ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಜೂನ್ 17, 2026: ಈ ರಾಶಿಯವರಿಗೆ ಇಂದು ಗಜಕೇಸರಿ ಯೋಗ ಪ್ರಾಪ್ತಿಯಾಗುವ ದಿನ!

Horoscope Today June 17th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ತೃತೀಯ ತಿಥಿ, ಪುನರ್ವಸು ನಕ್ಷತ್ರದ, ಜೂನ್ 17ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಪುನರ್ವಸು ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.

ಮೇಷ ರಾಶಿ: ಈ ರಾಶಿಗೆ ಇಂದು ನೀವು ಮನೆಯಲ್ಲಿ ನೆಮ್ಮದಿಯನ್ನು ಕಾಣಬಹುದು. ಕಾರ್ಯಕ್ಷೇತ್ರದಲ್ಲಿ ಕೂಡ ಹೆಚ್ಚಿನ ಯಶಸ್ಸು ಕಾಣುತ್ತೀರಿ. ಆಸ್ತಿ ಪಾಸ್ತಿ ವಿಚಾರವಾಗಿ ಕೂಡ ದೊಡ್ಡ ಲಾಭವನ್ನು ನಿಮಗೆ ತಂದುಕೊಡಬಹುದು.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ತೃತೀಯದಲ್ಲಿ ಚಂದ್ರ ಬರುತ್ತಿರುವುದರಿಂದ ಮಾರ್ಕೆಟಿಂಗ್ ವ್ಯವಹಾರ ಹಾಗೂ ಮಾಧ್ಯಮದಲ್ಲಿ ಇರೋರಿಗೆ ಅತೀ ಲಾಭದಾಯಕ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಅತೀ ದೊಡ್ಡ ಹುದ್ದೆಯನ್ನು ನೀವು ಇಂದು ಪಡೆಯುತ್ತೀರಿ.

ಮಿಥುನ ರಾಶಿ: ಇಂದು ಈ ರಾಶಿಗೆ ಅತೀ ಉತ್ತಮವಾದ ದಿನವಾಗಿದೆ. ಮನೆಯಲ್ಲಿ ನೆಮ್ಮದಿ ಹಾಗೂ ಮನಸ್ಸಿನಲ್ಲಿ ನೆಮ್ಮದಿಯನ್ನು ಕಾಣುತ್ತೀರಿ. ಧನ ಆಗಮನ ಸೂಚನೆಗಳು ಕೂಡ ಇಂದು ಇವೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ನಿಮ್ಮ ರಾಶಿಗೆ ಗುರು ಬರುತ್ತಿದ್ದಾನೆ. ಗಜ ಕೇಸರಿ ಯೋಗ ನಿಮ್ಮ ರಾಶಿಗೆ ಬರುವುದರಿಂದ ಹೀಗಾಗಿ ಕೆಲಸ ಕಾರ್ಯದಲ್ಲಿ ಮುಖ್ಯವಾದ ನಿರ್ಧಾರವೊಂದನ್ನು ನೀವು ಕೈಗೊಳ್ಳುತ್ತೀರಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ನಿಮ್ಮ ವ್ಯಯ ಭಾವಕ್ಕೆ ಚಂದ್ರ ಹಾಗೂ ಗುರು ಬರುತ್ತಿದ್ದಾನೆ. ಇದರಿಂದ ಬಹಳ ದೊಡ್ಡದಾದ ಕಷ್ಟವನ್ನು ನೀವು ನೋಡಬಹುದು. ಮುಖ್ಯವಾದ ವ್ಯವಹಾರದಲ್ಲಿ ಹಾಗೂ ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ಒಡಕು ಕಾಣಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಭಾಗ್ಯೋದಯವಾದ ದಿನ ವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬಿಸೆನೆಸ್ ವ್ಯವಹಾರದಲ್ಲಿ ಧನ ಆಗಮನ ಸೂಚನೆಗಳು ಕೂಡ ಇಂದು ಇವೆ‌

ತುಲಾ ರಾಶಿ: ತುಲಾ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮುಖ್ಯವಾದ ಕೆಲಸ ಕಾರ್ಯದಲ್ಲಿ ದೊಡ್ಡದಾದ ಸ್ಥಾನಮಾನ ನಿಮಗೆ ಸಿಗುತ್ತದೆ.

Vastu Tips: ಮನೆಯಲ್ಲಿ ಸುಗಂಧರಾಜ ಗಿಡವನ್ನು ಈ ದಿಕ್ಕಿನಲ್ಲಿ ನೆಟ್ಟರೆ, ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ!

ವೃಶ್ಚಿಕ ರಾಶಿ: ಈ ರಾಶಿಗೆ ಉತ್ತಮವಾದ ದಿನವಾಗಿದೆ..ನಿಮ್ಮ ಬಾಸ್ ಗಳಿಂದ ಒಳ್ಳೆಯದಾದ ಸಂದರ್ಭ ಒದಗಿ ಬರಬಹುದು. ಆದರೆ ನಿಮ್ಮಲ್ಲಿ ವಿನಯತೆ ಹಾಗೂ ಸಮರ್ಪಕ ಭಾವ ಇಂದು ಅಗತ್ಯವಾಗಿರುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಉತ್ತಮವಾದ ದಿನ ವಾಗಿದೆ. ಆದರೆ ಮುಖ್ಯವಾದ ಸಂಬಂಧದಲ್ಲಿ ದೊಡ್ಡದಾದ ಒಡಕು ಒಂದು ಉಂಟಾಗಬಹುದು. ಹೀಗಾಗಿ ಧ್ಯಾನಧಿಗಳನ್ನು ಮಾಡಿ ಸಮಯ ಕಳೆಯಬೇಕು.

ಮಕರ ರಾಶಿ: ಮಕರ ರಾಶಿಯವರಿಗೆ ಸಪ್ತಮ ಸ್ಥಾನಕ್ಕೆ ಗುರು ಬರುತ್ತಿದ್ದಾನೆ. ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ಯಶಸ್ಸಿನ ಜೊತೆಗೆ ಪ್ರೀತಿ ಪಾತ್ರರಿಂದ ಬಹಳ ದೊಡ್ಡದಾದ ಗೌರವ ಇಂದು ಸಿಗಬಹುದು.

ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಆದರೆ ಸ್ನೇಹತರಿಂದ ವೈಮನಸ್ಸು ಕಾಡುವ ಸಾಧ್ಯತೆ ಇರುತ್ತದೆ.‌ ಆರೋಗ್ಯದಲ್ಲಿ ಕೂಡ ಗಮನ ನೀಡಬೇಕು‌

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮಕ್ಕಳಿಗೆ ಇಂದು ಬಹಳ ಪ್ರಗತಿ ಕಾಣುವ ದಿನವಾಗಿದೆ. ಹಣಕಾಸಿನ ವ್ಯವಹಾರದಲ್ಲಿಯೂ ಯಶಸ್ಸು ಸಿಗುತ್ತದೆ.