ಬೆಂಗಳೂರು: ನಿದ್ರಾಹೀನತೆಯು (Vastu for sleep) ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಸಮಸ್ಯೆಯಾಗಿದೆ. ಆದರೆ ಇದಕ್ಕೆ ಪರಿಹಾರ ಏನು ಮಾಡುವುದು ಎನ್ನುವುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ನಾವು ಮಲಗುವ ಕೋಣೆಯಲ್ಲಿ (vastu for bedroom) ಕೆಲವೊಂದು ವಸ್ತುಗಳನ್ನು ಇರಿಸುವುದರಿಂದ ನಿದ್ರಾಹೀನತೆಯಿಂದ ಪಾರಾಗಬಹುದು. ಮಲಗಿದ ಮೇಲೆ ಕೆಟ್ಟ ಕನಸುಗಳು ಬಿದ್ದು ಎಚ್ಚರವಾಗುವುದನ್ನು ತಡೆಯಬಹುದು. ಇವುಗಳು ಶಾಂತಿಯುತವಾದ ನಿದ್ರೆಗೆ ಸಹಾಯ ಮಾಡುತ್ತದೆ. ರಾತ್ರಿ ಮಲಗಿದ ಮೇಲೆ ಕೆಟ್ಟ ಕನಸುಗಳು ಬೀಳುವುದನ್ನು ಅತ್ಯಂತ ಸುಲಭವಾಗಿ ತಡೆಯಬಹುದು. ಇದಕ್ಕಾಗಿಯೇ ವಾಸ್ತು ಶಾಸ್ತ್ರವು ಕೆಲವೊಂದು ಪರಿಹಾರಗಳನ್ನು ಹೇಳಿವೆ ಎನ್ನುತ್ತಾರೆ ವಾಸ್ತು (vastu tips) ತಜ್ಞರು.
ದುಃಸ್ವಪ್ನಗಳು ಮಲಗಲು ಬಿಡುತ್ತಿಲ್ಲವೆಂದಾದರೆ ಮಲಗುವಾಗ ದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇರಿಸಿ. ಇನ್ನು ಕೆಲವೊಂದು ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಇರಿಸಬೇಡಿ ಎನ್ನುತ್ತದೆ ವಾಸ್ತು ಶಾಸ್ತ್ರ.
ಇದನ್ನೂ ಓದಿ: Vastu Tips: ಅಪ್ಪಿತಪ್ಪಿಯೂ ಟೆರೇಸ್ ಮೇಲೆ ಇವುಗಳನ್ನು ಇಡಬೇಡಿ
ಮುತ್ತುಗಳು
ಹೆಚ್ಚಾಗಿ ದುಃಸ್ವಪ್ನಗಳು ಬರುತ್ತಿದ್ದರೆ, ಇದರಿಂದ ನಿದ್ರೆಗೆ ತೊಂದರೆಯಾಗಿದ್ದರೆ ಮುತ್ತುಗಳು ಪ್ರಯೋಜನಕಾರಿಯಾಗಿದೆ. ಮುತ್ತುಗಳು ಮನಸ್ಸಿಗೆ ಸಕಾರಾತ್ಮಕ ಶಕ್ತಿಯನ್ನು ಒದಗಿಸುತ್ತವೆ ಮತ್ತು ಶಾಂತಿಯನ್ನು ತರುತ್ತವೆ. ಮಲಗುವ ಮುನ್ನ ಅವುಗಳನ್ನು ದಿಂಬಿನ ಕೆಳಗೆ ಇರಿಸಿಕೊಳ್ಳುವುದರಿಂದ ಶಾಂತಿಯುತವಾದ ನಿದ್ರೆಯನ್ನು ಪಡೆಯಬಹುದು.
ಹರಳೆಣ್ಣೆ
ದುಃಸ್ವಪ್ನಗಳನ್ನು ದೂರವಿಡಲು ಹರಳೆಣ್ಣೆಯನ್ನು ಬಳಸಬಹುದು. ಮಲಗುವ ಮೊದಲು ಅದನ್ನು ಬಟ್ಟೆಯಲ್ಲಿ ಕಟ್ಟಬೇಕು ಮತ್ತು ಅದನ್ನು ದಿಂಬಿನ ಕೆಳಗೆ ಇರಿಸಬೇಕು. ಇದರಿಂದ ನಕಾರಾತ್ಮಕ ಶಕ್ತಿ ಅಥವಾ ಪ್ರಚೋದನಕಾರಿ ಆಲೋಚನೆಗಳಿಂದ ದೂರವಾಗಬಹುದು. ಇದು ಯಾವುದೇ ಕೆಟ್ಟ ಕನಸು ಬೀಳದಂತೆ ಮನಸ್ಸನ್ನು ನಿಯಂತ್ರಿಸುತ್ತದೆ. ಹರಳೆಣ್ಣೆಯು ಮನಸ್ಸಿಗೆ ಶಾಂತಿಯನ್ನು ಒದಗಿಸುತ್ತದೆ.
ಕಲ್ಲುಪ್ಪು
ಮಲಗುವ ಕೋಣೆಯಲ್ಲಿ ಕಲ್ಲು ಉಪ್ಪನ್ನು ಇರಿಸುವುದರಿಂದ ಕೂಡ ಕೋಣೆಯನ್ನು ಸಕಾರಾತ್ಮಕವಾಗಿ ಇರಿಸಬಹುದು. ಇದರಿಂದ ರಾತ್ರಿ ಪದೇ ಪದೇ ಎಚ್ಚರವಾಗುವುದು ತಪ್ಪುತ್ತದೆ.
ಗಡಿಯಾರ
ವಾಸ್ತು ಶಾಸ್ತ್ರದ ಪ್ರಕಾರ ಮಲಗುವಾಗ ಗಡಿಯಾರವನ್ನು ಹಾಸಿಗೆಯ ಬಳಿ ಇರಿಸಬಾರದು. ಯಾಕೆಂದರೆ ಅದರ ಶಕ್ತಿಯು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ.
ಪರ್ಸ್
ಕೆಲವರು ಮಲಗುವ ಹಾಸಿಗೆಗೆ ಸಮೀಪದಲ್ಲಿ ಪರ್ಸ್‌ಗಳನ್ನು ಇಡುತ್ತಾರೆ. ಇದು ಕೂಡ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಒತ್ತಡವನ್ನು ಹೆಚ್ಚಿಸುತ್ತದೆ.
ಎಲೆಕ್ಟ್ರಾನಿಕ್ ವಸ್ತುಗಳು
ಹಾಸಿಗೆಯ ಬಳಿ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು ಇರಬಾರದು. ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಹಾಸಿಗೆಯ ಮೇಲೆ ಅಥವಾ ಹತ್ತಿರದಲ್ಲಿ ಇಡಬಾರದು. ಅವುಗಳ ವಿಕಿರಣವು ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ಪಾದರಕ್ಷೆಗಳು
ಚಪ್ಪಲಿಗಳನ್ನು ಎಂದಿಗೂ ಮಲಗುವ ಕೋಣೆಯಲ್ಲಿ ಇರಿಸಬಾರದು. ಯಾಕೆಂದರೆ ಇದರಿಂದ ನಕಾರಾತ್ಮಕತೆ ಮಲಗುವ ಕೋಣೆಯನ್ನು ಪ್ರವೇಶಿಸುತ್ತದೆ. ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: Vastu Tips: ಅಪ್ಪಿತಪ್ಪಿಯೂ ಈ ಜಾಗಗಳಲ್ಲಿ ರಂಗೋಲಿ ಹಾಕಬೇಡಿ ಎನ್ನುತ್ತದೆ ವಾಸ್ತು; ಯಾಕೆ ಗೊತ್ತೇ?
ಪುಸ್ತಕಗಳು
ಮಲಗುವಾಗ ಹಾಸಿಗೆಯ ಮೇಲೆ ಯಾವುದೇ ಪುಸ್ತಕ ಅಥವಾ ಡೈರಿಗಳನ್ನು ಇರಿಸಬಾರದು. ಅವುಗಳು ಕೂಡ ನಿದ್ರೆಗೆ ಭಂಗವನ್ನು ಉಂಟು ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.