ಬೆಂಗಳೂರು: ಮಹಾಗಣಪತಿಯನ್ನು(Ganapathi) ವಿಘ್ನ ವಿನಾಶಕನೆಂದು ನಾವೆಲ್ಲರೂ ಪೂಜಿಸುತ್ತೇವೆ. ನಾವು ಮಾಡುವ ಯಾವುದೇ ಕೆಲಸ ಕಾರ್ಯಗಳಲ್ಲಿ ನಮಗೆ ವಿಘ್ನಗಳು ಎದುರಾಗದೇ, ನಮ್ಮೆಲ್ಲ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಬೇಕಾದರೆ ಅದಕ್ಕೆ ವಿಘ್ನವಿನಾಶಕ ಗಣಪತಿಯ ಆಶೀರ್ವಾದ ಬೇಕೇ ಬೇಕು. ಗಣೇಶನ ಕೃಪೆ ನಮ್ಮ ಮೇಲುಂಟಾದರೆ ಗಣಪ ನಮಗೆ ಸಂತೋಷ ಮತ್ತು ಸಮೃದ್ಧಿಯನ್ನು ಅನುಗ್ರಹಿಸುತ್ತಾನೆ ಎಂಬ ನಂಬಿಕೆಯಿದೆ.
ಹೌದು, ಭಕ್ತರು ಗಣೇಶನನ್ನು ಭಕ್ತಿಯಿಂದ ಪೂಜಿಸಿದರೆ ಸಂತೋಷ ಮತ್ತು ಸಮೃದ್ಧಿಯನ್ನು ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿ ಇಂದಿಗೂ ಜೀವಂತವಾಗಿದೆ. ವಿಶೇಷವಾಗಿ ಬುಧವಾರ ಗಣೇಶನಿಗೆ ಸಮರ್ಪಿತ ದಿನವಾಗಿರುವುದರಿಂದ, ಅನೇಕರು ಈ ದಿನ ವಿಶಿಷ್ಟ ಪೂಜಾ ಕ್ರಮಗಳನ್ನು ಪಾಲಿಸುತ್ತಾರೆ. ಗಣಪ ಮೆಚ್ಚುವಂತೆ ಇಂದು ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ಭಾವನೆಯೂ ಇದೆ.
ಇದರೊಂದಿಗೆ, ಬುಧವಾರ ಕೆಲವು ಕೆಲಸಗಳನ್ನು ಮಾಡುವುದು ಅಶುಭ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಭಕ್ತರ ನಂಬಿಕೆಯ ಪ್ರಕಾರ ಈ ದಿನ ಕೆಲವು ಕಾರ್ಯಗಳು ಗಣೇಶನ ಅನುಗ್ರಹ ಪಡೆಯಲು ತಡೆಯಾಗಬಹುದು. ಆದ್ದರಿಂದ ಭಕ್ತರು ಬುಧವಾರ ಈ ನಿಷೇಧಿತ ಕೆಲಸಗಳನ್ನು ಮಾಡದೇ ಇರುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಬುಧವಾರ ಯಾವ ಕೆಲಸಗಳನ್ನು ಮಾಡಬಾರದು? ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಬಗ್ಗೆ ಏನು ಉಲ್ಲೇಖವಿದೆ? ಬುಧವಾರ ನಿಷೇಧಗೊಂಡ ಕಾರ್ಯಗಳು ಯಾವುವು? ಈ ಬಗ್ಗೆ ನಾವಿಂದು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತಿದ್ದರೆ, ಈ ವಿಗ್ರಹಗಳನ್ನು ಮನೆಗೆ ತಂದು ಇಡಿ
ಬುಧವಾರ ಪಾಲಕ್, ಸಾಸಿವೆ ಸೊಪ್ಪು, ಕೊತ್ತಂಬರಿ, ಹಸಿರು ಮೆಣಸಿನಕಾಯಿ, ಪಪ್ಪಾಯಿ, ಪೇರಳ, ಹಸಿರು ಮೂಂಗ್ ದಾಲ್ ಖರೀದಿಸಬಾರದು. ಮಾತ್ರವಲ್ಲದೇ, ಈ ದಿನದಂದು ಪಾತ್ರೆಗಳು, ಅಕ್ವೇರಿಯಂ ಮತ್ತು ಔಷಧಿಗಳನ್ನು ಖರೀದಿಸುವುದು ಒಳ್ಳೆಯದಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧವಾರ ಹಾಲಿನಿಂದ ತಯಾರಿಸಿದ ಖೀರ್, ಸಿಹಿತಿಂಡಿ ಇತ್ಯಾದಿಗಳನ್ನು ಖರೀದಿ ಮಾಡಬಾರದು ಮತ್ತು ಇವುಗಳನ್ನು ಮನೆಗೆ ತೆಗೆದುಕೊಂಡು ಬರಬಾರದು. ಇಷ್ಟು ಮಾತ್ರವಲ್ಲದೇ, ಬುಧವಾರ ಬಾಚಣಿಗೆ, ಎಣ್ಣೆ, ಹೊಸ ಬೂಟ್, ಬಟ್ಟೆ ಸೇರಿದಂತೆ ಕೂದಲಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು.
ಬುಧವಾರ ಯಾವುದೇ ರೀತಿಯ ವಹಿವಾಟುಗಳು ನಿಷಿದ್ಧ, ಇದರಿಂದ ಅಶುಭ ಫಲ ಉಂಟಾಗುತ್ತದೆ. ಮಾತ್ರವಲ್ಲದೇ ಬುಧವಾರ ಕಪ್ಪು ಬಟ್ಟೆಗಳನ್ನು ಧರಿಸುವುದು ಶುಭವಲ್ಲ. ಇದು ನಿಮ್ಮ ವೈವಾಹಿಕ ಜೀವನಕ್ಕೆ ಮಾರಕ. ಬುಧವಾರ ಗಣಪತಿ ದೇವರ ಕೃಪೆ ನಿಮ್ಮ ಮೇಲಾಗಲು ‘ಓಂ ಗಂ ಗಣಪತಯೇ ನಮಃ’ ಎಂಬ ಮಂತ್ರವನ್ನು ಪೂಜೆಯ ಸಮಯದಲ್ಲಿ ಕನಿಷ್ಠ 108 ಬಾರಿ ಈ ಮಂತ್ರವನ್ನು ಪಠಿಸಿ. ಇದರಿಂದ ನಿಮ್ಮ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತದೆ ಮತ್ತು ನಿಮ್ಮ ಎಲ್ಲ ಆಸೆಗಳು ಈಡೇರುತ್ತವೆ.