ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ಮನೆಯಲ್ಲಿ ಘಟಿಸುವ ಈ ದುರ್ಘಟನೆಗಳು ಅಶುಭದ ಸಂಕೇತವೇ ? ಜ್ಯೋತಿಷ್ಯ ಶಾಸ್ತ್ರದಲ್ಲಿದೆ ಇದಕ್ಕೆ ಉತ್ತರ

ಜೀವನದಲ್ಲಿ ಸಂಭವಿಸುವ ಕೆಲವು ಅಸಾಮಾನ್ಯ ಘಟನೆಗಳನ್ನು ಜ್ಯೋತಿಷ್ಯ ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ಶುಭ–ಅಶುಭ ಸಂಕೇತಗಳೆಂದು ಪರಿಗಣಿಸಲಾಗುತ್ತದೆ. ಮನೆಯ ತುಳಸಿ ಗಿಡ ಹಠಾತ್ತನೆ ಒಣಗುವುದು, ಮೇಲ್ಛಾವಣಿಯಲ್ಲಿ ಸತ್ತ ಪಕ್ಷಿ ಕಾಣಿಸಿಕೊಳ್ಳುವುದು, ಎಣ್ಣೆ ನೆಲಕ್ಕೆ ಬೀಳುವುದು, ಗಡಿಯಾರ ನಿಂತುಹೋಗುವುದು ಅಥವಾ ಉಪ್ಪು ಕೈಯಿಂದ ಕೆಳಗೆ ಬೀಳುವುದು ಇತ್ಯಾದಿ ಘಟನೆಗಳು ಬರಲಿರುವ ಸಂಕಷ್ಟಗಳ ಮುನ್ನೆಚ್ಚರಿಕೆಯೆಂದು ಕೆಲವರು ನಂಬುತ್ತಾರೆ.

ಅಶುಭ ಸಂಕೇತ

ಬೆಂಗಳೂರು: ಜೀವನದಲ್ಲಿ ಸುಖ–ದುಃಖಗಳು ಸಹಜ. ಆದರೆ ಜ್ಯೋತಿಷ್ಯ ಶಾಸ್ತ್ರ(Astrology) ಮತ್ತು ಕೆಲ ಧಾರ್ಮಿಕ ನಂಬಿಕೆಗಳ(Spiritual Beliefs) ಪ್ರಕಾರ, ನಮ್ಮ ಸುತ್ತಲಿನ ಕೆಲವು ಘಟನೆಗಳು ಬರಲಿರುವ ಶುಭ–ಅಶುಭ ಕಾಲದ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತವೆ ಎಂದು ಹೇಳಲಾಗುತ್ತದೆ. ಮನೆ ಮತ್ತು ದಿನನಿತ್ಯದ ಜೀವನದಲ್ಲಿ ಕಾಣಿಸಿಕೊಳ್ಳುವ ಕೆಲವು ಅಸಾಮಾನ್ಯ ಸಂಗತಿಗಳನ್ನು ಅಶುಭ ಸಂಕೇತಗಳೆಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ(Astro Tips) ಉಲ್ಲೇಖ ಆಗಿರುವ ಆ ಸೂಚನೆಗಳು ಯಾವುವು..? ಈ ಬಗ್ಗೆ ಶಾಸ್ತ್ರ ಹೇಳೋದೇನು..? ಎಂಬ ಮಾಹಿತಿ ಇಲ್ಲಿದೆ.

ತುಳಸಿ ಗಿಡ ಹಠಾತ್ತನೆ ಒಣಗುವುದು

ಮನೆಯ ಅಂಗಳದಲ್ಲಿರುವ ತುಳಸಿ ಗಿಡ ಹಠಾತ್ತನೆ ಒಣಗುವುದು ದುರಾದೃಷ್ಟದ ಸೂಚನೆ ಎಂದು ನಂಬಲಾಗುತ್ತದೆ. ತುಳಸಿಯು ಮನೆಗೆ ರಕ್ಷಣೆಯ ಸಂಕೇತವಾಗಿದ್ದು, ಕುಟುಂಬದ ಸದಸ್ಯರ ಮೇಲೆ ಬರುವ ವಿಪತ್ತನ್ನು ತನ್ನತ್ತ ಸೆಳೆಯುತ್ತದೆ ಎಂಬ ಅಭಿಪ್ರಾಯವಿದೆ. ಆದ್ದರಿಂದ ತುಳಸಿ ಒಣಗಿದರೆ ಮನೆಮಂದಿ ಎಚ್ಚರಿಕೆಯಿಂದಿರಬೇಕು ಎಂದು ಹಿರಿಯರು ಹೇಳುತ್ತಾರೆ.

ಮನೆಯ ಮೇಲ್ಛಾವಣಿಯಲ್ಲಿ ಸತ್ತ ಪಕ್ಷಿ ಕಾಣಿಸಿಕೊಳ್ಳುವುದು

ಮನೆಯ ಮೇಲ್ಛಾವಣಿಯಲ್ಲಿ ಸತ್ತ ಪಾರಿವಾಳ ಅಥವಾ ಇನ್ನಾವುದೇ ಪಕ್ಷಿ ಕಾಣಿಸುವುದು ಕೂಡ ಅಶುಭಕರವೆಂದು ಪರಿಗಣಿಸಲಾಗಿದೆ. ಇದು ಮನೆಯ ಮಕ್ಕಳ ಆರೋಗ್ಯ ಅಥವಾ ಕುಟುಂಬದ ಶಾಂತಿಯ ಮೇಲೆ ತೊಂದರೆ ಉಂಟಾಗುವ ಸೂಚನೆ ಎಂದು ಕೆಲವರು ನಂಬುತ್ತಾರೆ.

ಎಣ್ಣೆ ನೆಲಕ್ಕೆ ಬೀಳುವುದು

ಎಣ್ಣೆ ಹಠಾತ್ತನೆ ನೆಲಕ್ಕೆ ಬಿದ್ದು ನಿಧಾನವಾಗಿ ಹರಿಯುವುದನ್ನು ವ್ಯವಹಾರ ಅಥವಾ ಉದ್ಯೋಗದಲ್ಲಿ ನಷ್ಟದ ಸೂಚನೆ ಎಂದು ಹೇಳುತ್ತಾರೆ. ಇಂತಹ ಘಟನೆಗಳು ಆರ್ಥಿಕ ಅಡಚಣೆ ಅಥವಾ ಕೆಲಸಗಳಲ್ಲಿ ವಿಳಂಬ ಉಂಟಾಗುವ ಮುನ್ನೆಚ್ಚರಿಕೆಯೆಂದು ಪರಿಗಣಿಸಲಾಗುತ್ತದೆ.

Astro Tips: ಸಂಜೆ ದೀಪಾರಾಧನೆ ವೇಳೆ ಈ 4 ಮಂತ್ರ ಪಠಿಸಿದ್ರೆ ಮನೆಯಲ್ಲಿ ಸಂತೋಷ, ಅದೃಷ್ಟ ಹೆಚ್ಚಾಗುತ್ತದೆ

ನಿಂತುಹೋಗಿರುವ ಗಡಿಯಾರ

ಮನೆಯಲ್ಲಿ ನಿಂತುಹೋಗಿರುವ ಗಡಿಯಾರವನ್ನು ಇಡುವುದೂ ಅಶುಭವೆಂದು ಕೆಲವರು ನಂಬುತ್ತಾರೆ. ಗಡಿಯಾರವು ಸಮಯದ ಸಂಕೇತವಾಗಿದ್ದು, ಅದು ನಿಂತರೆ ಜೀವನದ ಪ್ರಗತಿಯಲ್ಲಿ ಅಡೆತಡೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ.

ಉಪ್ಪು ಕೈಯಿಂದ ಕೆಳಗೆ ಬೀಳುವುದು

ಉಪ್ಪು ಕೈಯಿಂದ ಕೆಳಗೆ ಬೀಳುವುದು ಆರ್ಥಿಕ ಸಂಕಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಉಪ್ಪು ಚೆಲ್ಲುವುದನ್ನು ಕೆಲವರು ಆಯುಷ್ಯ ಮತ್ತು ಗ್ರಹಬಲದೊಂದಿಗೆ ಕೂಡ ಸಂಪರ್ಕಿಸುತ್ತಾರೆ. ಆದ್ದರಿಂದ ಉಪ್ಪನ್ನು ಜಾಗ್ರತೆಯಿಂದ ಬಳಸಬೇಕು ಎಂದು ಹಿರಿಯರು ಸಲಹೆ ನೀಡುತ್ತಾರೆ. ಈ ಎಲ್ಲವುಗಳು ಧಾರ್ಮಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಅಭಿಪ್ರಾಯಗಳಾಗಿವೆ. ಅವುಗಳನ್ನು ಅಂಧನಂಬಿಕೆಯಾಗಿಯೂ ಪರಿಗಣಿಸುವವರು ಇದ್ದಾರೆ. ಆದರೂ ಇಂತಹ ಸಂಕೇತಗಳನ್ನು ಎಚ್ಚರಿಕೆಯ ಸೂಚನೆಗಳಾಗಿ ತೆಗೆದುಕೊಂಡು ಜಾಗ್ರತೆ ವಹಿಸುವುದು ಉತ್ತಮ.