ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ಕೃತಿಕಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಸಂಸಾರದಲ್ಲಿ ಉತ್ತಮ ಸಮಯ ಕಳೆಯುವ ದಿನವಾಗಿದೆ. ಅಂದು ಕೊಂಡ ಕೆಲಸ ಕಾರ್ಯದಲ್ಲಿ ಜಯ ಕಾಣುತ್ತೀರಿ.
ವೃಷಭ ರಾಶಿ: ಈ ರಾಶಿಗೆ ಇಂದು ಮಧ್ಯಾಹ್ನದವರೆಗೆ ಬೇಸರ ಉಂಟು ಮಾಡುವ ದಿನವಾಗಿದೆ. ಸ್ನೇಹಿತರ ಜೊತೆ ಒಡಕು ಉಂಟಾಗುವ ಸಾಧ್ಯತೆ ಇದೆ. ಆದರೆ ಮಧ್ಯಾಹ್ನ ಬಳಿಕ ಸಮಸ್ಯೆಗಳು ನಿವಾರಣೆಯಾಗಿ ಮನಸ್ಸು ನಿರಾಳವಾಗಲಿದೆ.
ಮಿಥುನ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಯಾವುದೇ ಮುಖ್ಯ ನಿರ್ಧಾರವನ್ನು ಕೈಗೊಳ್ಳಲು ಹೋಗಬೇಡಿ. ಪ್ರೀತಿ ಪ್ರೇಮ ಪ್ರಕರಣದಲ್ಲಿ ತೊಂದರೆ ಎದುರಾಗಬಹುದು.
ಕಟಕರಾಶಿ: ಇಂದು ಮಧ್ಯಾಹ್ನವರೆಗೆ ಕಾರ್ಯಕ್ಷೇತ್ರದಲ್ಲಿ ತೊಂದರೆ ಉಂಟಾಗಬಹುದು. ಆದರೆ ಮಧ್ಯಾಹ್ನ ಬಳಿಕ ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಧನ ಲಾಭದ ಸೂಚನೆಗಳು ಇವೆ.
ಸಿಂಹ ರಾಶಿ: ಇಂದು ಮಧ್ಯಾಹ್ನವರೆಗೆ ಕಷ್ಟಕರವಾದ ದಿನವಾಗಿದೆ. ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳುವುದು ಒಳಿತಲ್ಲ. ಆದರೆ ಮಧ್ಯಾಹ್ನ ಬಳಿಕ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ ನಿಮ್ಮದಾಗುತ್ತದೆ.
ಕನ್ಯಾ ರಾಶಿ: ಇಂದು ಉತ್ತಮವಾದ ದಿನವಾಗಿದ್ದು ಮನಸ್ಸಿಗೆ ಹೆಚ್ಚಿನ ನೆಮ್ಮದಿ ಸಿಗುತ್ತದೆ. ಎಲ್ಲರೂ ನಿಮ್ಮನ್ನು ಗುರುತಿಸಿ ಗೌರವವನ್ನು ಕೊಡುತ್ತಾರೆ.
ತುಲಾ ರಾಶಿ: ಇಂದು ಮಧ್ಯಾಹ್ನವರೆಗೂ ನೀವು ಅಂದು ಕೊಂಡಂತೆ ನಡೆದರೂ ಮಧ್ಯಾಹ್ನ ಬಳಿಕ ಕೆಲವೊಂದು ವಿಚಾರದಲ್ಲಿ ಬೇಸರ ಉಂಟಾಗಬಹುದು. ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳುವುದು ಒಳಿತಲ್ಲ.
ವೃಶ್ಚಿಕ ರಾಶಿ: ಇಂದು ಮಧ್ಯಾಹ್ನವರೆಗೆ ಸಾಮಾಜಿಕ ಚಟುವಟಿಕೆಯಲ್ಲಿ ಬ್ಯುಸಿ ಇರುತ್ತೀರಿ. ಮಧ್ಯಾಹ್ನ ಬಳಿಕ ಪ್ರೀತಿ ಪಾತ್ರರ ಜೊತೆ ಸಮಯ ಕಳೆದು ಬಿಸಿನೆಸ್ ವ್ಯವಹಾರದಲ್ಲಿ ಯಶಸ್ಸು ಕಾಣುತ್ತೀರಿ.
ಧನು ರಾಶಿ: ಇಂದು ಮಧ್ಯಾಹ್ನವರೆಗೆ ಕಷ್ಟಕರವಾದ ದಿನವಾಗಿದೆ. ಬಿಸಿನೆಸ್ ವ್ಯವಹಾರದಲ್ಲಿ ತೊಂದರೆ ಎದುರಾಗಬಹುದು. ಆದರೆ ಮಧ್ಯಾಹ್ನದ ಬಳಿಕ ಇಷ್ಟಾರ್ಥ ಸಿದ್ದಿಯಾಗಲಿದ್ದು ಪ್ರೀತಿ ಪಾತ್ರರಿಂದ ಹೆಚ್ಚಿನ ಲಾಭ ಕಾಣುತ್ತೀರಿ.
ಮಕರ ರಾಶಿ: ಹೆಚ್ಚಿನ ಯಶಸ್ಸು ಸಿಗುವ ದಿನವಾಗಿದೆ. ಕೆಲಸದಲ್ಲಿ ಪ್ರಗತಿ,ಪ್ರಮೋಷನ್ ಸಿಗುವ ಸಾಧ್ಯತೆ ಇರುತ್ತದೆ. ಮಧ್ಯಾಹ್ನ ಬಳಿಕ ಸಂಸಾರದಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ.
ಕುಂಭ ರಾಶಿ: ಇಂದು ವ್ಯವಹಾರದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಆದರೆ ಮಧ್ಯಾಹ್ನ ಬಳಿಕ ಕೆಲವೊಂದು ವಿಚಾರದಲ್ಲಿ ತೊಂದರೆ ಎದುರಾಗಬಹುದು.
ಮೀನ ರಾಶಿ: ಇಂದು ಮಧ್ಯಾಹ್ನ ವರೆಗೂ ಕಷ್ಟಕರವಾದ ದಿನವಾಗಿದೆ. ಕೆಲವೊಂದು ವಿಚಾರದಲ್ಲಿ ಬೇಸರ ಉಂಟಾಗಬಹುದು. ಆದರೆ ಮಧ್ಯಾಹ್ನ ಬಳಿಕಇದ್ದ ಕಷ್ಟಗಳೆಲ್ಲಾ ಇಂದು ನಿವಾರಣೆಯಾಗುತ್ತದೆ. ಖುಷಿಯಿಂದ ಸಮಯ ಕಳೆಯಲಿದ್ದೀರಿ.