ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷದ, ಶತಭಿಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.
ಮೇಷ ರಾಶಿ: ಶತಭಿಷಾ ನಕ್ಷತ್ರದ ಅಧಿಪತಿ ರಾಹು ಹೀಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ.ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರದಲ್ಲಿ ಯಶಸ್ಸು ಸಿಗಲಿದ್ದು ಹೇರಳದವಾದ ಧನ ಆಗಮನವಾಗುತ್ತದೆ
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ದೊಡ್ಡದಾದ ಬದಲಾವಣೆ ಕಂಡು ಬರುತ್ತದೆ. ಕೆಲಸ ಕಾರ್ಯದಲ್ಲಿ ಹೆಚ್ಚು ಪ್ರಶಂಸೆಯನ್ನು ಇಂದು ಕಾಣುತ್ತೀರಿ.
ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ. ಇಂದು ಪ್ರತಿಷ್ಠೆ ಹೆಚ್ಚಾಗಬಹುದು. ಇಂದು ನೀವು ಕೆಲಸ ಬಿಟ್ಟು ಆಸಕ್ತಿಕರ ವಿಚಾರ ಬಗ್ಗೆಯೂ ಗಮನ ವಹಿಸುತ್ತೀರಿ
Vastu Tips: ಅಡುಗೆಮನೆಯ ಈ 5 ವಾಸ್ತು ನಿಯಮ ಪಾಲಿಸಿದರೆ ಮನೆಯಲ್ಲಿ ಹೆಚ್ಚಲಿದೆ ಸುಖ-ಸಮೃದ್ಧಿ
ಕಟಕ ರಾಶಿ: ಕಟಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಪ್ರೀತಿ ಪಾತ್ರರಿಂದ ಯಾವುದೇ ಸಹಕಾರ ಸಿಗುವುದಿಲ್ಲ. ನೀವು ಧಾನ್ಯದಿಗಳನ್ನು ಮಾಡಿ ಸಮಯ ಕಳೆಯಬೇಕಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ದೊಡ್ಡದಾದ ಬದಲಾವಣೆ ಉಂಟಾಗುತ್ತದೆ. ಕೆಲವೊಂದು ವಿಚಾರದಲ್ಲಿ ಅಡೆತಡೆ ಉಂಟಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಿದ್ದಯ ಶತ್ರುಗಳು ಹಿಮ್ಮೆಟ್ಟಬಹುದು. ಮಿತ್ರರಿಂದ ಬಹಳಷ್ಟು ತೊಂದರೆಯನ್ನು ನೋಡಬೇಕಾಗಿ ಬರಬಹುದು.
ತುಲಾ ರಾಶಿ: ತುಲಾ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಪ್ರೇಮ ಪ್ರೀತಿ ವಿಚಾರದಲ್ಲಿ ಇಂದು ನೆಮ್ಮದಿ ಇರುವುದಿಲ್ಲ.
ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಕಷ್ಟಕರವಾದ ದಿನವಾಗಿದೆ. ಮನೆಯ ವಿಚಾರ ಹಾಗೂ ಆಸ್ತಿ ಪಾಸ್ತಿ ವಿಚಾರವಾಗಿ ಹೆಚ್ಚಿನ ಗಮನವನ್ನು ನೀವು ನೀಡಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗುತ್ತದೆ. ಮಾಧ್ಯಮದಲ್ಲಿ ಇರೋರಿಗೆ ಇಂದು ಲಾಭದಾಯಕ ದಿನವಾಗಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಮನೆಯಲ್ಲಿ ಇಂದು ನಿಮ್ಮ ಗಮನ ಅವಶ್ಯಕವಾಗುತ್ತದೆ. ಹಾಗಾಗಿ ಮನೆಯಲ್ಲಿ ಇಂದು ನಿಮ್ಮ ಸಮಯ ಅಗತ್ಯವಾಗಿ ಇರುತ್ತದೆ.
ಕುಂಭರಾಶಿ: ಈ ರಾಶಿಯವರಿಗೆ ನಿಮ್ಮ ರಾಶಿಗೆ ಚಂದ್ರ ಬಂದಿದ್ದಾನೆ. ಹಾಗಾಗಿ ನಿಮ್ಮ ಮನಸ್ಸಿನ ವ್ಯಾಕ್ಯೂಲತೆ ಕಡಿಮೆಯಾಗುತ್ತದೆ. ಮುಂದಿನ ದಿನಕ್ಕೆ ಸರಿಯಾದ ಮಾರ್ಗದರ್ಶನ ಸಿಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಇಂದು ಗೊತ್ತಲ್ಲದ್ದಂತ ಅನೇಕ ವಿಚಾರದಲ್ಲಿ ಬೇಸರ ಉಂಟಾಗಬಹುದು. ಹಾಗಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.