ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ದನಿಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಿದ್ದರೂ ಇಷ್ಟಾರ್ಥ ಸಿದ್ದಿಯಾಗುತ್ತದೆ. ಮಿತ್ರರಿಂದ ಖುಷಿ ಸಿಗಲಿದ್ದು ಧನಾಗಮನವಾಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲೂ ನೆಮ್ಮದಿ ಸಿಗಲಿದೆ. ಅದೇ ರೀತಿ ಹಣಕಾಸಿನ ವಿಚಾರದಲ್ಲೂ ಅಭಿವೃದ್ಧಿ ಇರುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಮಧ್ಯಾಹ್ನವರೆಗೆ ಕಷ್ಟ ಇರುತ್ತದೆ. ಮಧ್ಯಾಹ್ನ ಬಳಿಕ ನಿಮ್ಮ ತೊಂದರೆಗಳಿಗೆ, ಕಷ್ಟಗಳಿಗೆ ಪರಿಹಾರ, ಮಾರ್ಗದರ್ಶನ ಪ್ರಾಪ್ತಿಯಾಗುತ್ತದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಆದರೆ ಮುಖ್ಯವಾದ ಜನರಿಂದ ಯಾವುದೇ ಸಹಕಾರ ಸಿಗದೇ ಇರಬಹುದು. ಇದರಿಂದ ನಿಮಗೆ ಬೇಸರ ಉಂಟಾಗಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಉತ್ತಮ ಲಕ್ಷಣ ಗೋಚರವಾಗುತ್ತದೆ. ಕೆಲಸದಲ್ಲಿ ಹಾಗೂ ವೈಯಕ್ತಿಕ ವಿಚಾರದಲ್ಲಿ ಯಶಸ್ಸು ಸಿಗುತ್ತದೆ. ನೀವು ಅಂದುಕೊಂಡ ಕೆಲಸದಲ್ಲಿ ಜಯವನ್ನು ಕಾಣಬಹುದು.
ಮನೆಯಲ್ಲಿ ನೀರಿನ ಟ್ಯಾಂಕ್ ಅನ್ನು ಯಾವ ದಿಕ್ಕಿನಲ್ಲಿಡಬೇಕು?
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗಲಿದ್ದು ಶತ್ರುಗಳು ಹಿಮ್ಮೆಟ್ಟಬಹುದು. ಅಂದುಕೊಂಡ ಕೆಲಸದಲ್ಲೂ ಯಶಸ್ಸು.
ತುಲಾ ರಾಶಿ: ತುಲಾ ರಾಶಿಯವರು ಇಂದು ಆಸ್ತಿ-ಪಾಸ್ತಿ ವಿಚಾರವಾಗಿ ಗಮನ ನೀಡಬೇಕಾಗುತ್ತದೆ. ಮಧ್ಯಾಹ್ನ ಬಳಿಕ ವೈಯಕ್ತಿಕ ವಿಚಾರದ ಕಡೆ ಗಮನ ನೀಡಬೇಕು.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಇರುತ್ತದೆ. ಎಲ್ಲವೂ ನಿಮ್ಮ ಪರವಾಗಿ ಇಂದು ನಡೆಯುತ್ತದೆ. ಆತ್ಮವಿಶ್ವಾಸ ಕೂಡ ಹೆಚ್ಚಾಗಿ ಕೆಲಸ ಕಾರ್ಯದಲ್ಲಿ ನೀವು ಪ್ರಗತಿ ಯನ್ನು ಕಾಣುತ್ತೀರಿ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಉತ್ತನ ದಿನವಾಗಲಿದೆ. ಆದರೆ ಕುಟುಂಬದ ವಿಚಾರದಲ್ಲಿ ಹೆಚ್ಚಿನ ಗಮನ ನೀಡಬೇಕಾಗಿ ಬರುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೆ ತೊಂದರೆ ಎದುರಾಗಬಹುದು. ಮಧ್ಯಾಹ್ನ ಬಳಿಕ ಪ್ರೀತಿ ಪಾತ್ರರಿಂದ ಸಹಕಾರ ಪ್ರಾಪ್ತಿಯಾಗಲಿದ್ದು ಹಿಂದಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಕುಂಭ ರಾಶಿ: ಈ ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಕಷ್ಟ ಎದುರಾಗಲಿದೆ. ಮುಖ್ಯವಾದ ಕೆಲಸ ಕಾರ್ಯದಲ್ಲಿ ತೊಂದರೆ ಎದುರಾಗಬಹುದು. ಮಧ್ಯಾಹ್ನ ಬಳಿಕ ಇದಕ್ಕೆ ಪರಿಹಾರ ಸಿಗಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಲಿದೆ. ಮಿತ್ರರಿಂದ ಸಹಕಾರ ಸಿಗಬಹುದು. ಆದರೆ ಆಧ್ಯಾತ್ಮಿಕವಾಗಿ ಇಂದು ಹೆಚ್ಚಿನ ಒಲವು ತೋರಿಸಬೇಕಾಗುತ್ತದೆ.