ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು ಚೈತ್ರ ಮಾಸೆ, ದನಿಷ್ಟ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಗೆ ಇಂದು ನಿಮ್ಮ ಕಾರ್ಯ ಕ್ಷೇತ್ರದ ಯಶಸ್ಸು ಜಾಸ್ತಿಯಾಗುತ್ತವೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಧನ ಆಗಮವಾಗುತ್ತದೆ. ಅದೇ ರೀತಿ ಮಿತ್ರರ ಭೇಟಿ ಕೂಡ ನಿಮಗೆ ಖುಷಿ ನೀಡುತ್ತದೆ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಅದೃಷ್ಟ ಪರೀಕ್ಷೆಗಳು ನಡೆಯುತ್ತಿರುತ್ತದೆ. ಸಂಜೆಯ ಸಮಯದಲ್ಲಿ ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ನಿಮಗೆ ಸಿಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಮಧ್ಯಾಹ್ನ ವರೆಗೂ ಮನಸ್ಸಿಗೆ ಬೇಸರ ಉಂಟು ಮಾಡುವ ದಿನವಾಗುತ್ತದೆ. ಯಾವುದು ನಿಮ್ಮ ಪರವಾಗಿ ಇರುವುದಿಲ್ಲ. ಮಧ್ಯಾಹ್ನ ಬಳಿಕ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಭಾಸವಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಎಲ್ಲವೂ ಚೆನ್ನಾಗಿ ನಡೆಯುತ್ತಿರುತ್ತದೆ. ಮಧ್ಯಾಹ್ನ ಬಳಿಕ ಇರಿಸು- ಮುರಿಸು ಉಂಟಾಗುವ ಸಾಧ್ಯತೆ ಇರುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನ ವರೆಗೂ ಎಲ್ಲವೂ ನಿಮ್ಮ ಪರವಾಗಿ ನಡೆಯುತ್ತಿರುತ್ತದೆ. ಮಧ್ಯಾಹ್ನ ಬಳಿಕ ನೀವು ಪ್ರೀತಿ ಪಾತ್ರರ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಆತಂಕ ಪಡುವ ದಿನ ನಿಮ್ಮದು ಆಗುತ್ತದೆ. ಮಧ್ಯಾಹ್ನ ಬಳಿಕ ಶತ್ರುಗಳನ್ನು ಹಿಮ್ಮೆಟ್ಟಲಿದ್ದು ಎಲ್ಲವೂ ನಿಮ್ಮ ಪರವಾಗಿ ನಡೆಯುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮನೆಯಲ್ಲೂ ಕೂಡ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಕಾರ್ಯಕ್ಷೇತ್ರದಲ್ಲಿ ಕೂಡ ಸಮಸ್ಯೆ ಉಂಟಾಗಬಹುದು.
Vastu Tips: ವಾಸ್ತು ಶಾಸ್ತ್ರದ ಪ್ರಕಾರ ಈ ಉಡುಗೊರೆಗಳನ್ನ ನೀಡಿದರೆ ಬರಲಿದೆ ಸಂಪತ್ತು ಮತ್ತು ಸಮೃದ್ಧಿ
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮಧ್ಯಾಹ್ನವರೆಗೂ ಕಾರ್ಯಕ್ಷೇತ್ರದಲ್ಲಿ ಹಾಗೂ ಮನೆಯಲ್ಲಿಯೂ ನೆಮ್ಮದಿ ಇರುವುದಿಲ್ಲ. ಮಧ್ಯಾಹ್ನ ಬಳಿಕ ನಿಮ್ಮ ಕ್ರಿಯಾತ್ಮಕ ಕೆಲಸದ ಮೂಲಕ ಯಶಸ್ಸು ಗಳಿಸುತ್ತೀರಿ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಮಧ್ಯಾಹ್ನವರೆಗೂ ಸಂಸಾರದ ತಾಪತ್ರಯಗಳು ಕಾಡುವ ಸಾಧ್ಯತೆ ಇರುತ್ತದೆ. ಮಧ್ಯಾಹ್ನ ನಂತರ ಸ್ನೇಹಿತರ ಜೊತೆ ಸಮಗಮವಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನ ವರೆಗೂ ಮನಸ್ಸಿಗೆ ನೆಮ್ಮದಿ ಇರುತ್ತದೆ. ಮಧ್ಯಾಹ್ನ ಬಳಿಕ ಸಂಸಾರದ ಬಗ್ಗೆ ಯೋಚನೆ ಮಾಡುವ ದಿನವಾಗುತ್ತದೆ.
ಕುಂಭರಾಶಿ: ಈ ರಾಶಿಯವರಿಗೆ ಮಧ್ಯಾಹ್ನ ವರೆಗೂ ಕಷ್ಟಕರ ವಾದ ದಿನವಾಗಿದೆ . ಮಧ್ಯಾಹ್ನ ಬಳಿಕ ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಸಿಗುತ್ತದೆ.
ಮೀನ ರಾಶಿ: ಮೀನ ರಾಶಿಗೆ ಮಧ್ಯಾಹ್ನ ವರೆಗೂ ಎಲ್ಲವೂ ನಿಮ್ಮ ಪರವಾಗಿ ನಡೆಯುತ್ತದೆ. ಮಧ್ಯಾಹ್ನ ಬಳಿಕ ಇಷ್ಟಾರ್ಥ ಸಿದ್ದಿ ಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಧನ ಆಗಮನವಾಗುವ ಸಾಧ್ಯತೆ ಕೂಡ ಇರುತ್ತದೆ.