ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯ ಈ ಭಾಗದಲ್ಲಿರಲಿ ಗೀಸರ್, ಮೈಕ್ರೋವೇವ್

ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವು ನಿರ್ದಿಷ್ಟ ಸ್ಥಳದಲ್ಲಿ ಇರಬೇಕು. ಇಲ್ಲವಾದರೆ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಗೀಸರ್ ಮತ್ತು ಮೈಕ್ರೋವೇವ್ ಅನ್ನು ಕೂಡ ಮನೆಯ ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಿಸಬಹುದು.

ಬೆಂಗಳೂರು: ಮನೆಯಲ್ಲಿಡುವ ಪ್ರತಿಯೊಂದು ವಸ್ತುವು ಮನೆ ಮಂದಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರತಿಯೊಂದು ವಸ್ತುವಿಗೂ ಮೀಸಲಾದ ಸ್ಥಳದ (Vastu for Geyser, Microwave) ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಈ ಕುರಿತು ವಾಸ್ತು ಶಾಸ್ತ್ರ (vastu for home) ಹಲವಾರು ಅಂಶಗಳನ್ನು ಉಲ್ಲೇಖಿಸುತ್ತವೆ. ಮನೆ ಅಥವಾ ಕಚೇರಿಯ ದಿಕ್ಕು ಮತ್ತು ಅದರಲ್ಲಿ ಇರಿಸಲಾಗಿರುವ ವಸ್ತುಗಳು ವ್ಯಕ್ತಿಯ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತವೆ ಎನ್ನಲಾಗಿದೆ. ವಿಶೇಷವಾಗಿ ಅಗ್ನಿ ಅಂದರೆ ಆಗ್ನೇಯ ದಿಕ್ಕು. ಇದು ಶಕ್ತಿ ಮತ್ತು ಬೆಂಕಿಯ ಸಂಕೇತವಾಗಿದೆ. ಹೀಗಾಗಿ ಈ ದಿಕ್ಕಿನಲ್ಲಿ ಗೀಸರ್, ಮೈಕ್ರೋವೇವ್, ಓವನ್ ಮತ್ತು ಇತರ ಶಾಖ ಉತ್ಪಾದಿಸುವ ಸಾಧನಗಳನ್ನು ಇಡಬಹುದು ಎನ್ನುತ್ತಾರೆ ವಾಸ್ತು (Vastu tips) ತಜ್ಞರು.

ಆಗ್ನೇಯ ದಿಕ್ಕಿನಲ್ಲಿ ಬೆಂಕಿ ಸಂಬಂಧಿತ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ವಾಸ್ತು ಸಮತೋಲನವನ್ನು ಕಾಯ್ದುಕೊಳ್ಳಬಹುದು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಆಗ್ನೇಯ ದಿಕ್ಕು ನೇರವಾಗಿ ಅಗ್ನಿಗೆ ಸಂಬಂಧಿಸಿದೆ. ಈ ದಿಕ್ಕನ್ನು ಸರಿಯಾಗಿ ಬಳಸಿದರೆ ಮನೆಯಲ್ಲಿ ಸಮೃದ್ಧಿ, ಆರೋಗ್ಯ ಮತ್ತು ಉತ್ಸಾಹ ಉಳಿಯುತ್ತದೆ.

ಮೈಕ್ರೋವೇವ್ ಅಥವಾ ಗೀಸರ್ ಅನ್ನು ತಪ್ಪು ದಿಕ್ಕಿನಲ್ಲಿ ಇಡುವುದರಿಂದ ಶಕ್ತಿಯ ಅಸಮತೋಲನ ಉಂಟಾಗಬಹುದು. ಇದು ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಕಾರಣವಾಗುತ್ತದೆ.

ಗೀಸರ್ ಮತ್ತು ಮೈಕ್ರೋವೇವ್‌ನಂತಹ ವಸ್ತುಗಳು ಶಾಖವನ್ನು ಉತ್ಪಾದಿಸುತ್ತವೆ. ಇವನ್ನು ಆಗ್ನೇಯ ಮೂಲೆಯಲ್ಲಿ ಇರಿಸಿದಾಗ ಅದು ನೈಸರ್ಗಿಕ ಶಕ್ತಿ ಚಕ್ರದೊಂದಿಗೆ ಸೇರಿಕೊಂಡು ನೀರು ಮತ್ತು ಆಹಾರ ಎರಡರಲ್ಲೂ ಸಮತೋಲನವನ್ನು ಉಂಟು ಮಾಡುತ್ತದೆ. ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಈ ನಿಯಮವನ್ನು ಪಾಲಿಸುವುದರಿಂದ ಮನೆಯ ಸದಸ್ಯರಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ತಾಪ ಉತ್ಪಾದಿಸುವ ಸಾಧನಗಳನ್ನು ಈಶಾನ್ಯ, ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಿದರೆ ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ವಿಶೇಷವಾಗಿ ಈಶಾನ್ಯ ಮೂಲೆಯಲ್ಲಿ ಗೀಸರ್ ಅಥವಾ ಮೈಕ್ರೋವೇವ್ ಇಡುವುದರಿಂದ ಮಾನಸಿಕ ತೊಂದರೆ ಉಂಟಾಗುತ್ತದೆ. ಅಧ್ಯಯನದಲ್ಲಿ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇನ್ನು ಪಶ್ಚಿಮ ದಿಕ್ಕಿನಲ್ಲಿ ಇರಿಸುವುದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: Vastu Tips: ಮನೆ ಅಲಂಕಾರಕ್ಕೆ ಈ ಚಿತ್ರಗಳನ್ನು ಇಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಆಗ್ನೇಯ ಮೂಲೆಯು ಶಾಖವನ್ನು ಉಂಟು ಮಾಡುವ ವಸ್ತುಗಳನ್ನು ಇಡುವುದು ಸೂಕ್ತ. ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಜತೆಗೆ ಮನೆಯ ವಾತಾವರಣವನ್ನು ಶಾಂತಿ ಮತ್ತು ಸಕಾರಾತ್ಮಕತೆಯಿಂದ ತುಂಬುತ್ತದೆ.

ವಿದ್ಯಾ ಇರ್ವತ್ತೂರು

View all posts by this author