ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ , ಚತುದರ್ಶಿ ತಿಥಿ, ಶತಭಿಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.
ಮೇಷ ರಾಶಿ: ಇಂದು ಶತಭಿಷಾ ನಕ್ಷತ್ರದ ಅಧಿಪತಿ ರಾಹು ಆಗಿರುವುದರಿಂದ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಗೆ ಇಂದು ಅತ್ಯುತ್ತಮವಾದ ಫಲ ಇರುತ್ತದೆ. ಎಲ್ಲರಿಂದಲೂ ನೆಮ್ಮದಿ ಹಾಗೂ ಗುಂಪು ಕೆಲಸದಿಂದ ಯಶಸ್ಸು ಸಿಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ದೊಡ್ಡದಾದ ಯಶಸ್ಸು ಪ್ರಾಪ್ತಿಯಾಗುತ್ತದೆ. ಹಾಗೂ ಎಲ್ಲದರಲ್ಲೂ ಇಂದು ಜಯವನ್ನು ಕಾಣುತ್ತೀರಿ.
ಮಿಥುನ ರಾಶಿ: ಈ ರಾಶಿಗೆ ನಿಮ್ಮ ಭಾಗ್ಯ ಸ್ಥಾನದಲ್ಲಿ ಏನೋ ಒಂದು ದೊಡ್ಡದಾದ ಬದಲಾವಣೆ ಆಗುತ್ತದೆ. ಅದೇ ರೀತಿ ಕುಟುಂಬದ ವಿರುದ್ಧವಾಗಿ ಏನೋ ಒಂದು ಸಮಸ್ಯೆ ಇಂದು ಸೃಷ್ಟಿಯಾಗಬಹುದು.
ಕಟಕ ರಾಶಿ: ಕಟಕ ರಾಶಿ ಅವರಿಗೆ ಬಹಳನೇ ಬೇಸರವಾಗುವ ದಿನ ನಿಮ್ಮದು ಆಗುತ್ತದೆ. ಆದರೆ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದೆ ಭಗವಂತನ ಧ್ಯಾನ ಮಾಡುವ ಮೂಲಕ ಯಶಸ್ಸುಗಳಿಸಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಇಂದು ಸ್ನೇಹ ಸಂಬಂಧದಲ್ಲಿ ದೊಡ್ಡ ಬದಲಾವಣೆ ಆಗಬಹುದು. ಅಂದ್ರೆ ಸಂಗಾತಿ, ಅಥವಾ ಸ್ನೇಹಿತರಲ್ಲಿ ಒಡಕು ಉಂಟಾಗುವ ಸಾಧ್ಯತೆಗಳು ಹೆಚ್ಚು ಇರುತ್ತವೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಶತ್ರು ನಾಶ ಹಾಗೂ ಶತ್ರು ಧ್ವಂಸ ವಾಗಲಿದೆ.ಆರೋಗ್ಯದಲ್ಲೂ ಕೂಡ ಸುಧಾರಣೆ ಕಂಡು ಬರುತ್ತದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ದೊಡ್ಡದಾದ ಬದಲಾವಣೆ ಸಾಧ್ಯತೆ ಇರುತ್ತದೆ. ಪ್ರೇಮ,ಪ್ರೀತಿ ವಿಚಾರದಲ್ಲಿ ತೊಂದರೆ ಆಗಬಹುದು. ಬುದ್ದಿವಂತಿಕೆಯಿಂದ ಮಾಡುವ ಕೆಲಸದಲ್ಲಿ ಮಾತ್ರ ಯಶಸ್ಸು ಸಿಗುತ್ತದೆ
Vastu Tips: ಮನೆಗೆ ಶುಭ ತರೋ ಲಿವಿಂಗ್ ರೂಮ್ ವಾಸ್ತು ಹೇಗಿರಬೇಕು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ
ವೃಶ್ಚಿಕ ರಾಶಿ: ಈ ರಾಶಿಗೆ ಸಂಸಾರದಲ್ಲಿ ದೊಡ್ಡ ಬದಲಾವಣೆ ಆಗಬಹುದು.ಬಿಸೆನೆಸ್ ವ್ಯವಹಾರದಲ್ಲಿ ನಷ್ಟ, ಮೋಸ ನಡೆಯಬಹುದು. ತಾಯಿಯ ಆರೋಗ್ಯ ಬಗ್ಗೆ ಜಾಗೃತಿ ವಹಿಸಿ
ಧನಸ್ಸು ರಾಶಿ: ಧನಸ್ಸು ರಾಶಿಗೆ ಉತ್ತಮವಾದ ದಿನವಾಗಿದೆ. ಸೋಷಿಯಲ್ ಮೀಡಿಯಾ, ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಲಾಭದಾಯಕವಾಗಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಭಾಗ್ಯೋದಯವಾದ ದಿನವಾಗಿದೆ. ಬಹಳನೇ ಸಂತೋಷಕರವಾದ ದಿನವನ್ನು ಕಳೆಯಬಹುದು. ಆದರೆ ಹಣಕಾಸಿನ ವಿಚಾರವಾಗಿ ಜಾಗೃತಿ ಮಾಡಿ
ಕುಂಭರಾಶಿ: ಈ ರಾಶಿಗೆ ವ್ಯಕ್ತಿತ್ವದಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳಬಹುದು...ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಹಿರಿಯರ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ
ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ. ಪ್ರೀತಿ ಪ್ರೇಮ ವಿಚಾರದಲ್ಲಿ ಖುಷಿ ಕಾಣುತ್ತೀರಿ. ಆದರೆ ವೈಯಕ್ತಿಕವಾದ ಕೆಲವೊಂದು ವಿಚಾರದಲ್ಲಿ ನೀವು ಜಾಗೃತಿ ವಹಿಸಿ.. ಆಧ್ಯಾತ್ಮಿಕವಾಗಿ ನೀವು ಯಶಸ್ಸು ಕಾಣುತ್ತೀರಿ.