ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Garuda Purana: ನಾವು ಮಾಡುವ ಈ ತಪ್ಪುಗಳಿಗೆ ಸಾವಿನ ನಂತರ ಕಾದಿದೆ ಘೋರ ಶಿಕ್ಷೆ!

ಸಾವಿನ ಬಳಿಕದ ಘಟನೆಗಳ ವರ್ಣನೆ ʼಗರುಡ ಪುರಾಣʼ ಗ್ರಂಥದಲ್ಲಿ ವಿವರವಾಗಿ ನಮೂದಿಸಲ್ಪಟ್ಟಿದೆ. ವ್ಯಕ್ತಿಯೊಬ್ಬ ತನ್ನ ಜೀವಮಾನದಲ್ಲಿ ಮಾಡಿದ ಒಳ್ಳೆಯ ಕೆಲಸಗಳಿಗೆ ‘ಫಲ’ಗಳನ್ನು ಮತ್ತು ತಪ್ಪು ಕೆಲಸಗಳಿಗೆ ಶಿಕ್ಷೆಯನ್ನು ಪಡೆದುಕೊಳ್ಳುವ ವಿಚಾರವನ್ನು ಇದರಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ಗರುಡ ಪುರಾಣ

ಬೆಂಗಳೂರು: ಸಾವಿನ ಬಗ್ಗೆ ನಮಗೆ ಅಪರಿಮಿತ ಕುತೂಹಲವಿದೆ. ಸಾವಿನ ನಂತರ ಮೃತ ವ್ಯಕ್ತಿಗೆ ಏನಾಗುತ್ತದೆ? ನಮ್ಮ ದೇಹದೊಳಗಿರುವ ಆತ್ಮ ಏನಾಗುತ್ತದೆ? ಎನ್ನುವ ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡುತ್ತದೆ. ಹಿಂದು (Hindu Religion) ಸೇರಿದಂತೆ ವಿವಿಧ ಧರ್ಮಗಳಲ್ಲಿ ವಿವರಿಸಲಾಗಿರುವ ‘ಸಾವಿನ ನಂತರದ ಬದುಕು’ ಅಥವಾ ಸಾವಿನ ನಂತರ ಆತ್ಮ ಸಾಗುವ ‘ಆ’ ಲೋಕ ಇರುವುದು ನಿಜವೇ? ಅಥವಾ ವ್ಯಕ್ತಿಯೊಬ್ಬನ ಸಾವಿನೊಂದಿಗೆ ಎಲ್ಲವೂ ಅಂತ್ಯವಾಗುತ್ತದೆಯೇ? ಹೀಗೆ ಸಾವು ಮತ್ತು ಸಾವಿನ ನಂತರದ ವಿಚಾರಗಳ ಬಗ್ಗೆ ಸಾವಿರಾರು ಪ್ರಶ್ನೆಗಳು ನಮ್ಮನ್ನೆಲ್ಲ ಕಾಡುತ್ತಿರುತ್ತದೆ.

ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಜ್ಞಾನಿಗಳು, ಮಹರ್ಷಿಗಳು, ತಪಸ್ವಿಗಳು ನಿರಂತರವಾಗಿ ಪ್ರಯತ್ನಿಸಿದ್ದಾರೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಒಂದು ಹಂತದ ಸಮಾಧಾನಕರ ಉತ್ತರವನ್ನೂ ಸಹ ಅವರೆಲ್ಲರೂ ಪಡೆದುಕೊಂಡಿದ್ದಾರೆ.

