ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಆಗಸ್ಟ್‌ 24, 2026: ಇಂದು ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿ ಬರಲಿದೆ

Horoscope Today August 24th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ದ್ವಾದಶಿ ತಿಥಿ, ಪೂರ್ವಾಷಾಢ ನಕ್ಷತ್ರದ, ಆಗಸ್ಟ್ 24ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಇಂಟರ್‌ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಪೂರ್ವಾಷಾಢ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಚುರುಕುತನ ಹೆಚ್ಚಾಗಬಹುದು. ಆದರೆ ಹಣಕಾಸಿನ ವಿಚಾರವಾಗಿ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳುವುದು ಆವಶ್ಯಕ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಕೆಲಸದ ವೇಳೆ ಸಣ್ಣ ವಿವಾದ ಉಂಟಾಗಬಹುದು. ಎಲ್ಲವನ್ನು ನೀವಿಂದು ತಾಳ್ಮೆಯಿಂದ ನಿಭಾಯಿಸಬೇಕಾಗುತ್ತದೆ.

ಮಿಥುನ ರಾಶಿ: ಈ ರಾಶಿಯವರಿಗೆ ಇಂದು ಅದೃಷ್ಟ ಒಲಿಯಲಿದೆ. ಹೊಸ ಅವಕಾಶಗಳು ತೆರೆದುಕೊಳ್ಳಬಹುದು. ಎಲ್ಲರ ಸಹಕಾರ, ಬೆಂಬಲಗಳು ನಿಮಗೆ ಸಿಗಬಹುದು.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಕುಟುಂಬದ ಬೆಂಬಲ ಹೆಚ್ಚಾಗಿ ಸಿಗುತ್ತದೆ. ಅದೇ ರೀತಿ ಬಹುಕಾಲದಿಂದ ಬಾಕಿ ಉಳಿದ ಕೆಲಸಗಳು ಕೂಡ ಪೂರ್ಣಗೊಳ್ಳುತ್ತವೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು. ಆರ್ಥಿಕವಾಗಿ ಇಂದು ಅನುಕೂಲ ತರುವ ದಿನವಾಗಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಚಿಂತೆ ಹೆಚ್ಚಾಗಬಹುದು‌. ಆದರೆ ತಾಳ್ಮೆಯಿಂದ ಕೆಲಸ ಮಾಡಿದರೆ ಅನುಕೂಲವಾಗಲಿದೆ.

ಮನೆಯ ಮುಖ್ಯ ಬಾಗಿಲು ಹೀಗಿದ್ದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ!

ತುಲಾ ರಾಶಿ: ತುಲಾ ರಾಶಿಯವರಿಗೆ ಪ್ರೇಮ, ಪ್ರೀತಿ ವಿಚಾರದಲ್ಲಿ ಒಳಿತಾಗುತ್ತದೆ. ಹೊಸ ಪರಿಚಯದಿಂದಲೂ ಮನಸ್ಸಿಗೆ ಹೆಚ್ಚಿನ ಖುಷಿ, ನೆಮ್ಮದಿ ಸಿಗುತ್ತದೆ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಬಹುಕಾಲದಿಂದ ಉಳಿದ ಕೆಲಸಗಳು ಪೂರ್ಣಗೊಳ್ಳಬಹುದು. ಆರ್ಥಿಕವಾಗಿ ಇಂದು ಅಭಿವೃದ್ಧಿಯಾಗುತ್ತೀರಿ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಉದ್ಯೋಗದಲ್ಲಿ ಅಂದುಕೊಂಡ ಕೆಲಸದಲ್ಲಿ ವೃದ್ಧಿಯನ್ನು ಕಾಣುತ್ತೀರಿ. ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕೆಲಸದಲ್ಲಿ ಯಶಸ್ಸು ಹಾಗೂ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.

ಕುಂಭ ರಾಶಿ: ಈ ರಾಶಿಯವರು ಇಂದು ಹೊಸ ಯೋಚನೆ ಮೂಲಕ ಲಾಭಗಳಿಸಬಹುದು‌. ಅದೇ ರೀತಿ ವೃತ್ತಿಯಲ್ಲಿ ಕೂಡ ಎಲ್ಲರ ಪ್ರಶಂಸೆಯನ್ನು ನೀವು ಗಳಿಸುತ್ತೀರಿ.

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆದರೆ ಭಾವನಾತ್ಮಕವಾಗಿ ಇಂದು ದುರ್ಬಲಗೊಳ್ಳುವ ಸಾಧ್ಯತೆ ಇದೆ.