ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Astro Tips: ಮದುವೆ ವಿಳಂಬವ ಆಗುತ್ತಿದೆಯೇ; ಹಾಗಾದ್ರೆ ಗುರುವಾರ ಈ ಒಂದು ವಸ್ತುವನ್ನು ದಾನ ಮಾಡಿ

ಹಿಂದೂ ಸಂಪ್ರದಾಯ ಮತ್ತು ಜ್ಯೋತಿಷ್ಯದ ಪ್ರಕಾರ ಗುರುವಾರ ಗುರು ಬೃಹಸ್ಪತಿಯ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಹಳದಿ ಬಟ್ಟೆ, ಅರಿಶಿನ, ಬಾಳೆಹಣ್ಣು, ಹಳದಿ ಆಹಾರ, ಕೇಸರಿ ಅಕ್ಕಿ ಮುಂತಾದ ವಸ್ತುಗಳನ್ನು ದಾನ ಮಾಡುವುದರಿಂದ ಗುರುಬಲ ಹೆಚ್ಚುತ್ತದೆ, ಸಂಪತ್ತು, ಅದೃಷ್ಟ ಮತ್ತು ಉದ್ಯೋಗದಲ್ಲಿ ಉತ್ತಮ ಫಲಗಳು ದೊರೆಯುತ್ತವೆ ಎನ್ನುವ ನಂಬಿಕೆಯಿದೆ.

ಜ್ಯೋತಿಷ್ಯ ಶಾಸ್ತ್ರ

ಬೆಂಗಳೂರು: ಹಿಂದೂ ಧರ್ಮದಲ್ಲಿ (Hindu Dharma) ಗುರುವಾರವನ್ನು(Thursday) ದೇವಗುರು ಗುರು ಬೃಹಸ್ಪತಿ ಅವರ ದಿನವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಗುರು ಗ್ರಹವನ್ನು ಜ್ಞಾನ, ಧನ, ವಿವಾಹ, ಸಂತಾನ ಭಾಗ್ಯ ಮತ್ತು ಗೌರವದ ಸಂಕೇತವೆಂದು ಹೇಳಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹ ಬಲವಾಗಿದ್ದರೆ ಜೀವನದಲ್ಲಿ ಯಶಸ್ಸು, ಸಮೃದ್ಧಿ ಮತ್ತು ಸಮಾಜದಲ್ಲಿ ಮಾನ್ಯತೆ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಗುರು ದುರ್ಬಲವಾಗಿದ್ದರೆ ಆರ್ಥಿಕ ತೊಂದರೆ, ವಿವಾಹ ವಿಳಂಬ, ಉದ್ಯೋಗ ಅಡಚಣೆಗಳು ಮತ್ತು ಕುಟುಂಬ ಸಮಸ್ಯೆಗಳು ಎದುರಾಗಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಆದ್ದರಿಂದ ಗುರುವಾರದಂದು ಕೆಲವು ವಿಶೇಷ ದಾನಗಳನ್ನು ಮಾಡುವುದರಿಂದ ಗುರುಬಲ ಹೆಚ್ಚುತ್ತದೆ ಎಂದು ನಂಬಲಾಗುತ್ತದೆ.

ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ(Astro Tips) ಗುರುವಾರ ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ?

ಗುರುವಾರ ಹಳದಿ ಬಣ್ಣಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಈ ದಿನ ಹಳದಿ ಬಟ್ಟೆಗಳನ್ನು ಬಡವರಿಗೆ ಅಥವಾ ಅಗತ್ಯವಿರುವವರಿಗೆ ದಾನ ಮಾಡಿದರೆ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ ಎನ್ನುವ ನಂಬಿಕೆಯಿದೆ. ಹಳದಿ ಬಣ್ಣವು ಗುರು ಗ್ರಹದ ಸಂಕೇತವಾಗಿರುವುದರಿಂದ ಈ ದಾನವನ್ನು ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ.

ವಿವಾಹಕ್ಕೆ ಸಂಬಂಧಿಸಿದ ಅಡೆತಡೆಗಳು ಎದುರಾಗುತ್ತಿದ್ದರೆ ಗುರುವಾರದಂದು ಅರಿಶಿನ ದಾನ ಮಾಡುವ ಸಂಪ್ರದಾಯವಿದೆ. ಅರಿಶಿನವು ಶುಭದ ಸಂಕೇತವಾಗಿದ್ದು, ಇದನ್ನು ದಾನ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಶುಭಫಲಗಳು ದೊರೆಯುತ್ತವೆ ಎಂದು ನಂಬುತ್ತಾರೆ. ವಿಶೇಷವಾಗಿ ಮದುವೆ ವಿಳಂಬವಾಗುತ್ತಿರುವವರು ಈ ಪರಿಹಾರವನ್ನು ಅನುಸರಿಸುತ್ತಾರೆ.