ಸಾವಿನ ನಂತರ ಆತ್ಮದ ಪಯಣದ ಬಗ್ಗೆ ಹಿಂದು ಧರ್ಮದಲ್ಲಿ ವಿವರವಾಗಿ ಚರ್ಚಿಸಿರುವುದು ‘ಗರುಡ ಪುರಾಣ’ (Garuda Purana) ಎಂಬ ಗ್ರಂಥದಲ್ಲಿ. ಜೀವನದಲ್ಲಿ ವ್ಯಕ್ತಿಯೊಬ್ಬ ತಪ್ಪುಗಳನ್ನೇ ಮಾಡದೆ ಸರಿಯಾದ ದಾರಿಯಲ್ಲಿ ಬಾಳಿ ಬದುಕಬೇಕೆಂದಿದ್ದರೆ ಆ ವ್ಯಕ್ತಿ ʼಗರುಡ ಪುರಾಣʼವನ್ನು ಓದಿದರೆ ಸಾಕು ಎಂಬ ಮಾತಿದೆ. ಯಾಕೆಂದರೆ ವ್ಯಕ್ತಿಯ ಸಾವಿನ ಬಳಿಕದ ಘಟನೆಗಳ ವರ್ಣನೆ ಈ ʼಗರುಡ ಪುರಾಣʼದಲ್ಲಿ ವಿವರವಾಗಿ ನಮೂದಿಸಲ್ಪಟ್ಟಿವೆ. ವ್ಯಕ್ತಿಯೊಬ್ಬ ತನ್ನ ಜೀವಮಾನದಲ್ಲಿ ಮಾಡಿದ ಒಳ್ಳೆಯ ಕೆಲಸಗಳಿಗೆ ‘ಫಲ’ಗಳನ್ನು ಮತ್ತು ತಪ್ಪು ಕೆಲಸಗಳಿಗೆ ಶಿಕ್ಷೆಯನ್ನು ಪಡೆದುಕೊಳ್ಳುವ ವಿಚಾರವನ್ನು ಈ ʼಗರುಡ ಪುರಾಣʼದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಈ ಲೇಖನದಲ್ಲಿ ಮನುಷ್ಯರು ಸಾಮಾನ್ಯವಾಗಿ ಮಾಡುವ ತಪ್ಪು, ಅದಕ್ಕೆ ವಿಧಿಸಲಾಗುವ ಶಿಕ್ಷೆಗಳ ಕುರಿತು ಚರ್ಚಿಸಲಾಗಿದೆ.

ತಮಿಶ್ರಮ್

ಇನ್ನೊಬ್ಬರ ಭಾವನೆಗಳ ಜತೆ ಆಟವಾಡುವವರು, ಇನ್ನೊಬ್ಬರ ನಂಬಿಕೆಗೆ ಮೋಸ ಮಾಡುವವರು, ಇನ್ನೊಬ್ಬರಿಗೆ ಮೋಸ ಮಾಡುವವರು ಅಥವಾ ಇನ್ನೊಬ್ಬರ ಸ್ವತ್ತುಗಳನ್ನು ಕದಿಯುವವರು ತಮ್ಮ ಸಾವಿನ ಬಳಿಕ ತಮಿಶ್ರಮ್‌ಗೆ ತೆರಳುತ್ತಾರೆ ಎಂದು ʼಗರುಡ ಪುರಾಣʼದಲ್ಲಿ ಹೇಳಲಾಗಿದೆ. ಇಲ್ಲಿ ಯಮದೂತರು ಅಂತವರನ್ನು, ಅವರು ತಾವು ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡುವವರೆಗೆ ದಂಡಿಸುತ್ತಾರೆ. ಈ ಮೇಲೆ ಹೇಳಿದ ತಪ್ಪುಗಳನ್ನು ಮಾಡಿದ ಆತ್ಮಗಳನ್ನು ಯಮದೂತರು ಕಟ್ಟಿ ಹಾಕಿ ದಂಡಿಸುತ್ತಾರೆ ಮತ್ತು ಈ ಶಿಕ್ಷೆಯ ಸಂದರ್ಭದಲ್ಲಿ ಆತ್ಮಕ್ಕೆ ಯಾವುದೇ ವಿಶ್ರಾಂತಿಯನ್ನು ನೀಡಲಾಗುವುದಿಲ್ಲ.

ರೌರವಂ

ಇನ್ನು ಕಳ್ಳತನ ಮಾಡಿದವರಿಗೆ ಯಮಲೋಕದಲ್ಲಿ ಸಿಗುವ ಶಿಕ್ಷೆ ಘೋರವಾದುದು. ಇನ್ನೊಬ್ಬರ ಆಸ್ತಿ, ಸಂಪತ್ತು, ಹಣ ಅಥವಾ ಇನ್ಯಾವುದೇ ವಸ್ತುಗಳನ್ನು ಕಳ್ಳವು ಮಾಡಿದವರ ಆತ್ಮ ಸಾವಿನ ಬಳಿಕ ರೌರವಕ್ಕೆ ಹೋಗುತ್ತದೆ. ಅಲ್ಲಿ ಹಾವುಗಳಿಂದ ಶಿಕ್ಷೆಯನ್ನು ನೀಡಲಾಗುತ್ತದೆ.

