ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ,ಅಕ್ಟೋಬರ್ 17, 2026: ಹೊಸ ಯೋಜನೆಗಳನ್ನು ರೂಪಿಸಲು ಸರಿಯಾದ ದಿನ!

Horoscope Today October 17th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಸಪ್ತಮಿ ತಿಥಿ, ಮೂಲ ನಕ್ಷತ್ರದ ಅಕ್ಟೋಬರ್‌ 17ನೇ ತಾರೀಖಿನ ಶನಿವಾರದ ಈ ದಿನ ನವರಾತ್ರಿಯ ಏಳನೇ ದಿನ, ಈ ದಿನದ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಮೂಲ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ .ವೃತ್ತಿ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸಿಗಬಹುದು. ಅದೇ ರೀತಿ ನಿಮ್ಮ ಬಾಸ್‌ಗಳಿಂದ ಹೊಗಳಿಕೆ ಸಿಗಬಹುದು. ಪ್ರತಿಷ್ಠೆ ಹಾಗೂ ಗೌರವ ಕೂಡ ಹೆಚ್ಚಾಗಬಹುದು.

ವೃಷಭ ರಾಶಿ: ಇಂದು ಅತೀ ಉತ್ತಮವಾದ ದಿನವಾಗಿದ್ದು  ಆರ್ಥಿಕವಾಗಿ ಅಭಿವೃದ್ದಿಯನ್ನು ಕಾಣುತ್ತೀರಿ. ಹಾಗೆಯೇ  ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಇಂದು ಸರಿಯಾದ ಸಮಯವಾಗಿದೆ.

ಮಿಥುನ ರಾಶಿ: ಇಂದು ಹೊಸ ಯೋಜನೆಗಳನ್ನು ಆರಂಭಿಸಲು ಸರಿಯಾದ ದಿನವಾಗಿದೆ. ಉದ್ಯೋಗದಲ್ಲಿ ಎಲ್ಲರ ಸಹಕಾರ ಸಿಗಬಹುದು.‌ ಆರೋಗ್ಯದಲ್ಲೂ ಸುಧಾರಣೆ ಆಗುತ್ತದೆ.

ಕರ್ಕಾಟಕ ರಾಶಿ: ತಾಯಿಯಿಂದ ಒಳ್ಳೆಯ ಶುಭ ಸುದ್ದಿಯನ್ನು ಕೇಳುತ್ತೀರಿ. ಮನೆಗೆ ಹೊಸ ವಸ್ತುಗಳನ್ನು ಖರೀದಿ ಮಾಡುವ ಯೋಗ ಕೂಡ ಇಂದು ಇದೆ.

ಸಿಂಹ ರಾಶಿ: ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿದ್ದು ಭವಿಷ್ಯದಲ್ಲಿ ಅಭಿವೃದ್ಧಿ ಕಾಣುತ್ತೀರಿ.

ಕನ್ಯಾ ರಾಶಿ: ನಿಮ್ಮ ಮಾತಿಗೆ ಇಂದು ಬೆಲೆ ಇದೆ. ಎಲ್ಲರೂ ನಿಮ್ಮ ಸಹಕಾರವನ್ನು ಕೇಳಬಹುದು. ಕುಟುಂಬದವರ ಮಾತಿಗೂ ಇಂದು ಮಹತ್ವ ಕೊಡಬೇಕಾಗುತ್ತದೆ.

Vastu Tips: ನಿಮ್ಮ ಆದಾಯ ಹೆಚ್ಚಾಗಿ ಕೋಟ್ಯಾಧಿಪತಿ ಆಗಬೇಕಾ? ಹಾಗಾದ್ರೆ ಈ ವಸ್ತುವನ್ನು ಜೇಬಿನಲ್ಲಿರಿಸಿ!

ತುಲಾ ರಾಶಿ: ಉದ್ಯೋಗದಲ್ಲಿ ನಿಮ್ಮ ಪ್ರಯತ್ನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುವ ಸಾಧ್ಯತೆಯಿದೆ. ಪ್ರೀತಿ ಮತ್ತು ದಾಂಪತ್ಯ ಜೀವನದಲ್ಲಿ ಅರ್ಥೈಸುವಿಕೆ ಬಹಳ ಮುಖ್ಯವಾಗುತ್ತದೆ.

ವೃಶ್ಚಿಕ ರಾಶಿ: ಉತ್ತಮವಾದ ದಿನವಾಗಿದ್ದು ಹಿಂದೆ ಬಾಕಿ ಇದ್ದ ಕೆಲಸಗಳು ಇಂದು ಪೂರ್ಣಗೊಳ್ಳಬಹುದು. ನಿಮ್ಮ ಹತ್ತಿರದವರ ಜೊತೆ ಇಂದು ಮನ ಬಿಚ್ಚಿ ಮಾತನಾಡಿ.

ಧನು ರಾಶಿ: ಇಂದು ಯಶಸ್ಸು ತರುವ ದಿನ ನಿಮ್ಮದಾಗುತ್ತದೆ. ಆದರೆ ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.

ಮಕರ ರಾಶಿ :ಕೆಲಸದಲ್ಲಿ ಜವಾಬ್ದಾರಿ ಸಿಗಲಿದ್ದು ನಿಮ್ಮ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ಸಿಗುತ್ತದೆ.ಆದರೆ ಹಣಕಾಸಿನ ನಿರ್ಧಾರಗಳಲ್ಲಿ ಆತುರ ಮಾಡುವುದು ಒಳಿತಲ್ಲ.

ಕುಂಭ ರಾಶಿ: ಹೊಸ ಆಲೋಚನೆಗಳು ಯಶಸ್ಸು ತಂದುಕೊಡಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ.

ಮೀನ ರಾಶಿ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.