ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಅಕ್ಟೋಬರ್ 10, 2026: ಈ ರಾಶಿಗೆ ಇಂದು ಧನ- ಸಂಪತ್ತಿನ ಸುರಿಮಳೆ!

Horoscope Today October 10th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ಅಮಾವಾಸ್ಯ ತಿಥಿ, ಹಸ್ತ ನಕ್ಷತ್ರದ ಅಕ್ಟೋಬರ್‌ 10ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ನೀವು ಅಂದುಕೊಂಡಂತೆ ಎಲ್ಲವನ್ನು ಇಂದು ಸಾಧಿಸುತ್ತೀರಿ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಯಶಸ್ಸು ಸಿಗಲಿದ್ದು ಆರ್ಥಿಕವಾಗಿಯೂ ಅಭಿವೃದ್ಧಿ ಕಾಣುತ್ತೀರಿ.

ವೃಷಭ ರಾಶಿ: ಈ ರಾಶಿಗೆ ಇಂದು ಕಷ್ಟಕರವಾದ ದಿನವಾಗಿದೆ. ಮನಸ್ಸಿನ ಬಾಧೆ ಇಂದು ಹೆಚ್ಚಾಗಬಹುದು. ಅತೀಯಾಗಿ ಯೋಚಿಸಿ ಒತ್ತಡಕ್ಕೆ ಒಳಗಾಗಬಹುದು. ನಿಮ್ಮ ಬುದ್ದಿವಂತಿಕೆ ಯಿಂದ ಮಾತ್ರ ಇಂದು ಸಕ್ಸಸ್ ಕಾಣಲು ಸಾಧ್ಯ

ಮಿಥುನ ರಾಶಿ: ಇಂದು ಈ ರಾಶಿಗೆ ಮನೆಯಲ್ಲಿ ಹಾಗೂ ಮನಸ್ಸಿನಲ್ಲಿ ನೆಮ್ಮದಿ. ತಾಯಿಯೊಂದಿಗೆ ವಿಶೇಷವಾದ ದಿನವನ್ನು ಕಳೆಯುತ್ತೀರಿ. ಸಾಮಾಜಿಕ ಚಟುವಟಿಕೆ ಹಾಗೂ ಕೋರ್ಟ್, ಕಛೇರಿ ವ್ಯವಹಾರದಲ್ಲಿ ಜಯ ಕಾಣುತ್ತೀರಿ.

ಕಟಕರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಆದರೆ ಇಂದು ಮಾತಿನಲ್ಲಿ ನಿಗಾ ಇಡುವುದು ಉತ್ತಮ. ಆತ್ಮವಿಶ್ವಾಸದಿಂದ ಮಾಡಿದ ಕೆಲಸದಲ್ಲಿ ಮಾತ್ರ ಜಯಕಾಣುತ್ತೀರಿ.

‌ಸಿಂಹ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಮನೆಯಲ್ಲಿ ಹಾಗೂ ಮನಸ್ಸಿನಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಆದರೆ ಮಿತ್ರರಿಂದ ಒಡಕು ಉಂಟಾಗಲಿದ್ದು ಯಾರ ಸಹಕಾರವು ಪ್ರಾಪ್ತಿಯಾಗುವುದಿಲ್ಲ.

ಕನ್ಯಾ ರಾಶಿ: ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ತೊಂದರೆ ಎಲ್ಲವೂ ಮಾಯವಾಗುತ್ತದೆ. ಮುಂದಿನ ಕೆಲಸ ಕಾರ್ಯಗಳಿಗೆ ಸರಿಯಾದ ಮಾರ್ಗದರ್ಶನ ಇಂದು ದೊರಕುತ್ತದೆ.

Vastu Tips: ದಕ್ಷಿಣ ದಿಕ್ಕಿನಲ್ಲಿ ಈ ಸಸ್ಯಗಳನ್ನು ನೆಟ್ಟರೆ ಆರ್ಥಿಕ ಸಂಕಷ್ಟ ಹೆಚ್ಚಾಗಬಹುದು!

ತುಲಾ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಾರ ಸಹಕಾರವು ಸಿಗುವುದಿಲ್ಲ. ನಿಮ್ಮ ಮಿತ್ರತ್ವದಲ್ಲಿಯೇ ಹೆಚ್ಚಿನ ಒಡಕು ಕಾಣುತ್ತೀರಿ.

ವೃಶ್ಚಿಕ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗುಂಪು ಕೆಲಸದಿಂದ ಧನಲಾಭ ಪ್ರಾಪ್ತಿಯಾಗುತ್ತದೆ.

ಧನು ರಾಶಿ: ಇಂದು ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಒಂದು ತಿಂಗಳಿನ ಹಿಂದೆ ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಗುತ್ತದೆ.

ಮಕರ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಉಂಟಾಗಬಹುದು. ಆರ್ಥಿಕವಾಗಿಯೂ ಹೆಚ್ಚಿನ ಅಭಿವೃದ್ಧಿಯನ್ನು ಕಾಣುತ್ತೀರಿ.

ಕುಂಭ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಮುಖ್ಯ ನಿರ್ಧಾರದಲ್ಲಿ ಅಡಚಣೆ ಉಂಟಾಗಬಹುದು. ಯಾವುದೇ ಬಿಸಿನೆಸ್ ವ್ಯವಹಾರದ ನಿರ್ಧಾರ ಒಳಿತಲ್ಲ.

ಮೀನ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಎಲ್ಲರ ಸಹಕಾರ,ಗೌರವ ನಿಮಗೆ ಸಿಗುತ್ತದೆ.ಸಾಮಾಜಿಕ ಚಟುವಟಿಕೆ ಯಲ್ಲಿ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ‌.