ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಎಪ್ರಿಲ್ 4, 2026: ಕಾರ್ಯ ಕ್ಷೇತ್ರದಲ್ಲಿ ಯಶಸ್ಸು, ಮನಸ್ಸಿಗೆ ನೆಮ್ಮದಿ

Horoscope Today April 4: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದ್ವೀತಿಯ ತಿಥಿ, ಸ್ವಾತಿ ನಕ್ಷತ್ರದ ಏಪ್ರಿಲ್ 4ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಇಂಟರ್‌ನೆಟ್ ಚಿತ್ರ

ಬೆಂಗಳೂರು, ಏ. 4: ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸೆ, ಸ್ವಾತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಮೇಷ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆದೆ. ದಾಂಪತ್ಯದಲ್ಲಿ ಹೆಚ್ಚಿನ ನೆಮ್ಮದಿ ಇರುತ್ತದೆ. ಮಿತ್ರತ್ವದಲ್ಲಿ ಹಾಗೂ ಪಾರ್ಟನರ್‌ ಶಿಪ್‌ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಶತ್ರುಗಳನ್ನು ನೀವು ಹಿಮ್ಮೆಟ್ಟಿಸಬಹುದು. ಅಂದುಕೊಂಡ ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರು ಪ್ರೀತಿ ಪಾತ್ರರ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಮನೆಯಲ್ಲಿ ಹೆಚ್ಚಿನ ಸಂತೋಷ ಸಿಗಲಿದೆ. ಸಂಸಾರದಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಕೋರ್ಟ್, ಆಸ್ತಿ ವ್ಯವಹಾರದಲ್ಲಿ ಬಹಳಷ್ಟು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ನಿದ್ರಾಹೀನತೆ ಹೆಚ್ಚಳಕ್ಕೆ ಮಲಗುವ ಕೋಣೆಯೇ ಕಾರಣವೇ? ವಾಸ್ತುಶಾಸ್ತ್ರ ಈ ಬಗ್ಗೆ ಹೇಳೋದೇನು!

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಯಶಸ್ಸು ಸಿಗಲಿದೆ. ಅದೇ ರೀತಿ ಮನಸ್ಸಿಗೆ ನೆಮ್ಮದಿ ತರುವ ದಿನವಾಗಲಿದೆ. ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡೋರಿಗೆ ಉತ್ತಮ ದಿನವಾಗಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರ ಜೀವನದಲ್ಲಿ ಮುಖ್ಯವಾದ ತಿರುವು ಕಂಡು ಬರಲಿದೆ. ಸಂಸಾರದಲ್ಲಿ ಖುಷಿಯ ಅನುಭವವಾಗುತ್ತದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ‌.

ತುಲಾ ರಾಶಿ: ತುಲಾ ರಾಶಿಯವರ ಮನಸ್ಸಿಗೆ ನೆಮ್ಮದಿ ಸಿಗುವ ದಿನವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಕ್ಕರೂ ಎಲ್ಲವನ್ನು ಕುಲಂಕುಷವಾಗಿ ಪರಿಶೀಲನೆ ಮಾಡಬೇಕಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ. ಮಾತು ಕಡಿಮೆ ಮಾಡಿದರೆ ಒಳಿತು.

ಧನಸ್ಸು ರಾಶಿ: ಧನಸ್ಸು ರಾಶಿಗೆ ಅತ್ಯುತ್ತಮ ದಿನವಾಗಲಿದೆ. ಯಶಸ್ಸು ನಿಮಗೆ ಪ್ರಾಪ್ತಿಯಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಲಾಭ ದೊರೆಯಲಿದೆ.

ಕುಂಭ ರಾಶಿ: ಈ ರಾಶಿಯವರ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ಹಿರಿಯರಿಂದ ಹೆಚ್ಚಿನ ಖುಷಿ, ನೆಮ್ಮದಿ ನಿಮಗೆ ಸಿಗಲಿದೆ.

ಮೀನ ರಾಶಿ: ಮೀನ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ತೊಂದರೆ ಉಂಟಾಗಬಹುದು. ಧ್ಯಾನದಿಗಳನ್ನು ಮಾಡಿ ಸಮಯ ಕಳೆಯಬೇಕಾಗುತ್ತದೆ.