ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಎಪ್ರಿಲ್ 7, 2026: ಯಾವ ರಾಶಿಗೆ ಒಲಿಯಲಿದೆ ಇಂದು ಅದೃಷ್ಟ?

Horoscope Today April 7: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ, ಪಂಚಮಿ ತಿಥಿ, ಜೇಷ್ಠ ನಕ್ಷತ್ರದ ಎಪ್ರಿಲ್ 7ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು ಚೈತ್ರ ಮಾಸೆ, ಜೇಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಆದರೆ ಇಂದು ನಿಮಗೆ ಭಾವುಕತೆ ಹೆಚ್ಚಾಗಿಯೇ ಇರುತ್ತದೆ‌. ಮನಸ್ಸಿನ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆ ಜಾಸ್ತಿಯಾಗಿರುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಅಂದು ಕೊಂಡ ಕೆಲಸ ಕಾರ್ಯಗಳು ಯಶಸ್ಸು ಕಾಣುತ್ತವೆ. ಪ್ರೀತಿ- ಪಾತ್ರರು ಹಾಗೂ ಸ್ನೇಹಿತರಿಂದ ನಿಮಗೆ ನೆಮ್ಮದಿ ಸಿಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಸಾಮಾಜಿಕ ಚಟುವಟಿಕೆಯಲ್ಲಿ ಇರೋರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ನಿಮ್ಮ ಅಂತರಾತ್ಮ ಹೇಳುವ ಮಾತುಗಳು ಇಂದು ಸತ್ಯವಾಗಿಯೇ ಇರುತ್ತದೆ. ಸೋಷಿಯಲ್ ಮೀಡಿಯಾ, ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡೋರಿಗೆ ಲಾಭದಾಯಕವಾಗಿದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ‌. ಮಾನಸಿಕವಾಗಿ ಇಂದು ತೊಂದರೆ ಜಾಸ್ತಿಯಾಗುವ ಸಾಧ್ಯತೆ ಇದೆ. ಹಾಗಾಗಿ ಯಾರನ್ನು ನಂಬದೇ ಇರುವುದು ಒಳ್ಳೆಯದು.

ಸಿಂಹ ರಾಶಿ: ಸಿಂಹ ರಾಶಿಯವರು ನಿಮ್ಮ ತಾಯಿಯ ಆರೋಗ್ಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ದಿನವಾಗಿದೆ. ಆದರೆ ಇಂದು ಒಳ್ಳೆಯ ಆಲೋಚನೆಯನ್ನೇ ನೀವು ಮಾಡಬೇಕಾಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಸಾಮಾಜಿಕ ಚಟುವಟಿಕೆ, ಬಂಧು ಬಂಧವರಿಂದ ಖುಷಿ ಸಿಗುತ್ತದೆ. ನೆಮ್ಮದಿಯಿಂದ ಸಮಯ ಕಳೆಯುತ್ತೀರಿ.

Vastu Tips: ನಿದ್ರಾಹೀನತೆ ಹೆಚ್ಚಳಕ್ಕೆ ಮಲಗುವ ಕೋಣೆಯೇ ಕಾರಣವೇ? ವಾಸ್ತುಶಾಸ್ತ್ರ ಈ ಬಗ್ಗೆ ಹೇಳೋದೇನು!

ತುಲಾ ರಾಶಿ: ತುಲಾ ರಾಶಿಯವರಿಗೆ ಹಣಕಾಸಿನ ವಿಚಾರವಾಗಿ ಇಂದು ಭಯ ಇರಬಹುದು. ಹಾಗಾಗಿ ಜಾಗರೂಕತೆಯಿಂದ ನಿರ್ಧಾರ ತೆಗೆದು ಕೊಳ್ಳಬೇಕು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ಉತ್ತಮವಾದ ದಿನವಾಗಿದೆ. ಸರಿಯಾದ ಅವಕಾಶಗಳು ನಿಮಗೆ ಒದಗಿ ಬರುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಕಷ್ಟಕರವಾದ ದಿನವಾಗಿದೆ‌. ನಾನಾ ರೀತಿಯ ಹಿಂಸೆಚ ನಿಮಗೆ ಉಂಟಾಗಬಹುದು.. ಪ್ರೇಮ ಪ್ರೀತಿ ವಿಚಾರದಲ್ಲೂ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ‌. ಎಲ್ಲವೂ ನಿಮ್ಮ ಪರವಾಗಿ ನಡೆಯುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ‌. ಸರಿಯಾದ ಮಾರ್ಗದರ್ಶನ ಕೂಡ ಪ್ರಾಪ್ತಿ ಯಾಗುತ್ತದೆ.

ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ. ಇಂದು ಭಾಗ್ಯೋದಯವಾದ ದಿನವಾಗಿದ್ದು ಮನಸ್ಸಿನ ತೊಂದರೆ ಎಲ್ಲವೂ ಮಾಯವಾಗುತ್ತದೆ..