ಬೆಂಗಳೂರು, ಮೇ 29: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಸ್ವಾತಿ ನಕ್ಷತ್ರದ ಈ ದಿನದ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಬುಧ ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಹಾಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಹೇರಳವಾದ ಧನಾಗಮನದ ಸೂಚನೆ ಇದೆ. ಮಾಡಿದ ಕೆಲಸ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಮನೆಯಲ್ಲಿ ದೊಡ್ಡ ಶುಭ ಸಮಾರಂಭಗಳು ನಡೆಯಬಹುದು. ಮನೆಯಲ್ಲೂ ನೆಮ್ಮದಿ ಸಿಗಲಿದ್ದು, ಯಶಸ್ಸು ನಿಮ್ಮದಾಗಲಿದೆ.
ಮಿಥುನ ರಾಶಿ: ನಿಮ್ಮ ರಾಶಿಯಲ್ಲೇ ಮೂರು ಗ್ರಹಗಳು ಸೇರಿಕೊಂಡಿವೆ. ಇದರಿಂದ ಶುಕ್ರ ನಿಮಗೆ ಒಳ್ಳೆದು ಮಾಡಿದರೂ ಬುಧನಿಂದ ಅಡೆ- ತಡೆಗಳು ಉಂಟಾಗಬಹುದು. ಅದೇ ರೀತಿ ವೈಯಕ್ತಿಕವಾಗಿಯೂ ಕೆಲವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಅತಿಯಾದ ಖರ್ಚು ಎದುರಾಗಬಹುದು. ಹಣದ ಮೂಲವು ಕೈ ತಪ್ಪಿ ಹೋಗಬಗುದು. ವ್ಯವಹಾರದಲ್ಲಿ ಕೂಡ ನಷ್ಟ ಉಂಟಾಗಬಹುದು.
ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ?
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಗುಂಪು ಕೆಲಸದಿಂದ ಹೆಚ್ಚಿನ ಲಾಭ ಸಿಗುತ್ತದೆ. ಸಾಮಾಜಿಕ ಕೆಲಸ ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರು ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಲಾಭ ಗಳಿಸುತ್ತೀರಿ. ಅದೇ ರೀತಿ ವೈಯಕ್ತಿಕವಾಗಿಯೂ ದೊಡ್ಡದಾದ ತಿರುವು ಸಿಗಲಿದೆ.
ತುಲಾ ರಾಶಿ: ನಿಮ್ಮ ರಾಶಿಯಲ್ಲಿ ಮೂರು ಗ್ರಹಗಳು ಸೇರುತ್ತವೆ. ಹೀಗಾಗಿ ಬುಧನಿಂದ ಭಾಗ್ಯಕ್ಕೆ ಚ್ಯುತಿ ಬರಬಹುದು. ಮುಂದಿನ ದಿನದಲ್ಲಿ ಯಶಸ್ಸು ಸಿಗಬಹುದು.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹಿಂದಿನ ದಿನದಲ್ಲಿ ಇದ್ದ ಸಮಸ್ಯೆಗೆ ಪರಿಹಾರ ಸಿಕ್ಕಿ ದೊಡ್ಡದಾದ ಘಾಸಿಯೊಂದು ನಿವಾರಣೆಯಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಕಷ್ಟದ ದಿನವಾಗಲಿದೆ. ವ್ಯವಹಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಸ್ನೇಹ ಸಂಬಂಧದಲ್ಲೂ ಬಿರುಕು ಉಂಟಾಗಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ. ಶತ್ರುಗಳು ನಾಶವಾಗಲಿದ್ದು ಮುಖ್ಯವಾದ ಬದಲಾವಣೆವೊಂದು ಎದುರಾಗಲಿದೆ.
ಕುಂಭ ರಾಶಿ: ಈ ರಾಶಿಯವರಿಗೆ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ಕ್ರಿಯೇಟಿವಿಟಿ ಮೂಲಕ ಒಳ್ಳೆದಾಗುತ್ತದೆ. ಆದರೆ ಮಾತಿನಲ್ಲಿ ನಿಗಾ ಇರಿಸಬೇಕಾಗತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆಸ್ತಿ ಹಾಗೂ ಕೋರ್ಟ್ ವ್ಯವಹಾರದಲ್ಲಿ ಯಶಸ್ಸು ಸಿಗಲಿದ್ದು ನೆಮ್ಮದಿ ಕಾಣುತ್ತೀರಿ.