ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಮಾರ್ಚ್ 10, 2026: ಈ ರಾಶಿಗೆ ಉದ್ಯೋಗದಲ್ಲಿ ಲಾಭದ ಜೊತೆಗೆ ಆರ್ಥಿಕ ಪ್ರಗತಿ

Horoscope Today March 10: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಸಪ್ತಮಿ ತಿಥಿ, ಅನುರಾಧಾ ನಕ್ಷತ್ರದ ಮಾರ್ಚ್ 10ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ ಶರದೃತು, ಫಾಲ್ಗುಣ ಮಾಸೆ, ಅನುರಾಧಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಅನುರಾಧಾ ನಕ್ಷತ್ರ ಇದ್ದು ಇದರ ಅಧಿಪತಿ ಶನಿ ಆಗಿದ್ದಾನೆ. ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಬೆಳಿಗ್ಗಿನ ಸಮಯ ಸ್ವಲ್ಪ ಒಳ್ಳೆಯದಾಗಿದ್ದರೂ ಮಧ್ಯಾಹ್ನಕ್ಕೆ ಸ್ವಲ್ಪ ಕ್ಲಿಷ್ಟಕರವಾದ ದಿನವಾಗುತ್ತದೆ. ಮುಖ್ಯವಾದ ನಿರ್ಧಾರಗಳನ್ನು ಎರಡು ಮೂರು ದಿನಗಳ ವರೆಗೆ ಮಾಡಲು ಹೋಗಬೇಡಿ‌

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ದಾಂಪತ್ಯದಲ್ಲಿ ಪ್ರೇಮ ,ಪ್ರೀತಿ ವಿಚಾರದಲ್ಲಿ ಖುಷಿ ಸಿಗುತ್ತದೆ. ಹಾಗೆಯೇ ನಿಮ್ಮ ಬಿಸಿನೆಸ್ ವ್ಯವಹಾರದಲ್ಲೂ ಜಯ ಪ್ರಾಪ್ತಿಯಾಗುತ್ತದೆ‌.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮವಾದ ದಿನವಾಗಿದೆ. ಶತ್ರುಗಳನ್ನು ನೀವು ಹಿಮ್ಮೆಟ್ಟಬಹುದು. ಯಾವುದೇ ರೀತಿಯ ತೊಂದರೆಗಳು ನಿಮಗೆ ಆಗುವುದಿಲ್ಲ. ಆರೋಗ್ಯದಲ್ಲೂ ಸುಧಾರಣೆಯನ್ನು ಕಾಣುತ್ತೀರಿ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಸ್ವಲ್ಪ ಕ್ಲಿಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ. ಹಣಕಾಸಿನ ವಿಚಾರದಲ್ಲಿ ನಿಮಗೆ ಸ್ವಲ್ಪ ಕಷ್ಟವಾಗಬಹುದು.

Vastu Tips: ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಹಾಕುವಾಗ ಈ ನಿಯಮ ಪಾಲಿಸಿ; ಇಲ್ಲವಾದರೆ ಅಶುಭ ಫಲವೇ ಹೆಚ್ಚು

ಸಿಂಹ ರಾಶಿ: ಸಿಂಹ ರಾಶಿಗೆ ಇಂದು ಅತೀ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರುತ್ತದೆ. ಆದರೆ ಮನೆಯ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ.. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಅತೀ ಹೆಚ್ಚಿನ ಲಾಭ ಸಿಗುತ್ತದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಆದರೂ ಕೂಡ ನಿಮ್ಮ ಸಂಸಾರದಲ್ಲಿ ಪ್ರೀತಿ ಪಾತ್ರರ ಜೊತೆ ಸಮಯ ಹೆಚ್ಚಾಗಿ ಕಳೆಯಬೇಕಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಹಿಂದಿನ ದಿನದಲ್ಲಿ ಇದ್ದ ತೊಂದರೆ ಎಲ್ಲವೂ ಮಾಯವಾಗಲಿದೆ. ಮುಂದಿನ ದಿನಗಳಿಗೆ ಉತ್ತಮ ಮಾರ್ಗದರ್ಶನ ಸಿಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ನಿರ್ಧಾರಗಳು ಬೇಡ. ಯಾವುದೇ ರೀತಿಯ ಸಹಕಾರ ನಿಮಗೆ ಸಿಗುವುದಿಲ್ಲ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಬಂಧು ಮಿತ್ರರಿಂದ ಧನ ಆಗಮನ ವಾಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.ಎಲ್ಲದರಲ್ಲೂ ಜಯ ಪ್ರಾಪ್ತಿ ಯಾಗುತ್ತದೆ.

ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಎಲ್ಲ ಕೆಲಸ ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ.