ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಸೆಪ್ಟೆಂಬರ್ 24, 2026: ಇಂದು ಹೊಸ ಯೋಜನೆ ರೂಪಿಸಲು ಸರಿಯಾದ ಸಮಯ

Horoscope Today September 24th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ತ್ರಯೋದಶಿ ತಿಥಿ, ದನಿಷ್ಠ ನಕ್ಷತ್ರದ, ಸೆಪ್ಟೆಂಬರ್ 24ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಇಂಟರ್‌ನೆಟ್ ಚಿತ್ರ

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ದನಿಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.

ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಿಗಲಿದ್ದು ಅಂದುಕೊಂಡ ಕೆಲಸ ಕಾರ್ಯಗಳು ನೆರೆವೇರುತ್ತವೆ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಯಶಸ್ಸು ಕೈ ಹಿಡಿಯುತ್ತದೆ. ಕೆಲಸ ಕಾರ್ಯದಲ್ಲಿ ಅದೃಷ್ಟ ಪ್ರಾಪ್ತಿಯಾಗುತ್ತದೆ. ಧನಾಗಮನದ ಸೂಚನೆ ಇದೆ.

ಮಿಥುನ ರಾಶಿ: ಇಂದು ಕೆಲಸ ಕಾರ್ಯದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದ್ದು ತಂದೆಯಿಂದ ಧನ ಲಾಭವಾಗುತ್ತದೆ. ಆರ್ಥಿಕವಾಗಿ ಸದೃಢರಾಗುತ್ತೀರಿ.

ಕಟಕರಾಶಿ: ಇಂದು ಅಷ್ಟಮದಲ್ಲಿ ಚಂದ್ರ ಇದ್ದಾನೆ. ಮನಸ್ಸಿಗೆ ಕ್ಷೇಶ ಉಂಟಾಗಲಿದ್ದು, ಶತ್ರುಗಳೇ ಜಯ ಕಾಣಬಹುದು. ಮುಖ್ಯ ನಿರ್ಧಾರ ಯಾವುದೇ ಬೇಡ‌.

ಸಿಂಹ ರಾಶಿ: ಇಂದು ಅದೃಷ್ಟ ಹೆಚ್ಚಾಗಲಿದ್ದು, ಧನ ಲಾಭದ ಸೂಚನೆ ಇದೆ. ಪ್ರೀತಿ ಪಾತ್ರರಿಂದ ಸಹಕಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ.

ವಾಸ್ತು ಪ್ರಕಾರ ಈ ಗಿಡಗಳನ್ನು ಗಿಫ್ಟ್ ಮಾಡಬೇಡಿ! ಅದೃಷ್ಟಕ್ಕಿಂತ ದುಷ್ಪರಿಣಾಮವೇ ಹೆಚ್ಚು?

ಕನ್ಯಾ ರಾಶಿ: ಇಂದು ತೊಡಕುಗಳಿಗೆಲ್ಲ ಪರಿಹಾರ ಸಿಗಬಹುದು. ಹಿಂದಿನ ತೊಂದರೆಗಳೆಲ್ಲ ಪರಿಹಾರವಾಗಿ ಯಶಸ್ಸು ನಿಮ್ಮದಾಗುತ್ತದೆ.

ತುಲಾ ರಾಶಿ: ಇಂದು ಕಷ್ಟದ ದಿನವಾಗಲಿದೆ. ಧನ ವ್ಯಯವಾಗುವ ಸಾಧ್ಯತೆ ಇದೆ. ಮುಖ್ಯ ನಿರ್ಧಾರ ಯಾವುದೇ ಕೈಗೊಳ್ಳಲು ಹೋಗಬೇಡಿ.

ವೃಶ್ಚಿಕ ರಾಶಿ: ಆಸ್ತಿ ಪಾಸ್ತಿ ವಿಚಾರವಾಗಿ ಯಶಸ್ಸು ಸಿಗುತ್ತದೆ.‌ ಆರ್ಥಿಕವಾಗಿಯೂ ಹೆಚ್ಚಿನ ನೆಮ್ಮದಿ ಸಿಗುತ್ತದೆ.

ಧನು ರಾಶಿ: ಇಂದು ಉತ್ತಮವಾದ ದಿನವಾಗಲಿದೆ. ಮಿತ್ರರು ಸಹಕಾರ ನೀಡಬಹುದು. ಕೈ ಹಾಕಿದ ಕೆಲಸದಲ್ಲಿ ಜಯ ನಿಮ್ಮದಾಗುತ್ತದೆ.

ಮಕರ ರಾಶಿ: ಮನೆಯವರ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಮನೆಯಲ್ಲಿ ಪೂಜೆ ಸಮಾರಂಭಗಳು ನಡೆಯಬಹುದು.

ಕುಂಭ ರಾಶಿ: ಇಂದು ವ್ಯವಹಾರದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಕೆಲಸದಲ್ಲಿ ಪ್ರಮೋಷನ್ ಸಿಕ್ಕಿ ಹೆಚ್ಚಿನ ಅದೃಷ್ಟ ಪಡೆಯಲಿದ್ದೀರಿ.

ಮೀನ ರಾಶಿ: ಇಂದು ಯಶಸ್ಸು ನಿಮ್ಮದಾದರೂ ಹಣಕಾಸಿನ ವಿಚಾರವಾಗಿ ಜಾಗೃತಿ ವಹಿಸಬೇಕಾಗುತ್ತದೆ. ಯಾವುದೇ ವ್ಯವಹಾರದ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳಿ.