ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ,ಮೇ 27, 2026: ಈ ರಾಶಿಯವರಿಗೆ ಇಂದು ದೇವರ ಅನುಗ್ರಹದಿಂದ ಇಷ್ಟಾರ್ಥ ಪ್ರಾಪ್ತಿ!

Horoscope Today May 27th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಷಪಕ್ಷದ, ಏಕಾದಶಿ ತಿಥಿ, ಹಸ್ತ ನಕ್ಷತ್ರದ ಮೇ 27ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ ಏಕಾದಶಿ ತಿಥಿ, ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.

ಮೇಷ ರಾಶಿ: ಹಸ್ತ ನಕ್ಷತ್ರದ ಅಧಿಪತಿ ಚಂದ್ರ ಆಗಿದ್ದಾನೆ. ಹೀಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ‌. ಮೇಷ ರಾಶಿಗೆ ಇಂದು ಉತ್ತಮವಾದ ದಿನವಾಗಿದ್ದು ಕೆಲಸ ಕಾರ್ಯದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಶತ್ರುಗಳು ಹಿಮ್ಮೆಟ್ಟಲಿದ್ದು ಆರೋಗ್ಯದಲ್ಲೂ ಸುಧಾರಣೆ ಕಂಡು ಬರುತ್ತದೆ.

ವೃಷಭ ರಾಶಿ: ಈ ರಾಶಿಯವರಿಗೆ ನಿಮ್ಮ ದಾಂಪತ್ಯದ ವಿಚಾರದಲ್ಲಿ ಪ್ರೇಮ ಪ್ರೀತಿಯ ವಿಚಾರವಾಗಿ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.

ಮಿಥುನ ರಾಶಿ: ಈ ರಾಶಿಗೆ ಇಂದು ಆಸ್ತಿ ಪಾಸ್ತಿ ವಿಚಾರ, ಕೋರ್ಟ್‌, ಕಛೇರಿ ವ್ಯವಹಾರದಲ್ಲಿ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಮನೆಯಲ್ಲಿ ತಾಯಿಯ ಆರೋಗ್ಯ ಬಗ್ಗೆಯೂ ಹೆಚ್ಚಿನ ಕಾಳಜಿ ಅಗತ್ಯವಾಗಿರುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲೂ ಉತ್ತಮವಾದ ದಿನವಾಗಿದೆ ‌ ಸೋಷಿಯಲ್ ಮೀಡಿಯಾ, ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಲಾಭದಾಯಕ ದಿನವಾಗಿದೆ.

ಸಿಂಹ ರಾಶಿ: ಸಿಂಹ ರಾಶಿಯವರು ಮನೆಯ ಕಡೆ ಹೆಚ್ಚಿನ ಜವಾಬ್ದಾರಿಯನ್ನು ನೀಡಬೇಕಾಗುತ್ತದೆ. ಸಂಸಾರದದಲ್ಲೂ ಸರಿಯಾದ ಸಮಯ ಕೊಟ್ಟು ಎಲ್ಲವನ್ನು ನಿಭಾಯಿಸಬೇಕಾಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ತೊಂದರೆ ಎಲ್ಲವೂ ಮಯವಾಗಿ ಮನಸ್ಸಿಗೆ ನೆಮ್ಮದಿ ಸಿಗುವ ದಿನವಾಗುತ್ತದೆ.

ತುಲಾ ರಾಶಿ: ತುಲಾ ಅವರಿಗೆ ಬಹಳಷ್ಟು ಭಾವುಕತೆಯಿಂದ ಕೂಡಿದ ದಿನವಾಗುತ್ತದೆ. ಕೆಲವೊಂದು ಮಿತ್ರತ್ವದಲ್ಲಿ ಕೂಡ ಒಡಕು ಉಂಟಾಗಬಹುದು. ಕೆಲಸ ಕಾರ್ಯದಲ್ಲಿ ಕೂಡ ಇಂದು ಯಾರು ಕೂಡ ನಿಮ್ಮ ಪರವಾಗಿ ಇರುವುದಿಲ್ಲ

Vastu Tips: ವಾಸ್ತು ದೋಷ , ಆರೋಗ್ಯ: ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ? ಇಲ್ಲಿದೆ ಮಾಹಿತಿ

ವೃಶ್ಚಿಕ ರಾಶಿ: ಈ ರಾಶಿಗೆ ಅತ್ಯುತ್ತಮವಾದ ದಿನವಾಗಿದೆ. ಶತ್ರು ನಾಶ ಹಾಗೂ ಶತ್ರು ಧ್ವಂಸವಾಗಲಿದ್ದು ಇಷ್ಟಾರ್ಥ ಸಿದ್ದಿಯಾಗುತ್ತದೆ. ಹಾಗೂ ಧನ ಆಗಮನ ಕೂಡವಾಗುತ್ತದೆ

ಧನಸ್ಸು ರಾಶಿ: ಧನಸ್ಸು ರಾಶಿಗೆ ಕಾರ್ಯಕ್ಷೇತ್ರದಲ್ಲಿ ಒಮ್ಮೆಲೆ ಯಶಸ್ಸು ಸಿಗುತ್ತದೆ. ಕಾರ್ಯಕ್ಷೇತ್ರದ ಜವಾಬ್ದಾರಿಗಳು ಕೂಡ ಜಾಸ್ತಿಯಾಗಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಭಾಗ್ಯೋದಯವಾದ ದಿನವಾಗಿದೆ. ಆದರೆ ಹಿರಿಯರ,ದೇವರ ಆಶೀರ್ವಾದದಿಂದ ಮಾತ್ರ ಎಲ್ಲವನ್ನು ಪಡೆಯೋದಕ್ಕೆ ಸಾಧ್ಯವಾಗುತ್ತದೆ.

ಕುಂಭರಾಶಿ: ಈ ರಾಶಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ನೋವು ಉಂಟಾಗುವ ದಿನ ನಿಮ್ಮದು ಆಗುತ್ತದೆ.ಆಧ್ಯಾತ್ಮಿಕವಾಗಿ ಮಾತ್ರ ಮನಸ್ಸಿಗೆ ನೆಮ್ಮದಿ

ಮೀನ ರಾಶಿ: ಮೀನ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ನಿಮ್ಮ ಪ್ರೀತಿ ಪಾತ್ರರಿಂದ ಬೇಕದಂತಹ ಪ್ರತಿಕ್ರಿಯೆಗಳು ಕೂಡ ಪ್ರಾಪ್ತಿಯಾಗುತ್ತದೆ.