ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಜುಲೈ 27, 2026: ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಇಂದು ಸುಧಾರಣೆ!

Horoscope Today July 27th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ತ್ರಯೋದಶಿ ತಿಥಿ, ಮೂಲ ನಕ್ಷತ್ರದ, ಜುಲೈ 27ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಮೂಲ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.

ಮೇಷ ರಾಶಿ: ಮೂಲ ನಕ್ಷತ್ರದ ಅಧಿಪತಿ ಕೇತು ಆಗಿದ್ದಾನೆ. ಹೀಗಾಗಿ ಹೆಚ್ಚಿನ ಜನರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದ್ದು ಕೆಲಸ ಕಾರ್ಯದಲ್ಲಿ ಅವಕಾಶಗಳು ಪ್ರಾಪ್ತಿಯಾಗುತ್ತದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ಕ್ಲೇಷ ಇಂದು ಪರಿಹಾರವಾಗುತ್ತದೆ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ತೊಂದರೆ ಎದುರಾಗಬಹುದು‌. ಮುಖ್ಯವಾದ ಕೆಲಸ ಕಾರ್ಯದಲ್ಲಿ ಹೆಚ್ಚಿನ ಒಡಕುಗಳು ಕಾಣಬಹುದು‌.

ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ.‌ ಪ್ರೇಮ,ಪ್ರೀತಿ ಪ್ರಕರಣದಲ್ಲಿ ಯಶಸ್ಸು ಸಿಗುತ್ತದೆ. ಬಿಸೆನೆಸ್ ಪಾರ್ಟ್ನರ್ಸ್ ಶೀಪ್ ವ್ಯವಹಾರ ಹಾಗೂ ಸಹೋದ್ಯೋಗಿಗಳ ಜೊತೆ ಪ್ರೀತಿಯಿಂದ ಇರುತ್ತೀರಿ. ಎಲ್ಲರ ಸಹಕಾರ ನಿಮಗೆ ದೊರೆಯುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಮಿಶ್ರಫಲ ಇರುತ್ತದೆ. ಶತ್ರುಗಳಿಂದ ತೊಂದರೆ ಇದ್ದರೂ ನಿವಾರಣೆ ಮಾಡಿಕೊಳ್ಳುತ್ತೀರಿ. ಮನಸ್ಸಿಗೆ ಸ್ವಲ್ಪ ಕಿರಿ ಕಿರಿ ಉಂಟಾಗುವ ಸಾಧ್ಯತೆಗಳು ಇದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರದಲ್ಲಿ ತೊಂದರೆ ಹಾಗೂ ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಾಗಬಹುದು‌.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಆಸ್ತಿ ಪಾಸ್ತಿ ವಿಚಾರವಾಗಿ ಜಾಗೃತವಾಗಿರಿ. ಕೋರ್ಟ್ ಕಛೇರಿ ವ್ಯವಹಾರ ವಿಚಾರದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇರಬಹುದು.

Vastu Tips: ಲಿವಿಂಗ್ ರೂಮ್ ವಾಸ್ತು: ಮನೆಗೆ ಸುಖ, ಸಮೃದ್ಧಿ ತರಲು ಪಾಲಿಸಬೇಕಾದ ಪ್ರಮುಖ ನಿಯಮಗಳು

ತುಲಾ ರಾಶಿ: ತುಲಾ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಬರವಣಿಗೆ, ಸೋಷಿಯಲ್ ಮೀಡಿಯಾದಲ್ಲಿ ಇರೋರಿಗೆ ಲಾಭದಾಯಕವಾಗಿದೆ. ನಿಮ್ಮ ಮಾತಿನ ಮೂಲಕವೇ ಇಂದು ಜಯಗಳಿಸುತ್ತೀರಿ.

ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಸಂಸಾರದ ಬಗ್ಗೆ ಹೆಚ್ಚು ಯೋಚನೆ ಮಾಡಬೇಕಾಗಿ ಬರಬಹುದು. ಅಣ್ಣ- ತಮ್ಮಂದಿರ ಹಾಗೂ ಬಂಧು- ಬಾಂಧವರ ಸಹಕಾರ ಸಿಗುತ್ತದೆ. ಎಲ್ಲ ವಿಚಾರದಲ್ಲೂ ನೆಮ್ಮದಿ ಸಿಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಉತ್ತಮ ದಿನವಾಗಿದೆ. ಇಂದು ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮುಂದಿನ ದಿನಗಳಿಗೆ ಸರಿಯಾದ ಮಾರ್ಗದರ್ಶನ ಕೂಡ ಸಿಗಬಹುದು‌.

ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ತೊಂದರೆ ಎದುರಾಗಬಹುದು. ಯಾವುದೇ ಮುಖ್ಯ ನಿರ್ಧಾರ ಬೇಡ‌

ಕುಂಭ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ . ಧನ ಆಗಮನ ಹಾಗೂ ಸ್ನೇಹಿತರಿಂದ ಖುಷಿ ನೆಮ್ಮದಿ ಇರುತ್ತದೆ. ಆದರೆ ದಾಂಪತ್ಯದಲ್ಲಿ ತೊಂದರೆ ಉಂಟಾಗಬಹುದು‌

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಹಾಗೂ ಪ್ರತಿಷ್ಠೆ ಹೆಚ್ಚಾಗುತ್ತದೆ. ಧಾರ್ಮಿಕ ಕೆಲಸದಲ್ಲಿ ಯಶಸ್ಸು.