ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಎಪ್ರಿಲ್ 9, 2026: ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಲಾಭದಾಯಕ ದಿನ!

Horoscope Today April 9: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ, ಸಪ್ತಮಿ ತಿಥಿ, ಪೂರ್ವಾಷಡ ನಕ್ಷತ್ರದ ಎಪ್ರಿಲ್ 9ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು ಚೈತ್ರ ಮಾಸೆ, ಪೂರ್ವಷಾಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಭಾಗ್ಯೋದಯವಾದ ದಿನ ವಾಗುತ್ತದೆ‌. ಮನಸ್ಸಿಗೆ ನೆಮ್ಮದಿ ಇದ್ದು ಮುಂದಿನ ಕೆಲಸಕ್ಕೆ ಮಾರ್ಗದರ್ಶನ ಸಿಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ನಿಮ್ಮ ಪ್ರೀತಿ ಪಾತ್ರರ ಜೊತೆ ತೊಂದರೆ ಉಂಟಾಗಬಹುದು. ಎರಡು ದಿನಗಳ ಬಳಿಕ ಎಲ್ಲವೂ ಸರಿಯಾಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ನಿಮ್ಮ ಸಹೋದ್ಯೋಗಿಗಳ ಜೊತೆ ಉತ್ತಮ ಭಾಂದವ್ಯ ಇರುತ್ತದೆ.‌ ಆದರೆ ಮಾತು ಕಡಿಮೆ ಮಾಡಿದರೆ ಬಹಳ ಒಳಿತು‌.

ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದ್ದು ಒಳ್ಳೆಯ ದಿನಕ್ಕೆ ಉತ್ತಮ ಸಮಯವಾಗಿದೆ. ನಿಮ್ಮ ಪ್ರೀತಿ ಪಾತ್ರರ ಜೊತೆ ಉತ್ತಮ ಸಮಯ ಕಳೆಯುತ್ತೀರಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಆರ್ಥಿಕ ಸಮಸ್ಯೆ ಇರುತ್ತದೆ. ಪ್ರೀತಿ ಪಾತ್ರರ ಜೊತೆಯೂ ಸಮಸ್ಯೆ ಇರುತ್ತದೆ. ಸಂಜೆಯ ಬಳಿಕ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಅಷ್ಟಾಗಿ ನೆಮ್ಮದಿ ಇರುವುದಿಲ್ಲ. ತಾಯಿಯ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಮಧ್ಯಾಹ್ನ ಬಳಿಕ ಸಮಾಧಾನಕರ ವಿಚಾರ ನಿಮಗೆ ಸಿಗಬಹುದು.

Vastu Tips: ಮನೆಗೆ ಶುಭ ತರೋ ಲಿವಿಂಗ್ ರೂಮ್ ವಾಸ್ತು ಹೇಗಿರಬೇಕು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಬಿಸೆನೆಸ್ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮಧ್ಯಾಹ್ನ ಬಳಿಕ ಮನೆಯವರ ಜೊತೆ ಉತ್ತಮ ಸಮಯ ಕಳೆಯಲಿದ್ದೀರಿ. ಹಾಗೆಯೇ ಖುಷಿಯಾದ ದಿನವನ್ನು ನೀವು ಕಳೆಯುತ್ತೀರಿ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಮಧ್ಯಾಹ್ನ ವರೆಗೆ ಯೋಚನೆ ತರುವ ದಿನವಾಗಿದೆ‌. ಮಧ್ಯಾಹ್ನ ಬಳಿಕ ನೀವು ನಿಮ್ಮ ಕುಟುಂಬ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೆ ಕಷ್ಟಕರವಾದ ದಿನವಾಗಿದೆ. ಮಧ್ಯಾಹ್ನ ಬಳಿಕ ಚಂದ್ರ ನಿಮ್ಮ ರಾಶಿಗೆ ಬಂದಿರುವುದರಿಂದ ಬಂದ ಸಮಸ್ಯೆ ಪರಿಹಾರ ಆಗಬಹುದು

ಕುಂಭರಾಶಿ: ಈ ರಾಶಿಯವರಿಗೆ ಈ ದಿನ ತುಂಬಾ ಪ್ರಾಶಸ್ತ್ಯ ತರುವ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಲಾಭ ಆಗಬಹುದು. ಆದರೆ ಸ್ನೇಹಿತರ ಜೊತೆ ಮಾತನಾಡುವಾಗ ಜಾಗೃತೆ ವಹಿಸಬೇಕು

ಮೀನ ರಾಶಿ: ಮೀನ ರಾಶಿಗೆ ಮಧ್ಯಾಹ್ನವರೆಗೂ ಕಾರ್ಯಕ್ಷೇತ್ರದ ಜವಾಬ್ದಾರಿ ಹೆಚ್ಚಾಗುತ್ತದೆ. ಮಧ್ಯಾಹ್ನ ಬಳಿಕ ಖುಷಿಯಾದ ದಿನವನ್ನು ನೀವು ಕಳೆಯುತ್ತೀರಿ.