ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ವಿಶಾಖ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.
ಮೇಷ ರಾಶಿ: ರೇವತಿ ನಕ್ಷತ್ರದ ಅಧಿಪತಿ ರಾಹು. ಹೀಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ರಾಶಿಯವರು ಇಂದು ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಅದೇ ರೀತಿ ಆಧ್ಯಾತ್ಮಿಕವಾಗಿಯೂ ಹೆಚ್ಚು ಸಮಯವನ್ನು ನೀವು ಕಳೆಯಬೇಕಾಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಅತೀ ಹೆಚ್ಚಿನ ಫಲವನ್ನು ತಂದುಕೊಡುತ್ತದೆ. ಅಂದುಕೊಂಡ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಮಾತುಕತೆಯಲ್ಲಿ ಇಂದು ಸ್ವಲ್ಪ ಅಡತಡೆಗಳು ಉಂಟಾಗಬಹುದು.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಮಧ್ಯಮ ಫಲ ತಂದುಕೊಡುತ್ತದೆ. ಭಾವನೆಗಳನ್ನು ಹತೋಟಿಯಲ್ಲಿ ಇಡಬೇಕಾಗುತ್ತದೆ. ಅದೇ ರೀತಿ ಮಾತುಕತೆಯಲ್ಲಿ ಎಚ್ಚರಿಕೆ ಅಗತ್ಯ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಾತುಕತೆಯಿಂದ ತೊಂದರೆ ಎದುರಾಗುವ ಸಾಧ್ಯತೆ ಇದೆ. ಇಂದು ನೀವು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಮನಸ್ಸಿಗೆ ಸ್ವಲ್ಪ ಕ್ಷೇಶ ಎದುರಾಗುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರಿಂದ ತೊಂದರೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!
ತುಲಾ ರಾಶಿ: ತುಲಾ ರಾಶಿಯವರು ಮಾತುಕತೆಯಲ್ಲಿ ಜಾಗೂಕರೂಕರಾಗಿರಬೇಕು. ಇಂದು ಸಂಯಮ ನಡವಳಿಕೆ ಅಗತ್ಯ. ಶತ್ರುಗಳಿಂದ ತೊಂದರೆ ಎದುರಾಗಲಿದೆ.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದ್ದು ಹೆಚ್ಚಿನ ನೆಮ್ಮದಿ ಇರುತ್ತದೆ. ಆದರೆ ಪ್ರೀತಿ ಪಾತ್ರರ ಜತೆ ಜಗಳ ಉಂಟಾಗಬಹುದು. ಬಹಳ ಯೋಚಿಸಿ ಇಂದು ಮಾತನಾಡಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಅಷ್ಟಮ ಶನಿ ನಡೆಯುವುದರಿಂದ ಮನಸ್ಸಿಗೆ ಕ್ಷೇಶ ಉಂಟಾಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಹಾಗೂ ಉದ್ಯೋಗದಲ್ಲಿ ತೊಂದರೆ ಎದುರಾಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ. ಆದರೆ ಮಾತಿನಲ್ಲಿ ನಿಗಾ ಇರಿಸಿದರೆ ಉತ್ತಮ.
ಕುಂಭ ರಾಶಿ: ಈ ರಾಶಿಯವರಿಗೆ ಇಂದು ಸಂಸಾರದಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದೇ ರೀತಿ ಮುಖ್ಯವಾದ ನಿರ್ಧಾರ ಕೈಗೊಳ್ಳುವಾಗ ಜಾಗೃತರಾಗಿರಿ.
ಮೀನ ರಾಶಿ: ಮೀನ ರಾಶಿಯವರಿಗೆ ಶನಿ ನಿಮ್ಮ ರಾಶಿಯಲ್ಲೇ ವಕ್ರಿಯಾಗಿದ್ದಾನೆ. ಹೀಗಾಗಿ ಆಧ್ಯಾತ್ಮಿಕವಾಗಿ ಹೆಚ್ಚಿನ ಒಲವು ನಿಮಗೆ ಸಿಗುತ್ತದೆ. ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮದಲ್ಲಿ ಪ್ರಗತಿಯನ್ನು ಕಾಣುತ್ತೀರಿ.