ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Horoscope Today February 4th: ಈ ರಾಶಿಗೆ ಇಂದು ಶುಕ್ರನಿಂದ ಸುವರ್ಣ ಸಮಯ

ನಿತ್ಯ ಭವಿಷ್ಯ ಫೆಬ್ರವರಿ 4, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಕೃಷ್ಣೆ ಪಕ್ಷದ, ತೃತೀಯ ತಿಥಿ,ಪೂರ್ವ ಪಾಲ್ಗುಣಿ ನಕ್ಷತ್ರದ ಫೆಬ್ರವರಿ 4ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಸಂಗ್ರಹ ಚಿತ್ರ

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು, ಮಘೆ ಮಾಸೆ, ಕೃಷ್ಣೆ ಪಕ್ಷದ, ಪೂರ್ವ ಪಾಲ್ಗುಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಪೂರ್ವ ಪಾಲ್ಗುಣಿ ನಕ್ಷತ್ರ ಇದ್ದು ಇದರ ಅದಿಪತಿ ಶುಕ್ರ ಆಗಿದ್ದಾನೆ. ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ.ಆದರೂ ಕೂಡ ನಿಮ್ಮ ಬುದ್ದಿವಂತಿಕೆಯಿಂದ ನೀವು ಎಲ್ಲವನ್ನು ನಿಭಾಯಿಸಿ ಕೊಳ್ಳಬೇಕಾಗುತ್ತದೆ. ಹಾಗೆಯೇ ಮಕ್ಕಳಿಗೆ ಸಂಬಂಧಿಸಿದ ‌ವಿಚಾರ ಹಾಗೂ ಹಣಕಾಸಿನ ಬಗ್ಗೆ ಜಾಗೃತರಾಗಿ ಇರಬೇಕಾಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರು ತಾಯಿಯ ಆರೋಗ್ಯ ಹಾಗೂ ಮನೆಯ ಜವಾಬ್ದಾರಿಯ ಬಗ್ಗೆ ಹೆಚ್ಚಿನ ಯೋಚನೆಯನ್ನು ಮಾಡಬೇಕಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ದಿನವಾಗಿದೆ..ಆದರೂ ಕೂಡ ನೀವು ಆತ್ಮವಿಶ್ವಾಸದಿಂದ ಮುಂದೆ ಹೋಗುತ್ತೀರಿ. ಮಾಧ್ಯಮ, ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡೋರಿಗೆ ಲಾಭದಾಯಕ ದಿನವಾಗಿದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಅತೀ ಉತ್ತಮವಾದ ದಿನ ವಾಗಿದೆ. ಮನೆಯಲ್ಲಿ ಹಾಗೂ ಸಂಸಾರದಲ್ಲಿ ನೆಮ್ಮದಿ ಇರುತ್ತದೆ. ಖುಷಿಯಿಂದ ದಿನವನ್ನು ಕಳೆಯುತ್ತೀರಿ

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹಿಂದಿನ ಎರಡು ಮೂರು ದಿನಗಳ ಕ್ಲೇಷ ಎಲ್ಲವೂ ಮಾಯವಾಗುತ್ತದೆ. ಸುಖವಾಗಿ ಇಂದು ದಿನವನ್ನು ಕಳೆಯುತ್ತೀರಿ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ವಿಚಾರದಲ್ಲಿ ಯಾವುದೇ ನಿರ್ಧಾರಗಳು ಬೇಡ. ಮುಖ್ಯವಾದ ಕೆಲಸ ಕಾರ್ಯದಲ್ಲಿ ಒಡಕು ಕಾಣುವ ಸಾಧ್ಯತೆ ಹೆಚ್ಚು ಇರುತ್ತದೆ.

Vastu Tips: ಮನೆಯಲ್ಲಿ ಸುಗಂಧರಾಜ ಗಿಡವನ್ನು ಈ ದಿಕ್ಕಿನಲ್ಲಿ ನೆಟ್ಟರೆ, ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ!

ತುಲಾ ರಾಶಿ: ತುಲಾ ರಾಶಿಗೆ ಅತೀ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇದ್ದು ಧನ ಲಾಭ ಕೂಡ ಸಿಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಾರ್ಯಕ್ಷೇತ್ರದ ಜವಾಬ್ದಾರಿಗಳು ಹೆಚ್ಚು ಆಗುತ್ತದೆ. ಕೆಲವರಿಗೆ ಮನೆಯಿಂದ ದೂರ ಪ್ರಯಾಣ ಮಾಡುವ ಸಂದರ್ಭ ಕೂಡ ಬರಬಹುದು.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ಎಲ್ಲ ತೊಂದರೆಗಳು ಬಗೆಹರಿಯುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ.‌ ಇಂದು ಯಾರು ನಿಮ್ಮ ಪರವಾಗಿ‌ ಮಾತನಾಡಲು ಬರದೇ ಇರಬಹುದು.

ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಎಲ್ಲ ರೀತಿಯ ಸಾಮಾಜಿಕ ಚಟುವಟಿಕೆ ಗಳಲ್ಲಿ ಹಾಗೂ ದಾಂಪತ್ಯದಲ್ಲಿ ನೆಮ್ಮದಿ ಇರುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಸಾಮಾಜಿಕ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.ಶತ್ರುಗಳಿಂದ ಜಯವನ್ನು ಕಾಣುತ್ತೀರಿ. ಆರೋಗ್ಯದಲ್ಲೂ ಸುಧಾರಣೆ ಕಂಡು ಬರುತ್ತದೆ.