿ ಯೋಗ ಪಡೆಯುತ್ತೀರಿ.
ಕುಂಭ ರಾಶಿ: ಈ ರಾಶಿಯವರಿಗೆ ದಶಮ ಭಾವದಲ್ಲಿ ಚಂದ್ರ ಇದ್ದಾನೆ. ಹಾಗಾಗಿ ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುತ್ತೀರಿ. ಆರ್ಥಿಕವಾಗಿಯೂ ಲಾಭ ಪಡೆಯುತ್ತೀರಿ.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ನವಮದಲ್ಲಿ ಚಂದ್ರ ಇದ್ದಾನೆ. ಹೀಗಾಗಿ ಯಾವುದೇ ಕೆಲಸ ಕಾರ್ಯದಲ್ಲಿ ಹಿರಿಯರ ಆಶೀರ್ವಾದ ಬೇಕಾಗುತ್ತದೆ.