ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಬಾಗಿಲ ಹಿಂದೆ ಬಟ್ಟೆ ತೂಗು ಹಾಕುವುದು ಒಳ್ಳೆಯದೇ ?

Vastu Shastra: ಮನೆಯಲ್ಲಿ ಕೆಲವೊಮ್ಮೆ ನಾವು ಸಣ್ಣ ಪುಟ್ಟ ವಿಚಾರಗಳನ್ನು ನಿರ್ಲಕ್ಷಿಸುತ್ತೇವೆ. ಇಂತಹ ಸಣ್ಣ ವಿಷಯಗಳಲ್ಲಿ ಏನಿದೆ ಎಂದುಕೊಳ್ಳುತ್ತೇವೆ. ಆದರೆ ಈ ಸಣ್ಣಪುಟ್ಟ ಸಂಗತಿಗಳೇ ಕೆಲವೊಮ್ಮೆ ಮನೆಯಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ತಂದೊಡ್ಡಬಹುದು. ಹೀಗಾಗಿ ಮನೆಯಲ್ಲಿ ಯಾವುದೇ ವಿಷಯವನ್ನು ನಿರ್ಲಕ್ಷಿಸುವಂತಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.

ಮನೆಯ ವಾಸ್ತು ದೋಷಕ್ಕೆ ಕಾರಣವಾಗುವ ಈ ಒಂದು ತಪ್ಪು ಮಾಡದಿರಿ

ಸಾಂದರ್ಭಿಕ ಚಿತ್ರ.

ಬೆಂಗಳೂರು: ಮನೆಯಲ್ಲಿ (Vastu for home) ಕೆಲವೊಮ್ಮೆ ನಾವು ಸಣ್ಣ ಪುಟ್ಟ ವಿಚಾರಗಳನ್ನು ನಿರ್ಲಕ್ಷಿಸುತ್ತೇವೆ. ಇಂತಹ ಸಣ್ಣ ವಿಷಯಗಳಲ್ಲಿ ಏನಿದೆ ಎಂದುಕೊಳ್ಳುತ್ತೇವೆ. ಆದರೆ ಈ ಸಣ್ಣಪುಟ್ಟ ಸಂಗತಿಗಳೇ ಕೆಲವೊಮ್ಮೆ ಮನೆಯಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ತಂದೊಡ್ಡಬಹುದು. ಹೀಗಾಗಿ ಮನೆಯಲ್ಲಿ ಯಾವುದೇ ವಿಷಯವನ್ನು ನಿರ್ಲಕ್ಷಿಸುವಂತಿಲ್ಲ ಎನ್ನುತ್ತಾರೆ ವಾಸ್ತು (Vastu Tips) ತಜ್ಞರು. ಇತ್ತೀಚಿನ ದಿನಗಳಲ್ಲಿ ಮನೆ ದೊಡ್ಡದಾಗಿರಬಹುದು. ಆದರೆ ಮನೆಯಲ್ಲಿರುವ ಸದಸ್ಯರು ಕಡಿಮೆ ಇರಬಹುದು. ಆದರೆ ವಸ್ತುಗಳು ಮಾತ್ರ ಸುಮಾರು ಹತ್ತು ಜನರು ಬಳಸುವಷ್ಟಿರುತ್ತದೆ. ಇವುಗಳಲ್ಲಿ ಬಟ್ಟೆಗಳೂ ಸೇರಿವೆ. ಬಟ್ಟೆಗಳನ್ನು ಇಡಲು ರೀತಿನೀತಿಗಳಿವೆ. ಒಂದು ವೇಳೆ ಅವುಗಳನ್ನು ಎಲ್ಲೆಂದರಲ್ಲಿ ಇಟ್ಟರೆ ಸಮಸ್ಯೆಗಳು ಉದ್ಬವವಾಗುವುದು ಗ್ಯಾರಂಟಿ ಎನ್ನುತ್ತದೆ ವಾಸ್ತು ಶಾಸ್ತ್ರ.

ಸಾಮಾನ್ಯವಾಗಿ ಮನೆಯ ಬಾಗಿಲಿನ ಹಿಂದೆ ಹುಕ್ ಗಳನ್ನು ಇಟ್ಟು ಬಟ್ಟೆ, ಬ್ಯಾಗ್ ಗಳನ್ನು ತೂಗು ಹಾಕುವ ಪದ್ಧತಿ ಬಹುತೇಕರು ಮಾಡುತ್ತಾರೆ. ಆದರೆ ಇದು ಸರಿಯೇ? ಅಯ್ಯೋ ಇದರಿಂದ ಏನಾಗುತ್ತದೆ ಎಂದು ನಿರ್ಲಕ್ಷಿಸಬೇಡಿ. ಇದು ಮನೆಗೆ ದೊಡ್ಡ ದೊಡ್ಡ ಸಮಸ್ಯೆಗಳನ್ನು ತರಬಹುದು. ಬಾಗಿಲ ಹಿಂದೆ ಯಾವತ್ತೂ ಯಾವುದನ್ನೂ ಅದರಲ್ಲೂ ಮುಖ್ಯವಾಗಿ ಬಟ್ಟೆಗಳನ್ನು ನೇತು ಹಾಕಬಾರದು. ಇದರಿಂದ ಮನೆಯ ಶಕ್ತಿ ಮತ್ತು ಸಮೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

cloth (1)

ತಿಳಿದೋ ತಿಳಿಯದೆಯೋ ನಾವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ನಮ್ಮ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಅಂತಹ ಒಂದು ಅಭ್ಯಾಸವೆಂದರೆ ಬಾಗಿಲ ಹಿಂದೆ ಬಟ್ಟೆ ನೇತು ಹಾಕುವುದು.

ಇದನ್ನೂ ಓದಿ: Vastu Tips: ನಕಾರಾತ್ಮಕತೆಯನ್ನು ಆಹ್ವಾನಿಸದಿರಿ; ಉಡುಗೊರೆ ಕೊಡುವ ಮುನ್ನ ಯೋಚಿಸಿ

ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಕೆಲವು ಸಾಮಾನ್ಯ ಅಭ್ಯಾಸವು ಯಾರಿಗೂ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ ಎಂದೆನಿಸಿದರೂ ಅದು ನಮಗೆ ಜೀವನದಲ್ಲಿ ಹಿನ್ನಡೆಗೆ ಕಾರಣವಾಗಬಹುದು ಎನ್ನುತ್ತಾರೆ ವಾಸ್ತು ತಜ್ಞರಾದ ಪ್ರದುಮಾನ್ ಸೂರಿ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರತಿಯೊಂದು ಬಾಗಿಲು ಧನಾತ್ಮಕ ಶಕ್ತಿಗೆ ಪ್ರವೇಶ ಮತ್ತು ನಕಾರಾತ್ಮಕ ಶಕ್ತಿಗೆ ನಿರ್ಗಮನದ ಮಾರ್ಗವಾಗಿದೆ. ಹೀಗಾಗಿ ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತು ಹಾಕುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಈ ಅಭ್ಯಾಸವು ವಾಸ್ತು ದೋಷಕ್ಕೆ ಕಾರಣವಾಗಬಹುದು.

vastu

ಬಾಗಿಲಿನ ಹಿಂದೆ ನೇತು ಹಾಕಿರುವ ಬಟ್ಟೆಗಳು ಶಕ್ತಿಯ ಹರಿವನ್ನು ತಡೆಯುತ್ತದೆ. ಇದು ಅಶಾಂತಿ, ಮಾನಸಿಕ ಒತ್ತಡ ಮತ್ತು ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತು ಹಾಕುವುದರಿಂದ ಮನೆಯ ಪರಿಸರವು ಅಸ್ತವ್ಯಸ್ತವಾಗುತ್ತದೆ. ಇದು ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಚಿಂತನೆಗೆ ಅಡ್ಡಿಯಾಗುತ್ತದೆ.

ಸಾಮಾನ್ಯವಾಗಿ ನಾವು ಒಂದೆರಡು ಬಾರಿ ಹಾಕಿದ ಕೊಳಕು ಬಟ್ಟೆಗಳನ್ನು ಬಾಗಿಲಿನ ಹಿಂದೆ ನೇತು ಹಾಕುತ್ತೇವೆ. ಇದರಿಂದ ಅದರಲ್ಲಿ ದೀರ್ಘಕಾಲ ಧೂಳು ಮತ್ತು ಕೊಳಕು ಅಂಟಿಕೊಂಡಿರುತ್ತದೆ. ಇದು ಮನೆಯ ಪರಿಸರವನ್ನು ಕಲುಷಿತಗೊಳಿಸುತ್ತದೆ ಮತ್ತು ಕುಟುಂಬ ಸದಸ್ಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಈ ಅಭ್ಯಾಸವು ಮನೆಯ ಆ ಸ್ಥಳದಲ್ಲಿ ವಾಸ್ತು ದೋಷವನ್ನು ಉಂಟು ಮಾಡುತ್ತದೆ. ಇದರಿಂದ ಕುಟುಂಬ ಸದಸ್ಯರ ಸಂಬಂಧಗಳು ಹಾಳಾಗುತ್ತವೆ. ದಕ್ಷತೆ ಮತ್ತು ಸಮೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ.

ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತುಹಾಕುವುದು ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ. ಇದು ಅಸ್ತವ್ಯಸ್ತತೆಯ ಭಾವನೆಯನ್ನು ನೀಡುತ್ತದೆ. ಈ ಬಟ್ಟೆಗಳನ್ನು ನೋಡಿದಾಗಲೆಲ್ಲ ಅವು ನಮ್ಮ ಮನಸ್ಸಿನ ಸ್ಥಿತಿಯ ಮೇಲೂ ಪರಿಣಾಮ ಬೀರಿ ಮನಸ್ಸನ್ನು ಅಸ್ಥಿರಗೊಳಿಸುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.