Astro Tips: ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬೇಸತ್ತಿದ್ದೀರಾ? ಹಾಗಾದ್ರೆ ಮಂಗಳವಾರ ಈ ಒಂದು ವಸ್ತು ದಾನ ಮಾಡಿ ಸಾಕು

ಗುರುವಾರ ಬಾಳೆಹಣ್ಣು ದಾನ ಮತ್ತು ಬಾಳೆಮರ ಪೂಜೆಗೂ ವಿಶೇಷ ಸ್ಥಾನವಿದೆ. ಭಗವಾನ್ ವಿಷ್ಣು ಆರಾಧನೆಯಲ್ಲಿ ಬಾಳೆ ಎಲೆ ಮತ್ತು ಬಾಳೆಹಣ್ಣುಗಳನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಬಾಳೆಹಣ್ಣುಗಳನ್ನು ದಾನ ಮಾಡುವುದರಿಂದ ವಿಷ್ಣುವಿನ ಕೃಪೆ ದೊರೆಯುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎನ್ನುವ ನಂಬಿಕೆಯಿದೆ.

ಈ ದಿನ ಹಳದಿ ಬಣ್ಣದ ಆಹಾರ ಪದಾರ್ಥಗಳನ್ನು ದಾನ ಮಾಡುವುದೂ ಶುಭಕರವೆಂದು ಹೇಳಲಾಗುತ್ತದೆ. ಕಡಲೆಬೇಳೆ, ಕೇಸರಿ ಅನ್ನ, ಸಿಹಿ ಪೊಂಗಲ್ ಅಥವಾ ಹಳದಿ ಬಣ್ಣದ ಸಿಹಿತಿಂಡಿಗಳನ್ನು ದಾನ ಮಾಡುವುದರಿಂದ ಅದೃಷ್ಟ ವೃದ್ಧಿಯಾಗುತ್ತದೆ ಮತ್ತು ಜೀವನದಲ್ಲಿ ಶುಭಕರ ಅವಕಾಶಗಳು ಹೆಚ್ಚಾಗುತ್ತವೆ ಎಂದು ನಂಬುತ್ತಾರೆ.

ಮನೆಯಲ್ಲಿ ಅನ್ನಧಾನ್ಯ ಮತ್ತು ಆರ್ಥಿಕ ಸಮೃದ್ಧಿ ಹೆಚ್ಚಲು ಗುರುವಾರದಂದು ಅಕ್ಕಿಗೆ ಕೇಸರಿ ಅಥವಾ ಅರಿಶಿನ ಬೆರೆಸಿ ದಾನ ಮಾಡುವ ಪದ್ಧತಿಯೂ ಇದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿನ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಆಹಾರದ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ.

Astro Tips: ಸೋಮವಾರ ಶಿವನ ಜೊತೆ ಈ ದೇವರನ್ನು ಪೂಜಿಸಿದರೆ ಸಿಗುತ್ತದೆ ವಿಶೇಷ ಫಲ!

ವ್ಯಾಪಾರದಲ್ಲಿ ನಷ್ಟ ಅಥವಾ ಅಡಚಣೆಗಳನ್ನು ಎದುರಿಸುತ್ತಿರುವವರು ಗುರುವಾರದಂದು ಒಂದು ವೀಳ್ಯದೆಲೆಯ ಮೇಲೆ ಎರಡು ಸಂಪೂರ್ಣ ಅರಿಶಿನ ಕೊಂಬುಗಳನ್ನು ಇಟ್ಟು ಭಗವಾನ್ ವಿಷ್ಣು ಅವರಿಗೆ ಅರ್ಪಿಸುವುದು ಮಂಗಳಕರವೆಂದು ನಂಬಲಾಗುತ್ತದೆ. ಈ ಪರಿಹಾರದಿಂದ ವ್ಯಾಪಾರದಲ್ಲಿ ಲಾಭ ಮತ್ತು ಸ್ಥಿರತೆ ಹೆಚ್ಚುತ್ತದೆ ಎನ್ನುವ ನಂಬಿಕೆಯಿದೆ.

ಗುರುವಾರ ವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿ ಕೇಸರಿ ಮತ್ತು ಕುಂಕುಮವನ್ನು ದಾನ ಮಾಡುವುದೂ ಶುಭಕರವಾಗಿದೆ ಎಂದು ಹೇಳಲಾಗುತ್ತದೆ. ಇದರಿಂದ ಹಣದ ಹರಿವು ಹೆಚ್ಚುತ್ತದೆ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎನ್ನುವ ನಂಬಿಕೆ ಹಲವರಲ್ಲಿದೆ.

ಉದ್ಯೋಗದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಗುರುವಾರದಂದು ಗುರು ಬೃಹಸ್ಪತಿ ಅವರನ್ನು ಭಕ್ತಿಯಿಂದ ಪೂಜಿಸಿ ಹಳದಿ ಹಣ್ಣುಗಳು ಅಥವಾ ಹಳದಿ ಸಿಹಿತಿಂಡಿಗಳನ್ನು ಅರ್ಪಿಸಿದರೆ ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಆಚರಣೆಗಳು ಭಕ್ತಿ, ಸಂಪ್ರದಾಯ ಮತ್ತು ಜ್ಯೋತಿಷ್ಯ ನಂಬಿಕೆಗಳಿಗೆ ಸಂಬಂಧಿಸಿದವು. ಇವುಗಳನ್ನು ಧಾರ್ಮಿಕ ನಂಬಿಕೆಯ ಭಾಗವಾಗಿ ಅನೇಕರು ಅನುಸರಿಸುತ್ತಾರೆ.