ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಆರಿದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಆರಿದ್ರಾ ನಕ್ಷತ್ರದ ಅಧಿಪತಿ ರಾಹು. ಹೀಗಾಗಿ ಹೆಚ್ಚಿನ ಜನರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಒಳಿತಾಗಲಿದೆ. ಕೆಲಸ ಕಾರ್ಯದಲ್ಲಿ ಇಂದು ಪ್ರತಿಷ್ಠೆ ಹೆಚ್ಚಾಗಬಹುದು.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಮನೆಯಲ್ಲಿ ಗೊಂದಲದ ಪರಿಸ್ಥಿತಿ ಎದುರಾಗಬಹುದು. ಹಣಕಾಸಿನ ವಿಚಾರವಾಗಿ ಜಾಗೃತಿ ಅಗತ್ಯವಾಗಿದ್ದು ಅತೀ ದುಃಖ ಅಥವಾ ಸಂತೋಷ ಹೀಗೆ ತಿರುವುಗಳು ಕಾಡಬಹುದು.
ಮಿಥುನ ರಾಶಿ: ಇಂದು ಈ ರಾಶಿಯವರ ವ್ಯಕ್ತಿತ್ವದಲ್ಲಿ ಮುಖ್ಯವಾದ ಬದಲಾವಣೆಕಂಡು ಬರಲಿದೆ. ಅನೇಕ ವಿಚಾರಗಳನ್ನು ಇಂದು ನೀವು ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮಿತ್ರರ ಜತೆ ಒಡಕು ಉಂಟಾಗುವ ಸಾಧ್ಯತೆ ಕೂಡ ಇದೆ. ಹಣಕಾಸಿನ ವ್ಯವಹಾರದಲ್ಲಿ ಜಾಗೃತಿ ಅಗತ್ಯ.
ಮನೆಗೆ ಸುಖ, ಸಮೃದ್ಧಿ ತರಲು ಪಾಲಿಸಬೇಕಾದ ಪ್ರಮುಖ ನಿಯಮಗಳು
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮಿತ್ರರಿಂದ ಹೇರಳವಾದ ಧನಾಗಮನದ ಸೂಚನೆ ಇದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಹೆಚ್ಚಿನ ಪ್ರತಿಷ್ಠೆ ನಿಮ್ಮದಾಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಅದೃಷ್ಟ ಪರೀಕ್ಷೆ ಇಂದು ನಡೆಯಲಿದೆ. ಹಿಂದೆ ಇದ್ದ ಸಮಸ್ಯೆಗಳು ಮುಂದುವರಿಯುತ್ತವೆ. ಹಿರಿಯರು, ನಿಮ್ಮ ಹಿತೈಷಿಗಳು ಇಂದು ನಿಮಗೆ ಬೇಕಾದ ಸಹಕಾರ ನೀಡದೆ ಇರಬಹುದು.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ನಾನಾ ರೀತಿಯ ಚಿಂತೆ ಕಾಡಬಹುದು. ಮುಖ್ಯ ನಿರ್ಧಾರಗಳನ್ನು ಇಂದು ಕೈಗೊಳ್ಳಲು ಹೋಗಬೇಡಿ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ದಾಂಪತ್ಯ ಹಾಗೂ ಪಾರ್ಟನರ್ ಶಿಪ್ ವ್ಯವಹಾರದಲ್ಲಿ ನಿಮಗೆ ಬೇಕಾದಂತಹ ಸಹಕಾರ ಸಿಗಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಶತ್ರುಗಳು ಹಿಮ್ಮೆಟ್ಟಬಹುದು. ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಇಂದು ಲಾಭದಾಯಕ ದಿನವಾಗಲಿದೆ.
ಕುಂಭ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆದರೆ ಪ್ರೀತಿ ಪಾತ್ರರ ಬಗ್ಗೆ ಹೆಚ್ಚು ಯೋಚನೆ ಮಾಡಬೇಕಾಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಮನೆಯವರ ಜವಾಬ್ದಾರಿ ಅಗತ್ಯ. ಮನೆಯವರ ಸಂತೋಷ, ಖುಷಿಯಲ್ಲಿ ನೀವು ಭಾಗಿಯಾಗುತ್ತೀರಿ.