ಬೆಂಗಳೂರು,ಮಾ.25: ವೃಶ್ಚಿಕ ರಾಶಿಗೆ ಕುಜನ ಪ್ರಭಾವ ಬಹಳ ಪ್ರಮುಖವಾಗಿರಲಿದ್ದು ಈ ವರ್ಷ ಮಿಶ್ರ ಫಲ ಇರುತ್ತದೆ.. ನಿಮಗೆ ಪಂಚಮ ಶನಿ ನಡೆಯುತ್ತಿರುವುದರಿಂದ ಹಲವು ರೀತಿಯ ಸಮಸ್ಯೆ ಗಳು ಕಂಡುಬರಬಹುದು. ನಿಮ್ಮ ಕೆಲಸದಲ್ಲಿ ಅಡೆ-ತಡೆ ಉದ್ಯೋಗ ಸಮಸ್ಯೆ, ಸಂತಾನ ಭಾಗ್ಯ ಇಲ್ಲದಿರುವುದು ಹೀಗೆ ನಾನಾ ಸಮಸ್ಯೆ ಕಾಡಬಹುದು. ಹಾಗೆಯೇ ಈ ವರ್ಷ ಸ್ನೇಹ ಸಂಬಂಧಗಳಲ್ಲಿ ನಂಬಿಕೆಯನ್ನು ಇಟ್ಟು ಕೆಲಸ ಮಾಡುವ ಬಗ್ಗೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿ ಬರಬಹುದು ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.