ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ,ವಸಂತ ಋತು ಚೈತ್ರ ಮಾಸೆ, ಅನುರಾಧ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಯವರಿಗೆಅತ್ಯುತ್ತಮವಾದ ದಿನವಾಗಿದೆ. ಅಷ್ಟಮದಲ್ಲಿ ಚಂದ್ರ ಬಂದಿರುವುದರಿಂದ ನಿಮಗೆ ಒಳ್ಳೆಯ ಫಲಗಳು ಕಾಣಸಿಗುತ್ತವೆ. ನಿಮಗೆ ಬೇಕಾದಂತಹ ಫಲಗಳು ಇಂದು ಪ್ರಾಪ್ತಿಯಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಸಂಸಾರದಲ್ಲಿ ನೆಮ್ಮದಿ ಇದ್ದು ದಾಂಪತ್ಯ ಹಾಗೂ ಮಿತ್ರತ್ವದಲ್ಲಿ ಇಂದು ಅಕ್ಕರೆ ಪ್ರಾಪ್ತಿಯಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಇಂದು ಉತ್ತಮವಾದ ದಿನವಾಗಿದೆ. ಶತ್ರುಗಳನ್ನು ನೀವು ಹಿಮ್ಮೆಟ್ಟ ಬಹುದು. ಅದೇ ರೀತಿ ಮುಖ್ಯವಾದ ಕೆಲಸ ಕಾರ್ಯದಲ್ಲಿ ಜಯ ಪ್ರಾಪ್ತಿಯಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗಬಹುದು. ಯಾವುದೇ ವ್ಯವಹಾರದಲ್ಲಿ ನಿಮಗೆ ಲಾಭ ಉಂಟಾಗುವ ಸಾಧ್ಯತೆ ಕಡಿಮೆ
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ತಾಯಿಯ ಆರೋಗ್ಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ದಿನವಾಗಿದೆ. ಕೋರ್ಟ್, ಕಛೇರಿ ವ್ಯವಹಾರದಲ್ಲಿಯೂ ಸಮಸ್ಯೆ ಸೃಷ್ಟಿಯಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರುತ್ತದೆ. ಎಲ್ಲರಿಂದ ಅತೀ ಹೆಚ್ಚಿನ ಸಂತೋಷ ಕೂಡ ಸಿಗುತ್ತದೆ.
Vastu Tips: ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಬೇಕಾ? ಈ ಸರಳ ವಾಸ್ತು ವಿಧಾನಗಳನ್ನು ಅನುಸರಿಸಿ
ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನದ ಮನಸ್ಸಿನ ನೋವೆಲ್ಲ ಇಂದು ಮಾಯವಾಗುತ್ತದೆ. ಮುಂದಿನ ಕೆಲಸಗಳಿಗೆ ಉತ್ತಮ ಮಾರ್ಗ ದರ್ಶನ ಕೂಡ ಪ್ರಾಪ್ತಿಯಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮನೆಯ ಸಮಸ್ಯೆಗಳು ಇಂದು ಜಾಸ್ತಿಯಾಗುತ್ತವೆ. ಹಾಗಾಗಿ ಮನೆಯ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ. ನಿಮ್ಮ ಪರವಾಗಿ ಯಾವುದೇ ಕೆಲಸ ಕಾರ್ಯ ನಡೆಯುವುದಿಲ್ಲ.
ಮಕರ ರಾಶಿ: ಮಕರ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ.
ಕುಂಭರಾಶಿ: ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಇತರರಿಂದ ನಿಮಗೆ ಹೊಗಳಿಕೆ ಪ್ರಾಪ್ತಿ ಯಾಗುತ್ತದೆ.ಕೆಲಸ ಕಾರ್ಯಕ್ಕೂ ಅತೀ ಹೆಚ್ಚಿನ ಹುಮ್ಮಸ್ಸು ಸಿಗುತ್ತದೆ.
ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ. ಇಂದು ಭಾಗ್ಯೋದಯವಾದ ದಿನವಾಗಿದ್ದು ಹಿಂದಿನ ಎರಡು ಮೂರು ದಿನದ ತೊಂದರೆ ಎಲ್ಲವೂ ಬಗೆಹರಿಯುತ್ತದೆ..