ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೀವು ಮಣ್ಣಿನ ಪಾತ್ರೆ, ಮಡಕೆ ಬಳಸುತ್ತೀರಾ? ಹಾಗಾದ್ರೆ ತಪ್ಪದೇ ಈ ವಾಸ್ತು ನಿಯಮ ಪಾಲಿಸಲೇ ಬೇಕು

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆ ನೀರು ಮತ್ತು ಆಹಾರದ ವ್ಯವಸ್ಥೆಯನ್ನು ಸರಿಯಾದ ಸ್ಥಳದಲ್ಲಿ ಮಾಡುವುದು ಮುಖ್ಯ. ನೀರಿನ ಪಾತ್ರೆಯನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿ ಪ್ರವೇಶಿಸುವ ಸಾಧ್ಯತೆ ಇದೆ. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಮಣ್ಣಿನ ಪಾತ್ರೆಗಳು ಮಂಗಳ ಗ್ರಹದ ಸಂಕೇತವಾಗಿದ್ದು, ಸಂತೋಷ, ಭಾಗ್ಯ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ ಎಂಬ ನಂಬಿಕೆ ಇದೆ.

ಮಣ್ಣಿನ ಮಡಕೆ (ಸಾಂದರ್ಭಿಕ ಚಿತ್ರ)

ಬೆಂಗಳೂರು, ಜ. 14: ಹಿಂದಿನ ಕಾಲದಲ್ಲಿ ಪ್ರತಿ ಮನೆಯಲ್ಲೂ ಮಣ್ಣಿನ ಮಡಕೆ ಇದ್ದೇ ಇರುತ್ತಿದ್ದವು. ನೀರು ಸಂಗ್ರಹಿಸಲು ಬಳಸುವ ಮಡಕೆಯನ್ನು ಹೂಜಿ ಎಂದು ಕರೆಯಲಾಗುತ್ತದೆ. ಅದರಲ್ಲಿ ನೀರನ್ನು ಸಂಗ್ರಹಿಸಿ ಕುಡಿಯಲು ಬಳಸಲಾಗುತ್ತದೆ. ವಿಶೇಷವಾಗಿ ಬೇಸಗೆಯಲ್ಲಿ ಮಣ್ಣಿನ ಮಡಕೆ ನೀರನ್ನು ನೈಸರ್ಗಿಕವಾಗಿ ತಂಪಾಗಿ ಇಡುತ್ತದೆ ಮತ್ತು ಆರೋಗ್ಯಕ್ಕೂ ಬಹಳ ಉತ್ತಮ ಎಂದು ಪೂರ್ವಜರು ಹೇಳುತ್ತಿದ್ದರು. ಆದರೆ ಮಣ್ಣಿನ ಮಡಕೆಯ ಮಹತ್ವ ಕೇವಲ ಆರೋಗ್ಯಕ್ಕಷ್ಟೇ ಸೀಮಿತವಲ್ಲ; ವಾಸ್ತು ದೃಷ್ಟಿಯಿಂದಲೂ ಅದು ಜೀವನದಲ್ಲಿ ಶುಭಫಲಗಳನ್ನು ನೀಡುತ್ತದೆ ಎನ್ನಲಾಗುತ್ತದೆ. ಮನೆಯಲ್ಲಿ ವಾಸ್ತು ಸಲಹೆಯಂತೆ (Vastu Tips) ಸರಿಯಾದ ವಿಧಾನ ಮತ್ತು ದಿಕ್ಕಿನಲ್ಲಿ ಮಣ್ಣಿನ ಮಡಕೆಯನ್ನು ಇಟ್ಟರೆ, ಹಣಕಾಸಿನ ತೊಂದರೆಗಳು ಕಡಿಮೆಯಾಗುತ್ತವೆ, ವಾಸ್ತು ದೋಷಗಳು ದೂರವಾಗುತ್ತವೆ ಮತ್ತು ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಹಾಗಾದರೆ ಬನ್ನಿ ವಾಸ್ತು ಶಾಸ್ತ್ರದಲ್ಲಿ ಮಣ್ಣಿನ ಮಡಿಕೆ ಕುರಿತಾಗಿ ಏನೆಲ್ಲ ನಿಯಮಗಳನ್ನು ವಿವರಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ:

ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಸರಿಯಾದ ಸ್ಥಳದಲ್ಲಿ ಮಾಡುವುದು ಬಹಳ ಮುಖ್ಯ. ನೀರಿನ ಪಾತ್ರೆಯನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ, ಸಕಾರಾತ್ಮಕ ಶಕ್ತಿಯ ಬದಲು ನಕಾರಾತ್ಮಕತೆ ಪ್ರವೇಶಿಸುವ ಸಾಧ್ಯತೆ ಇದೆ. ಹಿಂದಿನ ಕಾಲದಲ್ಲಿ ಅಡುಗೆ ಮಾಡಲೂ, ನೀರು ಕುಡಿಯಲೂ ಮಣ್ಣಿನ ಪಾತ್ರೆಯನ್ನೇ ಬಳಸಲಾಗುತ್ತಿತ್ತು. ಮಣ್ಣು ಮಂಗಳ ಗ್ರಹದ ಸಂಕೇತವಾಗಿದ್ದು, ಸಂತೋಷ, ಭಾಗ್ಯ ಮತ್ತು ಸಮೃದ್ಧಿಯ ಪ್ರತೀಕವೆಂದು ಪರಿಗಣಿಸಲಾಗಿದೆ. ಆದ್ದರಿಂದ ಮನೆಯಲ್ಲಿ ಮಣ್ಣಿನ ಮಡಕೆ ಇರಿಸುವುದು ಸುಖ, ಸಂಪತ್ತು ಮತ್ತು ಐಶ್ವರ್ಯವನ್ನು ಆಕರ್ಷಿಸುತ್ತದೆ ಎಂದು ನಂಬಲಾಗುತ್ತದೆ.

ದಾಸವಾಳದಲ್ಲಿದೆ ವೈವಾಹಿಕ ಜೀವನದ ಖುಷಿಯನ್ನು ಹೆಚ್ಚಿಸುವ ಶಕ್ತಿ

ಮಣ್ಣಿನ ಪಾತ್ರೆಯ ನೀರನ್ನು ಸೇವಿಸುವುದರಿಂದ ಧೈರ್ಯ, ಶಕ್ತಿ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಹೂಜಿಯ ನೀರು ಬುಧ ಮತ್ತು ಚಂದ್ರನ ಪ್ರಭಾವಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಹಾಗೂ ಮನೆಯಲ್ಲೆಲ್ಲ ಹರ್ಷ ಮತ್ತು ಸಮೃದ್ಧಿ ನೆಲೆಸುತ್ತದೆ.

ವಾಸ್ತು ಪ್ರಕಾರ ಮಣ್ಣಿನ ಮಡಕೆಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡುವುದು ಅತ್ಯಂತ ಉತ್ತಮ. ಇದರಿಂದ ಮನೆ ತುಂಬಾ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಜತೆಗೆ ಮನೆಯ ಛಾವಣಿ ಅಥವಾ ಆವರಣದಲ್ಲಿ ಹಕ್ಕಿಗಳಿಗೆ ಮಣ್ಣಿನ ಪಾತ್ರೆಯಲ್ಲಿ ನೀರು ಅಥವಾ ಆಹಾರ ಇಡುವುದರಿಂದ ಆರ್ಥಿಕ ತೊಂದರೆಗಳು ಕಡಿಮೆಯಾಗುತ್ತವೆ ಮತ್ತು ಹಣಕಾಸಿನ ಸ್ಥಿತಿ ಬಲವಾಗುತ್ತದೆ. ಇಂತಹ ಸೇವೆಯಿಂದ ದೇವಾನುಗ್ರಹವೂ ಲಭಿಸುತ್ತದೆ ಎನ್ನಲಾಗುತ್ತದೆ.

ನೈಋತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ನೀರಿನ ಮಡಕೆಯನ್ನು ಇಡುವುದು ವಾಸ್ತು ಪ್ರಕಾರ ತೊಂದರೆ ಒಡ್ಡುತ್ತದೆ. ನೈಋತ್ಯ ದಿಕ್ಕು ಭೂತ ತತ್ವಕ್ಕೆ ಸೇರಿದುದರಿಂದ ಅಲ್ಲಿ ನೀರು ಇರಿಸುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ನೀರಿನ ಪಾತ್ರೆ ಇಟ್ಟರೆ ಆರೋಗ್ಯ ಸಮಸ್ಯೆಗಳು ಮತ್ತು ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಬಹುದು ಎಂಬ ನಂಬಿಕೆ ಇದೆ.

ಇನ್ನು ನೀರು ತುಂಬಿದ ಮಣ್ಣಿನ ಮಡಕೆಯ ಮುಂದೆ ಪ್ರತಿದಿನ ಒಂದು ದೀಪವನ್ನು ಬೆಳಗಿಸಿದರೆ ಲಕ್ಷ್ಮೀ ಕೃಪೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಯಾರ ಮನೆಯಲ್ಲಿ ಪದೇ ಪದೆ ಹಣಕಾಸಿನ ಸಮಸ್ಯೆಗಳು ಉಂಟಾಗುತ್ತಿವೆಯೋ, ಸಂಪತ್ತಿನ ಸ್ಥಿರತೆ ಇಲ್ಲವೋ, ಅಂಥವರು ಪ್ರತಿದಿನ ಹೂಜಿಯ ಮುಂದೆ ದೀಪ ಹಚ್ಚುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ, ಸಮೃದ್ಧಿ ಬರುತ್ತದೆ ಎಂಬ ನಂಬಿಕೆ ಇದೆ.