ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ
ಮೇಷ ರಾಶಿ: ಇಂದು ನಿಮಗೆ ಉತ್ತಮವಾದ ದಿನವಾಗಿದ್ದು ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರಲಿದೆ. ಹಳೆಯ ಬಾಕಿ ಹಣ ನಿಮ್ಮ ಕೈ ಸೇರುತ್ತದೆ.
ವೃಷಭ ರಾಶಿ: ಹಿಂದೆ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಆದರೆ ಇಂದು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ. ಮಾತುಕತೆಯಲ್ಲಿ ತಾಳ್ಮೆ ಕಾಪಾಡಿಕೊಳ್ಳುವುದು ಒಳಿತು.
ಮಿಥುನ ರಾಶಿ: ಇಂದು ಉತ್ತಮವಾದ ದಿನವಾಗಿದ್ದು ಅಂದು ಕೊಂಡ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಆರ್ಥಿಕವಾಗಿಯೂ ಇಂದು ಯಶಸ್ಸು ಕಾಣುತ್ತೀರಿ.
ಕರ್ಕಾಟಕ ರಾಶಿ: ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯಾಪಾರ-ವಹಿವಾಟಿನಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಸಂಸಾರದಲ್ಲೂ ಖುಷಿ ಸಿಗುತ್ತದೆ.
ಸಿಂಹ ರಾಶಿ: ಇಂದು ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಿ. ಕೆಲಸದ ಒತ್ತಡ ಹೆಚ್ಚಿದ್ದರೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ಕನ್ಯಾ ರಾಶಿ: ಇಂದು ಉತ್ತಮವಾದ ದಿನವಾಗಿದ್ದು ಕೆಲಸ ಕಾರ್ಯದಲ್ಲಿ ಜಯ ನಿಮ್ಮ ದಾಗುತ್ತದೆ.ಆರ್ಥಿಕವಾಗಿಯೂ ಇಂದು ಯಶಸ್ಸು ಸಿಗುತ್ತದೆ.
ತುಲಾ ರಾಶಿ: ಆಸ್ತಿ ಹಾಗೂ ವಾಹನ ಖರೀದಿಗೆ ಸಂಬಂಧಿಸಿದ ಕೆಲಸಗಳು ಯಶಸ್ವಿಯಾಗಲಿವೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
Vastu Tips: ಹಳೆಯ ಮನೆ ಖರೀದಿಸುವ ಮುನ್ನ ಈ ವಾಸ್ತು ನಿಯಮಗಳನ್ನು ಪಾಲಿಸಿ, ಸುಖ-ಸಮೃದ್ಧಿ ನಿಮ್ಮದಾಗುತ್ತದೆ!
ವೃಶ್ಚಿಕ ರಾಶಿ: ಇಂದು ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳುವುದು ಒಳಿತಲ್ಲ. ಕೆಲವೊಂದು ವಿಚಾರದಲ್ಲಿ ತೊಂದರೆ ಎದುರಾಗಬಹುದು.
ಧನುಸ್ಸು ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ.ಮಾತಿನಿಂದ ಎಲ್ಲವನ್ನು ಇಂದು ಗೆಲ್ಲುತ್ತೀರಿ. ಸಾಲ ಕೊಡುವುದು ಅಥವಾ ತಗೊಳ್ಳುವುದನ್ನು ತಪ್ಪಿಸಿ.
ಮಕರ ರಾಶಿ: ನಿಮ್ಮ ಕೆಲಸಗಳಿಗೆ ಸಮಾಜದಲ್ಲಿ ಗೌರವ ವ್ಯಕ್ತವಾಗಲಿದೆ. ಹೊಸ ಉದ್ಯೋಗ ಅಥವಾ ವ್ಯವಹಾರದ ಅವಕಾಶಗಳು ಒದಗಿ ಬರಲಿವೆ.
ಕುಂಭ ರಾಶಿ: ಇಂದು ಅನಗತ್ಯ ಚಿಂತೆಗಳನ್ನು ಬಿಟ್ಟು ಯೋಚಿಸಿ. ಆದರೆ, ದೇವರ ಆರಾಧನೆಯಿಂದ ಮಾನಸಿಕ ಶಾಂತಿ ಸಿಗಲಿದೆ.
ಮೀನ ರಾಶಿ: ಇಂದು ಉತ್ತಮವಾದ ದಿನವಾಗಿದ್ದು ಆದಾಯದ ಹೊಸ ಮೂಲಗಳು ಸೃಷ್ಟಿ ಯಾಗಲಿವೆ. ಯೋಜಿಸಿದ ಕಾರ್ಯಗಳು ಅಡೆತಡೆಗಳಿಲ್ಲದೆ ನೆರವೇರಲಿದೆ.