ಬೆಂಗಳೂರು: ನಾವು ಬಳಸುವ ಪ್ರತಿಯೊಂದು ವಸ್ತುವೂ ಕೂಡ ನಮ್ಮ ದೈಹಿಕ ಮತ್ತು ಆರೋಗ್ಯ ಆರೋಗ್ಯದ (Vastu tips for good sleep) ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲದೆ ಮನೆಯ ವಾತಾವರಣ (Vastu Tips) ಮೇಲೂ ನಕಾರಾತ್ಮಕ/ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮಲಗುವಾಗ ಕೆಲವೊಂದು ವಸ್ತುಗಳನ್ನು ಪಕ್ಕದಲ್ಲಿ ಇಡಬಾರದು ಎನ್ನುತ್ತದೆ ವಾಸ್ತು ಶಾಸ್ತ್ರ (Vastu shastra). ಕೆಲವು ವಸ್ತುಗಳನ್ನು ಹಾಸಿಗೆಯ ಪಕ್ಕದಲ್ಲಿ ಇರಿಸುವುದರಿಂದ ನಿದ್ರೆಗೆ ಭಂಗವಾಗುತ್ತದೆ ಮಾತ್ರವಲ್ಲ ಹಣ ಬರಿದಾಗುತ್ತದೆ. ಜತೆಗೆ ಅದೃಷ್ಟ ಕೈಕೊಡಬಹುದು. ಮನೆಯಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ, ಸಂತೋಷ ನೆಲೆಸಬೇಕಾದರೆ ಮಲಗುವಾಗ ಈ ವಸ್ತುಗಳನ್ನು ಅತ್ಯಂತ ದೂರ ಇಡುವುದು ಒಳ್ಳೆಯದು ಎನ್ನುತ್ತಾರೆ ವಾಸ್ತು ತಜ್ಞರು.
ಕೆಲವೊಂದು ಅಂಶಗಳನ್ನು ನಾವು ತಿಳಿದೋ, ತಿಳಿಯದೆಯೋ ನಿರ್ಲಕ್ಷ್ಯ ಮಾಡುತ್ತೇವೆ. ಇದು ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಇದರಲ್ಲಿ ಬರುವ ಒಂದು ಪ್ರಮುಖ ವಿಚಾರವೆಂದರೆ ಮಲಗುವಾಗ ನಾವು ನಮ್ಮ ತಲೆಯ ಬಳಿ ಇಟ್ಟುಕೊಳ್ಳುವ ಕೆಲವು ವಸ್ತುಗಳು ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಉಜ್ಜಯಿನಿಯ ಆಚಾರ್ಯ ಆನಂದ್ ಭಾರದ್ವಾಜ್.
ಕೆಲವು ವಸ್ತುಗಳನ್ನು ಹಾಸಿಗೆಯ ಪಕ್ಕದಲ್ಲಿ ಇಡುವುದು ನಿದ್ರೆಗೆ ಭಂಗ ಉಂಟಾಗುತ್ತದೆ. ಮನೆಯಲ್ಲಿ ಹಣ ಬರಿದಾಗುತ್ತದೆ ಮತ್ತು ಅದೃಷ್ಟದ ಮೇಲೂ ಪರಿಣಾಮ ಉಂಟಾಗುತ್ತದೆ ಎನ್ನುತ್ತಾರೆ ಆನಂದ್ ಭಾರದ್ವಾಜ್.
ಔಷಧಗಳು
ವಾಸ್ತುಶಾಸ್ತ್ರದ ಪ್ರಕಾರ ಮಲಗುವಾಗ ದೈನಂದಿನ ಬಳಕೆಯ ಔಷಧಗಳನ್ನು ತಲೆಯ ಬಳಿ ಇಡುವುದರಿಂದ ಅನಾರೋಗ್ಯ ಹೆಚ್ಚಾಗುತ್ತದೆ ಮತ್ತು ದೀರ್ಘ ಕಾಲದವರೆಗೂ ಉಳಿಯುತ್ತದೆ. ಇದು ರೋಗದ ಶಕ್ತಿಯನ್ನು ಬಲಪಡಿಸುತ್ತದೆ, ಆತಂಕ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.
ನಿಂತಿರುವ ಗಡಿಯಾರ
ನಿಂತಿರುವ ಗಡಿಯಾರವನ್ನು ತಲೆಯ ಬಳಿ ಇಡಬಾರದು. ಕೆಲಸ ಮಾಡದ ಗಡಿಯಾರವು ನಿಶ್ಚಲತೆಯನ್ನು ಸಂಕೇತಿಸುತ್ತದೆ. ಇದು ಮಾನಸಿಕ ಅಶಾಂತಿ, ಒತ್ತಡ ಮತ್ತು ನಿದ್ರೆಗೆ ಭಂಗ ಉಂಟು ಮಾಡುತ್ತದೆ.
ಎಲೆಕ್ಟ್ರಾನಿಕ್ ಸಾಧನಗಳು
ನಿದ್ರೆ ಮಾಡುವಾಗ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ತಲೆಯ ಬಳಿ ಇರಿಸಬಾರದು. ಇದರ ವಿಕಿರಣಗಳು ಮಾನಸಿಕ ಒತ್ತಡವನ್ನು ಉಂಟು ಮಾಡುತ್ತದೆ.
ಶೂ ಅಥವಾ ಚಪ್ಪಲಿ
ಹಾಸಿಗೆಯ ಬಳಿ ಪಾದರಕ್ಷೆಗಳನ್ನು ಇಟ್ಟುಕೊಳ್ಳುವುದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಇದು ಮನೆಯಲ್ಲಿ ಅಶಾಂತಿ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Vastu Tips: ಅಡುಗೆ ಮನೆ ವಿನ್ಯಾಸದಲ್ಲಿ ಈ ಮೂರು ಟೈಲ್ಸ್ ಗಳನ್ನು ಬಳಸಲೇಬೇಡಿ..
ಹಣದ ಚೀಲ
ಹಣದ ಚೀಲವನ್ನು ತಲೆಯ ಹತ್ತಿರ ಇಟ್ಟುಕೊಳ್ಳುವುದು ಆರ್ಥಿಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದು ಶಾಂತಿಗೆ ಭಂಗ ತರುತ್ತದೆ.