ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಆಗಸ್ಟ್‌ 2, 2026: ಈ ರಾಶಿಗೆ ಹೊಸ ಯೋಜನೆಗಳನ್ನು ಕೈಗೊಳ್ಳಲು ಇಂದು ಪ್ರಾಪ್ತ ಕಾಲ!

Horoscope Today August 2nd: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ತೃತೀಯ ತಿಥಿ, ಉತ್ತರಭಾದ್ರಪದ ನಕ್ಷತ್ರದ, ಆಗಸ್ಟ್ 2ನೇ ತಾರೀಖಿನ ಭಾನುವಾರದ ಈ ದಿ‌ನ ಗುರು ಕರ್ಕಾಟಕ ರಾಶಿಯಲ್ಲಿ ಉಚ್ಚನಾಗಿದ್ದಾನೆ. ಹೀಗಾಗಿ ಮನೆ,ಸಂಪತ್ತು ಶಿಕ್ಷಣಕ್ಕೆ ಉತ್ತಮ ಯೋಗ ಇರುತ್ತದೆ.

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಉತ್ತರಭಾದ್ರಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ  ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು. ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಿಗಬಹುದು.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಸ್ನೇಹ ಸಂಬಂಧದಲ್ಲಿ ಖುಷಿ ಸಿಗಬಹುದು. ಸರಕಾರಿ ಕೆಲಸ ಬಯಸುವವರಿಗೆ ಇಂದು ಪ್ರಾಪ್ತ ಸಮಯವಾಗಿದೆ.

ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು ಸಹೋದ್ಯೋಗಿಗಳಿಂದ ಸಹಕಾರ ಸಿಗುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ಇಂದು ನೆಮ್ಮದಿ ಸಿಗಲಿದ್ದು ಹಳೆಯ ತೊಂದರೆ ಎಲ್ಲವೂ ಇಂದು ಬಗೆಹರಿಯುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮವಾದ ದಿನ ವಾಗಿದೆ.  ಮನೆ,ಆಸ್ತಿ ವಿಚಾರದಲ್ಲಿ ಇಂದು ನಿಮಗೆ ಲಾಭವಾಗಬಹುದು. ಆದರೆ ತಾಯಿಯ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ‌.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ವಿದ್ಯಾರ್ಥಿಗಳು ಉದ್ಯೋಗಿಗಳಿಗೆ ಶುಭ ದಿನವಾಗಿದೆ. ಹೊಸ ಯೋಜನೆಗಳಿಗೆ ಇಂದು ನೀವು ಚಾಲನೆ ನೀಡಬಹುದು‌.

Vastu Tips: ಜೇಡ್‌ ಸಸ್ಯವನ್ನು ಈ ದಿಕ್ಕಿನಲ್ಲಿ ಇಟ್ಟರೆ ಸಂಪತ್ತು ವೃದ್ಧಿ! ಫೆಂಗ್‌ ಶೂಯಿ ಹೇಳುವ ವಾಸ್ತು ನಿಯಮ ಇದು

ತುಲಾ ರಾಶಿ: ತುಲಾ ರಾಶಿ ಅವರಿಗೆ ಹಣಕಾಸು ಹಾಗು ಕುಟುಂಬದಲ್ಲಿ ಇಂದು ಜವಾಬ್ದಾರಿ ಅಗತ್ಯವಾಗಿ ಇರುತ್ತದೆ. ಖರ್ಚು ನಿಯಂತ್ರಣ ಮಾಡಿ ಉಳಿತಾಯದ ಕಡೆ ಗಮನ ವಹಿಸಿ.

ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಹೊಸ ಯೋಜನೆಗಳನ್ನು ಕೈಗೊಳ್ಳಲು ಲಾಭದಾಯಕವಾಗಿದೆ. ಇಂದು ನಿಮ್ಮ ಪ್ರತಿಷ್ಠೆ ಹೆಚ್ಚಾಗಬಹುದು‌.

ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆನ್ ಲೈನ್ ಕೆಲಸದಲ್ಲಿ ಯಶಸ್ಸು ಸಿಗಬಹುದು.ಆದರೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಅಭಿವೃದ್ಧಿ ಕಾಣುತ್ತೀರಿ. ಹೂಡಿಕೆಯಿಂದ ಭವಿಷ್ಯದಲ್ಲಿ ಉತ್ತಮ ಲಾಭ ಕಾಣುತ್ತೀರಿ

ಕುಂಭ ರಾಶಿ: ಈ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಹಾಗೂ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಕೆಲಸ ಕಾರ್ಯದಲ್ಲಿ ಪ್ರತಿಷ್ಠೆ ಸಿಗಬಹುದು.

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಅದೃಷ್ಟ ಹೆಚ್ಚಾಗಲಿದ್ದು ಹಿರಿಯರ ಆಶೀರ್ವಾದದಿಂದ ಯಶಸ್ಸು ಕಾಣುತ್ತೀರಿ.