ಬೆಂಗಳೂರು, ಮಾ. 19: ಪ್ರಮುಖವಾಗಿ ಗುರು ವೃಷಭ ರಾಶಿಯಲ್ಲಿ ದ್ವೀತಿಯ ಸ್ಥಾನದಲ್ಲಿದ್ದಾನೆ. ಹೀಗಾಗಿ ಹಲವು ರೀತಿಯ ಬದಲಾವಣೆಗಳು ಕಂಡು ಬರುತ್ತವೆ. ವರ್ಷದ ಆದಿಯಿಂದ ಹಿಡಿದು ಕೊನೆಯವರೆಗೂ ಅನುಕೂಲವಾದ ಫಲಗಳು ಪ್ರಾಪ್ತಿಯಾಗಲಿದ್ದು, ಅಂದುಕೊಂಡ ಯೋಜನೆಗಳೆಲ್ಲವೂ ಪೂರ್ಣಗೊಳ್ಳಲಿವೆ. ಹಣಕಾಸು ಉಳಿತಾಯಕ್ಕೆ ಸಕಾಲವಾಗಿದ್ದು, ಆಸ್ತಿ ಮತ್ತು ಭೂಮಿಯಲ್ಲಿ ಹೂಡಿಕೆಯನ್ನು ಮಾಡಲು ಅತ್ಯುತ್ತಮವಾಗಿರಲಿದೆ. ರವಿ, ಶುಕ್ರ ಹಾಗೂ ಬುಧ ಗ್ರಹಗಳ ಸ್ಥಾನ ಪಲ್ಲಟ ಕೂಡ ವೃಷಭ ರಾಶಿಗೆ ಉತ್ತಮವಾಗಿದೆ. ಉದ್ಯೋಗದಲ್ಲಿ ಬಡ್ತಿ ಉಂಟಾಗಿ ಆರ್ಥಿಕವಾಗಿ ಯಶಸ್ಸು ಕಾಣುತ್ತೀರಿ. ಕುಟುಂಬದಲ್ಲಿ ಕೂಡ ಸಂತೋಷ ಮತ್ತು ನೆಮ್ಮದಿ ನೆಲೆಸಲಿದೆ. ಒಟ್ಟಿನಲ್ಲಿ ಹಿಂದೂ ಹೊಸ ವರ್ಷದಲ್ಲಿ ವೃಷಭ ರಾಶಿಗೆ ಸೇರಿದ ಜನರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.