ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಪೂರ್ವಾಷಢ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಕೆಲಸ ಕಾರ್ಯದಲ್ಲಿ ಇಂದು ಹೊಸ ಅವಕಾಶಗಳು ದೊರೆಯಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಬಹಳಷ್ಟು ಎಚ್ಚರಿಕೆ ಕಾಯ್ದುಕೊಳ್ಳುವುದು ಅಗತ್ಯ.
ವೃಷಭ ರಾಶಿ: ಇಂದು ಮನಸ್ಸು ಸ್ವಲ್ಪ ಭಾವುಕತೆಯಿಂದ ಕೂಡಿರಬಹುದು. ಆದರೆ ಇಂದು ನಿಮ್ಮ ಪ್ರಯತ್ನಗಳಿಗೆ ಸರಿಯಾದ ಲಾಭ ಸಿಗುವ ಸಾಧ್ಯತೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಯಶಸ್ಸು.
ಮಿಥುನ ರಾಶಿ: ಇಂದು ಕೆಲವೊಂದು ವಿಚಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿನ. ಉದ್ಯೋಗದಲ್ಲಿ ಮೇಲಧಿಕಾರಿಗಳ ಗೌರವ ಸಿಗಬಹುದು.
ಕಟಕ ರಾಶಿ: ಇಂದು ಕುಟುಂಬದಲ್ಲಿ ಹೆಚ್ಚಿನ ನೆಮ್ಮದಿ ಸಿಗುವ ದಿನವಾಗಲಿದೆ. ಹಳೆಯ ಸಮಸ್ಯೆಯೊಂದಕ್ಕೆ ಪರಿಹಾರ ಸಿಕ್ಕಿ ಖುಷಿಯಿಂದ ದಿನ ಕಳೆಯಬಹುದು.
ಸಿಂಹ ರಾಶಿ: ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಸಿಗಬಹುದು. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಸ್ನೇಹಿತರ ಬೆಂಬಲ ಕೂಡ ಸಿಗುತ್ತದೆ.
ಕನ್ಯಾ ರಾಶಿ: ಇಂದು ಕೆಲವೊಂದು ನಿರ್ಧಾರ ಕೈಗೊಳ್ಳುವಾಗ ಜಾಗೃತರಾಗಿ ಇರಬೇಕಾಗುತ್ತದೆ. ನಿಮ್ಮ ಯೋಜನೆಗೆ ಸರಿಯಾದ ಪ್ಲ್ಯಾನ್ ಮಾಡುವುದು ಅಗತ್ಯ.
ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ಎಲ್ಲಿರಬೇಕು? ದಾಂಪತ್ಯ ಸುಖಕ್ಕೆ ವಾಸ್ತು ಹೇಳುವ ನಿಯಮ ಇದು!
ತುಲಾ ರಾಶಿ: ಇಂದು ಹೊಸ ಪರಿಚಯಗಳು ಭವಿಷ್ಯದಲ್ಲಿ ಸಹಾಯಕವಾಗಬಹುದು. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ.
ವೃಶ್ಚಿಕ ರಾಶಿ: ಇಂದು ಮೌನವೇ ನಿಮಗೆ ಉತ್ತರ ನೀಡುತ್ತದೆ. ಹಿಂದೆ ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಉತ್ತಮ ದಿನ. ಆರ್ಥಿಕವಾಗಿ ಸ್ಥಿರತೆ ಕಂಡುಬರಬಹುದು.
ಧನು ರಾಶಿ: ಇಂದು ದೂರ ಪ್ರಯಾಣ ಅಥವಾ ಹೊಸ ಅವಕಾಶದ ಸೂಚನೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಕುಟುಂಬದ ಸಹಕಾರ ಕೂಡ ಇಂದು ಸಿಗುತ್ತದೆ.
ಮಕರ ರಾಶಿ: ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ಹಣಕಾಸಿನಲ್ಲಿ ಸುಧಾರಣೆ ಕಂಡುಬರುವ ಸಾಧ್ಯತೆ ಇದೆ.
ಕುಂಭ ರಾಶಿ: ನಿಮ್ಮ ಹೊಸ ಆಲೋಚನೆಗಳು ಮೆಚ್ಚುಗೆ ಪಡೆಯಬಹುದು. ಆರ್ಥಿಕವಾಗಿಯೂ ಇಂದು ಸದೃಢ ಗೊಳ್ಳುತ್ತೀರಿ. ಆದರೆ ವಿನಯತೆಯಿಂದ ವರ್ತಿಸಿ.
ಮೀನ ರಾಶಿ: ಮನಸ್ಸಿನಲ್ಲಿದ್ದ ಗೊಂದಲಗಳು ದೂರವಾಗಬಹುದು. ಕುಟುಂಬದೊಂದಿಗೆ ಸಂತೋಷದ ದಿನ ಕಳೆಯಬಹುದು.