ಸೂರ್ಯ ಮುಳುಗಿದ ನಂತರ ಮಾಡುವ ಈ ಕೆಲಸಗಳು ನಿಮ್ಮ ಮನೆಗೆ ದಾರಿದ್ರ್ಯ ತರಲಿವೆ

ಕಾಳಸೂತ್ರಂ

ವ್ಯಕ್ತಿಯೊಬ್ಬ ತನ್ನ ಜೀವಿತಾವಧಿಯಲ್ಲಿ ಇನ್ನೊಬ್ಬರಿಗೆ ಅಗೌರವ ತೋರಿದಲ್ಲಿ ಮತ್ತು ಅನಿಯಂತ್ರಿತ ಸಿಟ್ಟನ್ನು ಹೊಂದಿದ್ದಲ್ಲಿ, ಅಂತಹ ವ್ಯಕ್ತಿಯ ಆತ್ಮವು ಸಾವಿನ ಬಳಿಕ ಕಾಳಸೂತ್ರಂಗೆ ಹೋಗುತ್ತದೆ. ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ ನಮ್ಮ ಹಿರಿಯರಿಗೆ ಅಗೌರವ ತೋರಿದಲ್ಲಿ ಮತ್ತು ಅವರನ್ನು ಕಟು ಶಬ್ದಗಳಲ್ಲಿ ನಿಂದಿಸಿದ್ದಲ್ಲಿ ಕಾಳಸೂತ್ರಕ್ಕೆ ಕಳುಹಿಸಲಾಗುತ್ತದೆ. ಇದು ಭಯಂಕರ ಬಿಸಿಯಾಗಿರುವ ಪ್ರದೇಶವಾಗಿದ್ದು, ಇಲ್ಲಿ ಅಂತಹ ತಪ್ಪಿತಸ್ಥ ಆತ್ಮವನ್ನು ಸಹಿಲಸಾಧ್ಯವಾದ ಬಿಸಿಯ ನಡುವೆ ಓಡುವಂತೆ ಮಾಡಲಾಗುತ್ತದೆ.

ಅಂಧಕೂಪಂ

ವ್ಯಕ್ತಿಯೊಬ್ಬನ ಜೀವಿತಾವಧಿಯಲ್ಲಿ ಎಲ್ಲವೂ ಇದ್ದು ಅಗತ್ಯವಿದ್ದವರ ಸಹಾಯಕ್ಕೆ ಒದಗಿಲ್ಲದೇ ಇದ್ದಲ್ಲಿ, ಅಂತವರು ತಮ್ಮ ಸಾವಿನ ಬಳಿಕ ಅಂಧಕೂಪಂಗೆ ತೆರಳುತ್ತಾರೆ. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡವರು, ಇತರರಿಗೆ ಸಹಾಯ ಮಾಡದವರು, ಮತ್ತು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದೇ ಇದ್ದವರು ಈ ಸ್ಥಳದಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ಅಂತಹ ಆತ್ಮಗಳನ್ನು ಇಲ್ಲಿ ಕಾಡು ಮೃಗಗಳು, ಕೀಟಗಳು ಮತ್ತು ಸರೀಸೃಪಗಳು ನಿರಂತರವಾಗಿ ಕಾಡಿ ಶಿಕ್ಷೆಗೊಳಪಡಿಸುತ್ತವೆ.

ವಿಸಾಸನಂ

ಇತರರನ್ನು ತನಗಿಂತ ಕೀಳಾಗಿ ಕಂಡ ವ್ಯಕ್ತಿಗಳ ಆತ್ಮ ಸಾವಿನ ಬಳಿಕ ವಿಸಾಸನಂನಲ್ಲಿ ಶಿಕ್ಷೆಗೊಳಪಡುತ್ತದೆ. ಕೀರ್ತಿ, ಸಂಪತ್ತು, ಅಂತಸ್ತು ಮತ್ತು ರೂಪ ಮದದಿಂದ ಕೊಬ್ಬಿ ಇನ್ನೊಬ್ಬರನ್ನು ಅಪಹಾಸ್ಯ ಮಾಡಿದ ಮತ್ತು ಅವರನ್ನು ಅವಮಾನ ಮಾಡಿದ ವ್ಯಕ್ತಿಗಳ ಆತ್ಮಗಳು ಇಲ್ಲಿ ಶಿಕ್ಷೆಯನ್ನನುಭವಿಸುತ್ತವೆ. ಇಲ್ಲಿ ಅಂತಹ ಆತ್ಮಗಳನ್ನು ಯಮಕಿಂಕರರು ಥಳಿಸಿ, ವಿಧ ವಿಧವಾಗಿ ಹಿಂಸಿಸುತ್ತಾರೆ.