ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ಪುಷ್ಯ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದ್ದು ಎಲ್ಲರಿಂದಲೂ ಗೌರವ ಪಡೆದುಕೊಳ್ಳುತ್ತೀರಿ. ಸಾಮಾಜಿಕ ಚಟುವಟಿಕೆಯಲ್ಲೂ ಹೆಚ್ಚಿನ ಯಶಸ್ಸು ಕಾಣಲಿದ್ದು ಅಭಿವೃದ್ಧಿಯನ್ನು ಕಾಣುತ್ತೀರಿ.
ವೃಷಭ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಸೇಲ್ಸ್, ಮಾರ್ಕೆಟಿಂಗ್, ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಲಾಭದಾಯಕವಾಗಿದೆ. ಅಂದುಕೊಂಡ ಕೆಲಸ ಕಾರ್ಯದಲ್ಲಿ ಸಕ್ಸಸ್ ಕಾಣುತ್ತೀರಿ.
ಮಿಥುನ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಸಂಸಾರದಲ್ಲಿ ಇಂದು ಹೆಚ್ಚಿನ ಸಮಯವನ್ನು ಕೈಗೊಳ್ಳುತ್ತೀರಿ. ಕೆಲವೊಂದು ವಿಚಾರದಲ್ಲಿ ಇರಿಸು- ಮುರಿಸು ಉಂಟಾದರೂ ಹೊಂದಾಣಿಕೆ ಮೂಲಕ ಹೋಗುತ್ತೀರಿ.
ಕಟಕರಾಶಿ: ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಆದರೆ ವೈಯಕ್ತಿಕವಾಗಿ ಇಂದು ಕೆಲವೊಂದು ಬದಲಾವಣೆಯನ್ನು ನೀವು ಮಾಡಿಕೊಳ್ಳಬೇಕಾಗುತ್ತದೆ.
ಸಿಂಹ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಸ್ನೇಹ ಸಂಬಂಧದಲ್ಲಿ ಇರಿಸು ಮುರಿಸು ಬರಬಹುದು. ಹಾಗಾಗಿ ಎಚ್ಚರಿಕೆಯಿಂದ ಕೆಲವೊಂದು ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ.
ಕನ್ಯಾ ರಾಶಿ: ಇಂದು ಉತ್ತಮವಾದ ದಿನವಾಗಿದ್ದು ಇಷ್ಟಾರ್ಥ ಸಿದ್ದಿಯಾಗುತ್ತದೆ. ವೈಯಕ್ತಿಕವಾಗಿ ಹೆಚ್ಚು ಇಂದು ಗಮನ ಸೆಳೆಯುತ್ತೀರಿ.
Vastu Tips: ಮನೆ ಖರೀದಿಸುವ ಮುನ್ನ ಈ ವಾಸ್ತು ನಿಯಮಗಳನ್ನು ತಿಳಿಯಿರಿ; ಇಲ್ಲವಾದರೆ ಎದುರಾಗಬಹುದು ಸಮಸ್ಯೆಗಳು!
ತುಲಾ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗಬಹುದು. ಹೀಗಾಗಿ ಸಮಯ ಪ್ರಜ್ಞೆಯಿಂದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ವೃಶ್ಚಿಕ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ ಸಾಮಾಜಿಕ ಚಟುವಟಿಕೆಯಲ್ಲಿ, ಕೆಲಸದಲ್ಲಿ ತೊಂದರೆ ಎದುರಾಗಬಹುದು. ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಿ.
ಧನು ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಸ್ನೇಹಿತರ ಜೊತೆ ಜಗಳ ಉಂಟಾಗಬಹುದು. ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ತೊಂದರೆಯನ್ನು ಎದುರಿಸಬೇಕಾಗಿ ಬರಬಹುದು
ಮಕರ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ಸಿಗಬಹುದು. ಎಲ್ಲರ ಸಹಕಾರ ಇಂದು ಪ್ರಾಪ್ತಿಯಾಗುತ್ತದೆ.
ಕುಂಭ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಸಂಸಾರದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ಶತ್ರುನಾಶ ಹಾಗೂ ಧ್ವಂಸವಾಗಲಿದೆ.
ಮೀನ ರಾಶಿ: ಇಂದು ಉತ್ತಮವಾದ ದಿನವಾಗಿದೆ. ನಿಮ್ಮ ಕ್ರಿಯಾಶೀಲತೆಯಿಂದ ಇಂದು ಜಯವನ್ನು ಕಾಣುತ್ತೀರಿ. ಕೆಲಸ ಕಾರ್ಯದಲ್ಲೂ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ.