Vastu Tips: ಮನೆಗೆ ಹೆಸರಿಡುವಾಗಲೂ ಪಾಲಿಸಬೇಕು ವಾಸ್ತು ನಿಯಮ
ಸುಂದರವಾದ ಮನೆ ಕಟ್ಟುವುದು ಅದಕ್ಕೊಂದು ಒಳ್ಳೆಯ ಹೆಸರು (Name board) ಇಡುವ ಕನಸು ಎಲ್ಲರಿಗೂ ಇರುತ್ತದೆ. ಮನೆ ಕಟ್ಟಿ ಆಯಿತು, ಹೆಸರು ಸೆಲೆಕ್ಟ್ ಆಯಿತು. ಅದನ್ನು ಬೋರ್ಡ್ ಮೇಲೆ ಬರೆಸಿ ತಂದು ಮನೆಯ ಗೇಟ್ ನಲ್ಲೋ ಅಥವಾ ಬಾಗಿಲ ಬಳಿಯೋ ಇಡುವ ಯೋಚನೆ ಮಾಡುತ್ತಿದ್ದೀರಾ ಹಾಗಿದ್ದರೆ ಸ್ವಲ್ಪ ನಿಲ್ಲಿ. ಈ ಬಗ್ಗೆ ವಾಸ್ತು (Vastu tips) ಏನು ಹೇಳುತ್ತದೆ ಕೇಳಿ.


ಸುಂದರವಾದ ಮನೆ ಕಟ್ಟುವುದು ಅದಕ್ಕೊಂದು ಒಳ್ಳೆಯ ಹೆಸರು (Name board) ಇಡುವ ಕನಸು ಎಲ್ಲರಿಗೂ ಇರುತ್ತದೆ. ಮನೆ ಕಟ್ಟಿ ಆಯಿತು, ಹೆಸರು ಸೆಲೆಕ್ಟ್ ಆಯಿತು. ಅದನ್ನು ಬೋರ್ಡ್ ಮೇಲೆ ಬರೆಸಿ ತಂದು ಮನೆಯ ಗೇಟ್ ನಲ್ಲೋ ಅಥವಾ ಬಾಗಿಲ ಬಳಿಯೋ ಇಡುವ ಯೋಚನೆ ಮಾಡುತ್ತಿದ್ದೀರಾ ಹಾಗಿದ್ದರೆ ಸ್ವಲ್ಪ ನಿಲ್ಲಿ. ಈ ಬಗ್ಗೆ ವಾಸ್ತು (Vastu tips) ಏನು ಹೇಳುತ್ತದೆ ಕೇಳಿ. ಅರೆ ಮನೆಯ ಹೆಸರಿನ ಬೋರ್ಡಿಗೂ ವಸ್ತುವಿಗೂ ಏನು ಸಂಬಂಧ ಎನ್ನುವ ಯೋಚನೆ ಮಾಡುತ್ತಿದ್ದೀರಾ ಖಂಡಿತಾ ಸಂಬಂಧ ಇದೆ. ಮನೆಗೆ ಯಾರೇ ಬರಲಿ ಮೊದಲು ಎಲ್ಲರ ಗಮನ ಸೆಳೆಯುತ್ತದೆ ಮನೆಯ ನೇಮ್ ಬೋರ್ಡ್. ಹೀಗಾಗಿ ಇದನ್ನು ಇಡುವ ಮೊದಲು ವಾಸ್ತು ಹೇಳುವ ಕೆಲವು ಅಂಶಗಳನ್ನು ಗಮನಿಸಲೇಬೇಕು.
ಕೆಲವರು ಮನೆಯ ಮುಂಭಾಗದಲ್ಲಿ ಮನೆಯ ಹೆಸರೇನೋ ಸರಿ ಜೊತೆಗೆ ತಮ್ಮ ಹೆಸರನ್ನು ಬರೆಯುತ್ತಾರೆ ಇದು ಸರಿಯೇ ಎನ್ನುವುದು ಕೂಡ ಎಲ್ಲರೂ ಯೋಚಿಸಲೇಬೇಕಾದ ಪ್ರಶ್ನೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸುತ್ತಲೂ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯ ಹರಿವು ನಿರಂತರ ಇರುತ್ತದೆ. ಹೀಗಾಗಿ ಮನೆಯ ಬಾಗಿಲಲ್ಲಿ ಹೆಸರುಗಳನ್ನು ಬರೆಯುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಒಳಹರಿವು ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
ವಾಸ್ತುಶಾಸ್ತ್ರದಲ್ಲಿ ಮನೆಯ ಮುಖ್ಯದ್ವಾರದ ಕುರಿತು ಹಲವಾರು ನಿಯಮಗಳನ್ನು ಹೇಳಲಾಗಿದೆ. ಇದರಲ್ಲಿ ಬಾಗಿಲಿನ ಬಳಿ ಹೆಸರು ಬರೆಯುವುದು ಅಥವಾ ಹೆಸರಿನೊಂದಿಗೆ ನಾಮಫಲಕವನ್ನು ಇಡುವುದು ಕೂಡ ಸೇರಿವೆ. ಮನೆಗೆ ಬರುವವರಿಗೆ ಅಥವಾ ದಾರಿಯಲ್ಲಿ ಹೋಗುವವರಿಗೆ ಸುಲಭವಾಗಿ ಇದು ತಮ್ಮ ಮನೆ ಎಂದು ತಿಳಿಯಲು ಅನೇಕರು ತಮ್ಮ ಹೆಸರನ್ನು ಮುಖ್ಯ ಬಾಗಿಲಿನ ಬಳಿ ಕೆತ್ತುತ್ತಾರೆ ಅಥವಾ ನಾಮಫಲಕವನ್ನು ಅಂಟಿಸುತ್ತಾರೆ. ಆದರೆ ಇದು ಸರಿಯಲ್ಲ ಎನ್ನುತ್ತಾರೆ ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್.

ಹೆಸರು ಏಕೆ ಬರೆಯಬಾರದು?
ಮನೆಯ ಸುತ್ತಲೂ ಸದಾ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳ ಸಂಚಾರವಿರುತ್ತದೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಹೆಸರನ್ನುಮನೆಯ ಬಾಗಿಲ ಬಳಿ ಬರೆಯುವುದರಿಂದ ಮನೆಗೆ ಪ್ರವೇಶಿಸುವ ನಕಾರಾತ್ಮಕ ಶಕ್ತಿಯಿಂದ ಖಂಡಿತ ನಮಗೆ ತೊಂದರೆ ಉಂಟಾಗುತ್ತದೆ. ಅಲ್ಲದೇ ಮನೆಗೆ ಪ್ರವೇಶಿಸುವ ಧನಾತ್ಮಕ ಶಕ್ತಿಯು ಮನೆಯ ಪೂರ್ವ ದಿಕ್ಕಿನತ್ತ ಚಲಿಸುತ್ತದೆ.
ಮನೆಯ ಹೊರಗೆ ಹೆಸರು ಬರೆಯುವುದರಿಂದ ಅಥವಾ ನಾಮಫಲಕಗಳನ್ನು ನೇತುಹಾಕುವುದರಿಂದ ಮನೆಯಲ್ಲಿ ವಾಸ್ತು ದೋಷಗಳು ಹೆಚ್ಚಾಗುತ್ತವೆ ಎಂದು ನಂಬಲಾಗಿದೆ. ಮನೆಯ ಪ್ರತಿಯೊಂದು ಸ್ಥಳದಲ್ಲೂ ಒಂದೊಂದು ಗ್ರಹ ಶಕ್ತಿ ಇರುವುದರಿಂದ ಇದರಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆ ಇರುತ್ತದೆ. ಮನೆಯ ಹೊರಗಿನ ಸ್ಥಳವು ರಾಹು ಗ್ರಹಕ್ಕೆ ಸೇರಿದೆ. ಇದನ್ನು ಪಾಪ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ವ್ಯತ್ಯಾಸಗಳಾದಾಗ ನಾನಾ ರೀತಿಯ ಸಮಸ್ಯೆಗಳು ಉದ್ಭವವಾಗುತ್ತದೆ.
ಇದನ್ನೂ ಓದಿ: Vastu Tips: ಬಾಗಿಲ ಹಿಂದೆ ಬಟ್ಟೆ ತೂಗು ಹಾಕುವುದು ಒಳ್ಳೆಯದೇ ?

ಹಾಗಾದರೆ ಹೆಸರು ಬರೆಯುವುದು ಹೇಗೆ?
ಮನೆಯ ಹೊರಗೆ ಹೆಸರು ಬರೆಯಲೇಬೇಕು ಅಥವಾ ನಾಮಫಲಕವನ್ನು ನೇತುಹಾಕಲೇಬೇಕು ಎಂದಿದ್ದರೆ ಇದು ರಾಹುವಿನ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡದಂತೆ ಎಚ್ಚರವಹಿಸಿ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಬಾಗಿಲ ಬಳಿ ನಾಮಫಲಕವನ್ನು ನೇತುಹಾಕಲು ಬಯಸಿದರೆ ಅದನ್ನು ನಿಮ್ಮ ಹೆಸರಿನಿಂದ ಬರೆಯಬೇಡಿ. ಬದಲಿಗೆ ಮನೆಗೆ ಒಂದು ಹೆಸರನ್ನು ಕೊಡಿ ಮತ್ತು ಅದನ್ನೇ ಮನೆಯ ಹೊರಗೆ ಬರೆಯಿರಿ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮುಖ್ಯದ್ವಾರದ ಮೇಲೆ ಮನೆಗೆ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸಬಲ್ಲ ಹೆಸರನ್ನು ನೀಡಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ.