ಬೆಂಗಳೂರು: ವಿವಿಧ ರೀತಿಯ ಸಸ್ಯಗಳನ್ನು ನಾವು ಮನೆಯ (Vastu for home) ಅಲಂಕಾರದಲ್ಲಿ ಸೇರಿಸಿಕೊಳ್ಳುತ್ತೇವೆ. ಇವುಗಳಲ್ಲಿ ಬಿದಿರು (Vastu for Bamboo plant) ಕೂಡ ಒಂದು. ಬಿದಿರಿನ ಗಿಡವು ಸಕಾರಾತ್ಮಕ ಶಕ್ತಿಯ ಸಂಕೇತ. ಆದರೆ ಇದನ್ನು ಸೂಕ್ತವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಕೆಲವೊಂದು ನಿಯಮಗಳ ಪಾಲಿಸಬೇಕು. ಹಾಗೆ ಮಾಡಿದರೆ ಮಾತ್ರ ಮನೆಯು (Vastu tips for home) ದೇಹ, ಮನಸ್ಸು ಮತ್ತು ಚೈತನ್ಯವನ್ನು ಪೋಷಿಸುವ ಸಾಮರಸ್ಯದ ಸ್ವರ್ಗವಾಗಿ ಮಾರ್ಪಡುತ್ತದೆ. ಅದೃಷ್ಟ ಮತ್ತು ಸಮೃದ್ಧಿಯನ್ನು ಆಹ್ವಾನಿಸುವ ಗಿಡವಾದ ಬಿದಿರಿನಿಂದ ವಿಶಿಷ್ಟ ಪ್ರಯೋಜನಗಳಿವೆ ಎನ್ನುತ್ತಾರೆ ವಾಸ್ತು (Vastu shastra) ತಜ್ಞರಾದ ಪೂಜಾ ಸೇಠ್.
ಮನೆಯ ಸೌಂದರ್ಯ ಹೆಚ್ಚಿಸುವಲ್ಲಿ ಸಣ್ಣ ಸಸ್ಯಗಳ ಪಾತ್ರ ದೊಡ್ಡದಿದೆ. ನಾನಾ ಜಾತಿಯ ಸಸ್ಯಗಳನ್ನು ನಾವು ಮನೆಯಲ್ಲಿ ಇರಿಸಿಕೊಳ್ಳುತ್ತೇವೆ. ಇದು ಮನೆಯ ವಾಸ್ತುವಿನ ಮೇಲೂ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ. ಹೆಚ್ಚಾಗಿ ಮನೆಯಲ್ಲಿ ಇರಿಸಲಾಗುವ ಬಿದಿರಿನ ಗಿಡವನ್ನು ಇಡುವಲ್ಲಿ ಕೆಲವು ವಾಸ್ತು ನಿಯಮಗಳನ್ನು ಪಾಲಿಸಿದರೆ ಹಲವು ಪ್ರಯೋಜನಗಳನ್ನು ಪಡೆಯಬಹುದು.
ಬಿದಿರಿನ ಗಿಡವನ್ನು ಮನೆ ಅಥವಾ ಕಚೇರಿಯ ಆಗ್ನೇಯ ಮೂಲೆಯಲ್ಲಿ ಇಡಬೇಕು. ಈ ದಿಕ್ಕು ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದೆ. ಪೂರ್ವ ಮೂಲೆಯಲ್ಲಿ ಇಡುವುದು ಸಹ ಪ್ರಯೋಜನಕಾರಿ. ಯಾಕೆಂದರೆ ಅದು ಕುಟುಂಬ ಮತ್ತು ಆರೋಗ್ಯವನ್ನು ಪ್ರತಿನಿಧಿಸುತ್ತದೆ. ನೇರ ಸೂರ್ಯನ ಬೆಳಕನ್ನು ಬೀಳುವ ಪ್ರದೇಶಗಳಲ್ಲಿ ಬಿದಿರನ್ನುಇಡಬಾರದು. ಇದು ಪರೋಕ್ಷ ಬೆಳಕನ್ನು ಬಯಸುವ ಸಸ್ಯ.
ಇದನ್ನೂ ಓದಿ: Vastu Tips: ಆರ್ಥಿಕ ಸಮೃದ್ಧಿಗಾಗಿ ಸರಿಯಾದ ದಿಕ್ಕಿನಲ್ಲಿ ದೀಪ ಬೆಳಗಿಸಿ
ಬಿದಿರಿಗೆ ಇರಿಸಿರುವ ನೀರನ್ನು ನಿಯಮಿತವಾಗಿ ಬದಲಾಯಿಸಬೇಕು. ಕನಿಷ್ಠ 7-10 ದಿನಗಳಿಗೊಮ್ಮೆಯಾದರೂ ಬದಲಾವಣೆ ಮಾಡಬೇಕು. ಇದರಿಂದ ಸಸ್ಯವು ಆರೋಗ್ಯದಿಂದ ನಳನಳಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ಗಿಡದ ಬುಡದಲ್ಲಿ ನಿಂತ ನೀರು ಸಸ್ಯಕ್ಕೆ ಹಾನಿ ಮಾಡುತ್ತದೆ. ಮಾತ್ರವಲ್ಲ ನಕಾರಾತ್ಮಕ ಶಕ್ತಿಯನ್ನು ಸಹ ಸೃಷ್ಟಿಸುತ್ತದೆ.
ಬಿದಿರು ಸುತ್ತಮುತ್ತಲಿನ ಗಾಳಿಯನ್ನು ಶುದ್ದೀಕರಿಸುತ್ತದೆ. ಇದು ವಿಷ ಅನಿಲವನ್ನು ಹೀರಿಕೊಳ್ಳುತ್ತದೆ. ತಾಜಾ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಸ್ವಚ್ಛ ಮತ್ತು ಆರೋಗ್ಯಯುತ ವಾತಾವರಣವನ್ನು ಉತ್ತೇಜಿಸುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮ ವೃದ್ಧಿಯಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ.
ಬಿದಿರಿನ ಗಿಡಗಳನ್ನು ಮಲಗುವ ಕೋಣೆಯಲ್ಲಿ ಎಂದಿಗೂ ಇರಿಸಬಾರದು. ಇದನ್ನು ವಾಸದ ಕೋಣೆ, ಅಧ್ಯಯನ, ಪ್ರವೇಶ ಪ್ರದೇಶ ಅಥವಾ ಕಾರ್ಯಸ್ಥಳಗಳು ಇರಿಸಬಹುದಾಗಿದೆ.
ಇದನ್ನೂ ಓದಿ: Vastu Tips: ಜೀವನದ ಪ್ರಗತಿಯನ್ನು ನಿರ್ಧರಿಸುತ್ತದೆ ಕೈ ಗಡಿಯಾರ
ಇನ್ನು ಅದೃಷ್ಟವನ್ನು ಆಹ್ವಾನಿಸಲು ಬಿದಿರಿನ ಗಿಡಗಳ ಕಾಂಡಕ್ಕೆ ಕೆಂಪು ಅಥವಾ ಚಿನ್ನದ ಬಣ್ಣದ ರಿಬ್ಬನ್ ಅನ್ನು ಕಟ್ಟಬೇಕು. ಬುಡದಲ್ಲಿ ಬೆಣಚುಕಲ್ಲುಗಳನ್ನು ಹಾಕಬಹುದು. ನೀರಿನಿಂದ ತುಂಬಿದ ಗಾಜಿನ ಪಾತ್ರೆ ಇದಕ್ಕೆ ಸೂಕ್ತ. ಬಿದಿರಿನ ಸಕಾರಾತ್ಮಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಅದರ ಬಳಿ ನಾಣ್ಯಗಳು ಅಥವಾ ಹರಳುಗಳನ್ನು ಇರಿಸುವುದು ಉತ್ತಮ ಎನ್ನುತ್ತಾರೆ ವಾಸ್ತು ತಜ್ಞರು.