ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಮಾರ್ಚ್ 6, 2026: ಇಂದು ಮುಖ್ಯವಾದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

Horoscope Today March 6: ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶರದೃತು, ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷ, ತೃತೀಯ ತಿಥಿ, ಹಸ್ತ ನಕ್ಷತ್ರದ ಮಾರ್ಚ್ 6ನೇ ತಾರೀಕಿನ ಈ ದಿನದ ಭವಿಷ್ಯದ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಇಂಟರ್‌ನೆಟ್ ಚಿತ್ರ

ಬೆಂಗಳೂರು: ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು, ಫಾಲ್ಗುಣ ಮಾಸೆ, ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಇಂದು ಹಸ್ತ ನಕ್ಷತ್ರ ಇದ್ದು, ಇದರ ಅಧಿಪತಿ ಚಂದ್ರ. ಹೀಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಲಿದೆ.‌ ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಹಣಕಾಸಿನ ವಿಚಾರವಾಗಿ ತೊಂದರೆ ಕಾಡಬಹುದು. ಆದ್ದರಿಂದ ಇಂದು ಯಾವುದೇ ವ್ಯವಹಾರ ಬೇಡ‌. ಮಕ್ಕಳ ಜತೆ ಭಾವುಕತೆಯಿಂದ ವ್ಯವಹಾರ ಮಾಡುವುದು ಅಗತ್ಯ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಸಂಸಾರ, ಮನೆಯ ಬಗ್ಗೆ ಯೋಚನೆಗಳು ಕಾಡುತ್ತಿರುತ್ತವೆ. ಆಸ್ತಿ ಪಾಸ್ತಿ ವಿಚಾರವಾಗಿಯೂ ನಿಮಗೆ ಸಮಸ್ಯೆ ಕಾಡಬಹುದು. ಹಾಗಾಗಿ ಮುಖ್ಯ ನಿರ್ಧಾರ ಬೇಡ.

ಕಟಕ ರಾಶಿ: ಕಟಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಉತ್ತಮ ದಿನವಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿಯವರ ಕುಟುಂಬದಲಿ ಮುಖ್ಯ ಘಟನೆ ನಡೆಯಲಿದೆ. ಹಾಗಾಗಿ ಕುಟುಂಬದ ಜತೆ ಸಮಯ ಕಳೆಯಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ನೋವೆಲ್ಲ ಮಾಯವಾಗಲಿದೆ.

ತಪ್ಪಿಯೂ ಅಡುಗೆಮನೆಯಲ್ಲಿ ಇಂತಹ ಕೆಲಸ ಮಾಡಬೇಡಿ

ತುಲಾ ರಾಶಿ: ತುಲಾ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ಪ್ರೀತಿ ಪಾತ್ರರಿಂದ ಯಾವುದೇ ಸಹಕಾರ ನಿಮಗೆ ಸಿಗುವುದಿಲ್ಲ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಧನಾಗಮನದ ಸೂಚನೆ ಇದ್ದು ಮಿತ್ರರಿಂದ ಲಾಭ ಸಿಗಲಿದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಜತೆಗೆ ಜವಾಬ್ದಾರಿಗಳು ಹೆಚ್ಚಾಗಿಯೇ ಇರಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಇಂದು ಅದೃಷ್ಟ ತರಲಿದ್ದು, ಭಗವಂತನ ಆಶೀರ್ವಾದ ಹಾಗೂ ಹಿರಿಯರ ಆಶೀರ್ವಾದ ಪ್ರಾಪ್ತಿಯಾಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ನಿರ್ಧಾರಗಳು ಬೇಡ. ಪ್ರೀತಿ ಪಾತ್ರರ ಸಹಕಾರ ಇಂದು ನಿಮಗೆ ಸಿಗುವುದಿಲ್ಲ.

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ದಾಂಪತ್ಯದಲ್ಲಿ ನೆಮ್ಮದಿ ಸಿಗಲಿದ್ದು ಸಂತೋಷವಾಗಿ ದಿನ ಕಳೆಯುತ್ತೀರಿ.