ಬೆಂಗಳೂರು: ಮನೆಯ ಅಲಂಕಾರದಲ್ಲಿ (Vastu for Home Decoration) ವರ್ಣ ಚಿತ್ರಗಳು (Paintings) ಹೆಚ್ಚಿನ ಆದ್ಯತೆ ಪಡೆದಿದೆ. ತಿಳಿದೋ, ತಿಳಿಯದೆಯೋ ನಾವು ಇಷ್ಟಪಟ್ಟು ತರುವ ಕೆಲವೊಂದು ವರ್ಣಚಿತ್ರಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಮನೆಯಲ್ಲಿ ಕೆಲವೊಂದು ವರ್ಣಚಿತ್ರಗಳನ್ನು (Vastu tips for paintings) ಇಟ್ಟುಕೊಳ್ಳಬಾರದು. ಇದು ಮನೆಗೆ ಹಾನಿಯನ್ನು ಉಂಟು ಮಾಡುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ (Vastu Shastra). ಮನೆಗೆ ವರ್ಣ ಚಿತ್ರಗಳನ್ನು ಆಯ್ದುಕೊಳ್ಳುವಾಗ ಎಚ್ಚರಿಕೆ ಇರಬೇಕು. ಇಲ್ಲವಾದರೆ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗಬಹುದು ಎನ್ನುತ್ತಾರೆ ವಾಸ್ತು ತಜ್ಞರು.
ಮನೆಗಳನ್ನು ಅಲಂಕರಿಸಲು ವಿವಿಧ ರೀತಿಯ ಕಲಾಕೃತಿಗಳು, ವರ್ಣಚಿತ್ರಗಳು ಮತ್ತು ಪ್ರದರ್ಶನ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ತಿಳಿಯದೆ ನಾವು ಇಟ್ಟುಕೊಳ್ಳುವ ಕೆಲವು ವಸ್ತುಗಳು ಸಾಕಷ್ಟು ತೊಂದರೆಯನ್ನು ಉಂಟು ಮಾಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆ ಅಲಂಕಾರದಲ್ಲಿ ಬಳಸುವ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇವುಗಳಲ್ಲಿ ಮುಖ್ಯವಾಗಿ ಪ್ರಾಣಿಗಳ ಚರ್ಮ, ಹಲ್ಲುಗಳು, ಕೊಂಬುಗಳು ಮತ್ತು ಜೀವಂತವಾಗಿ ಕಾಣುವ ಸತ್ತ ಪ್ರಾಣಿಗಳ ರಚನೆಗಳು ಸೇರಿವೆ.
ಪ್ರತಿಯೊಂದು ವಸ್ತುವಿಗೆ ವಿಶೇಷ ಶಕ್ತಿ ಇರುತ್ತದೆ ಎನ್ನುತ್ತದೆ ವಾಸ್ತು. ಹೀಗಾಗಿ ಚರ್ಮ ಅಥವಾ ಹಲ್ಲುಗಳಂತಹ ಪ್ರಾಣಿಗಳ ಅವಶೇಷಗಳು ಮನೆಯ ಪರಿಸರದಲ್ಲಿ ಅಶಾಂತಿ ಮತ್ತು ಭಯವನ್ನು ಹರಡುತ್ತವೆ. ಈ ವಸ್ತುಗಳು ಆಗ್ನೇಯ ಮತ್ತು ದಕ್ಷಿಣ ದಿಕ್ಕಿನ ಸಕಾರಾತ್ಮಕ ಶಕ್ತಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ. ಕುಟುಂಬದಲ್ಲಿ ವಿವಾದಗಳು, ಆರೋಗ್ಯ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.
ಧರ್ಮ ಶಾಸ್ತ್ರದ ಪ್ರಕಾರ ಜೀವಿಗಳ ರಕ್ಷಣೆ ಅತೀ ಮುಖ್ಯ. ಯಾವುದೇ ಪ್ರಾಣಿಗಳ ಅವಶೇಷಗಳಿಂದ ಮಾಡಿದ ಯಾವುದೇ ವಸ್ತುವನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Vastu Tips: ಒಳ್ಳೆಯ ಉದ್ಯೋಗ ಪಡೆಯಬೇಕೆ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ
ಸುಂದರವಾಗಿರುವ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಕೆಲವು ಚಿತ್ರಗಳನ್ನು ಮನೆಯ ಅಲಂಕಾರಕ್ಕೆ ಬಳಸಬಹುದು. ಸಾಂಪ್ರದಾಯಿಕ ವರ್ಣಚಿತ್ರಗಳು, ಕೈಯಿಂದ ಮಾಡಿದ ಕರಕುಶಲ ವಸ್ತುಗಳು, ನೈಸರ್ಗಿಕ ದೃಶ್ಯಗಳ ಚಿತ್ರಗಳು ಮತ್ತು ಆಧ್ಯಾತ್ಮಿಕ ಸಂಕೇತಗಳ ಕಲಾಕೃತಿಗಳು ಇದರಲ್ಲಿ ಸೇರಿವೆ. ಇದು ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಉಂಟು ಮಾಡುತ್ತದೆ.
ಮನೆ ಅಲಂಕಾರವು ಸೌಂದರ್ಯಕ್ಕೆ ಮಾತ್ರವಲ್ಲ ಸಕಾರಾತ್ಮಕ ಶಕ್ತಿ ಹೆಚ್ಚಳಕ್ಕೂ ಮುಖ್ಯ ಎಂಬುದು ತಿಳಿದಿರಲಿ. ಮನೆಯ ಅಲಂಕಾರದಲ್ಲಿ ಪ್ರಾಣಿಗಳ ಅವಶೇಷಗಳನ್ನು ಬಳಸಲೇಬೇಡಿ. ಸೌಂದರ್ಯದ ಜತೆಗೆ ಉತ್ತಮ ಮೌಲ್ಯಗಳು ಮತ್ತು ಸಕಾರಾತ್ಮಕತೆಯ ಸಂದೇಶವನ್ನು ನೀಡುವ ಕಲಾಕೃತಿಗಳನ್ನು ಆಯ್ದುಕೊಳ್ಳಿ ಎನ್ನುತ್ತಾರೆ ವಾಸ್ತು ತಜ್ಞರು.