ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Astro Tips: ಬುಧವಾರ ಈ ಕೆಲಸಗಳನ್ನು ಮಾಡಿದರೆ ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ!

ಹಿಂದೂ ಸಂಪ್ರದಾಯದಲ್ಲಿ ಬುಧವಾರವನ್ನು ವಿಘ್ನಹರ್ತೃ ಶ್ರೀ ಗಣೇಶನಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಈ ದಿನ ಬುಧ ಗ್ರಹದ ಪ್ರಭಾವ ಹೆಚ್ಚಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಬುದ್ಧಿವಂತಿಕೆ, ಮಾತಿನ ಶಕ್ತಿ ಮತ್ತು ವಿವೇಚನೆಗೆ ಕಾರಣನಾದ ಬುಧ ಗ್ರಹವನ್ನು ಶಾಂತಗೊಳಿಸಲು ಭಕ್ತರು ವಿಶೇಷ ಪೂಜೆಗಳನ್ನು ನೆರವೇರಿಸುತ್ತಾರೆ. ಆದರೆ ಬುಧವಾರ ಕೆಲವು ಕೆಲಸಗಳನ್ನು ಮಾಡುವುದನ್ನು ಅಶುಭ ಎಂದು ನಂಬಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರ

ಬೆಂಗಳೂರು: ಹಿಂದೂ ಧರ್ಮದಲ್ಲಿ (Hindu Dharma) ಬುಧವಾರವನ್ನು(Wednesday) ಗಣೇಶನಿಗೆ (Lord Ganesha) ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಈ ದಿನವು ಬುಧ ಗ್ರಹದ ಅಧಿಪತ್ಯದಲ್ಲಿದೆ. ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಬುಧ ಗ್ರಹವು ಬುದ್ಧಿವಂತಿಕೆ, ಮಾತಿನ ಶಕ್ತಿ ಮತ್ತು ವಿವೇಚನೆಯ ಸಂಕೇತವಾಗಿದೆ. ಆದ್ದರಿಂದ ಬುಧವಾರ ಗಣಪತಿಯನ್ನು ಭಕ್ತಿಯಿಂದ ಪೂಜಿಸಿದರೆ ಜೀವನದಲ್ಲಿನ ಅಡೆತಡೆಗಳು ದೂರವಾಗಿ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ.

ಇದೇ ವೇಳೆ, ಕೆಲವು ಕಾರ್ಯಗಳನ್ನು ಬುಧವಾರದಂದು ಮಾಡಬಾರದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇಂತಹ ತಪ್ಪುಗಳು ಆರ್ಥಿಕ ಸಂಕಷ್ಟ, ಕುಟುಂಬ ಕಲಹ ಹಾಗೂ ಮಾನಸಿಕ ಅಶಾಂತಿಗೆ ಕಾರಣವಾಗಬಹುದು ಎನ್ನಲಾಗುತ್ತದೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಬುಧವಾರ ಯಾವ ಕೆಲಸಗಳನ್ನು ತಪ್ಪಿಸಬೇಕು ನೋಡೋಣ.

ಹೂಡಿಕೆ ಮಾಡುವುದನ್ನು ತಪ್ಪಿಸಿ

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಬುಧವಾರ ಹಣ ಹೂಡಿಕೆಗೆ ಸೂಕ್ತ ದಿನವಲ್ಲ. ಈ ದಿನದಲ್ಲಿ ಮಾಡಿದ ಹೂಡಿಕೆ ನಿರೀಕ್ಷಿತ ಲಾಭ ನೀಡದೇ ಇರಬಹುದು ಎಂದು ಹೇಳಲಾಗುತ್ತದೆ. ಹೀಗಾಗಿ ಹೂಡಿಕೆ ಕಾರ್ಯಗಳನ್ನು ಶುಕ್ರವಾರ ಮಾಡುವುದನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ.

ಸಾಲ ಪಡೆಯಬೇಡಿ, ಹಣ ನೀಡುವುದನ್ನೂ ತಪ್ಪಿಸಿ

ಬುಧವಾರದಂದು ಸಾಲ ತೆಗೆದುಕೊಳ್ಳುವುದು ಅಥವಾ ಇತರರಿಗೆ ಹಣ ನೀಡುವುದು ಅಶುಭ ಎಂದು ನಂಬಲಾಗಿದೆ. ಈ ದಿನ ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ಆದರೆ ಅನಿರೀಕ್ಷಿತವಾಗಿ ಹಣ ಕೈಗೆ ಬಂದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಕಪ್ಪು ಬಟ್ಟೆ ಧರಿಸುವುದನ್ನು ತಪ್ಪಿಸಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧವಾರ ಮಹಿಳೆಯರು ಕಪ್ಪು ಬಣ್ಣದ ಉಡುಪುಗಳನ್ನು ಧರಿಸಬಾರದು ಎನ್ನಲಾಗುತ್ತದೆ. ವಿಶೇಷವಾಗಿ ದಾಂಪತ್ಯ ಜೀವನದಲ್ಲಿ ಮನಸ್ತಾಪಗಳಿದ್ದರೆ, ಈ ದಿನ ಕಪ್ಪು ಬಟ್ಟೆ ಧರಿಸುವುದು ಸಂಬಂಧಗಳಲ್ಲಿ ಮತ್ತಷ್ಟು ಅಸಮಾಧಾನ ಉಂಟುಮಾಡಬಹುದು ಎಂಬ ನಂಬಿಕೆ ಇದೆ.

ಪಶ್ಚಿಮ ದಿಕ್ಕಿಗೆ ಪ್ರಯಾಣ ಅಶುಭ

ಬುಧವಾರದಂದು ಪಶ್ಚಿಮ ದಿಕ್ಕಿಗೆ ಪ್ರಯಾಣ ಮಾಡುವುದನ್ನು ಕೆಲವರು ತಪ್ಪಿಸುತ್ತಾರೆ. ಈ ದಿನ ಆರಂಭಿಸಿದ ಪ್ರಯಾಣ ಕೆಲಸಗಳಲ್ಲಿ ಅಡೆತಡೆ ತರಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದ್ದರಿಂದ ಅವಶ್ಯಕತೆ ಇದ್ದರೆ ಎಚ್ಚರಿಕೆಯಿಂದ ಯೋಜನೆ ಮಾಡುವುದು ಉತ್ತಮ.

ಕಹಿ ಮಾತುಗಳನ್ನು ಆಡಬೇಡಿ

ಬುಧ ಗ್ರಹವು ಮಾತು ಮತ್ತು ಸಂವಹನದ ಕಾರಕ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಬುಧವಾರದಂದು ಕಠಿಣ ಅಥವಾ ನೋವುಂಟು ಮಾಡುವ ಮಾತುಗಳನ್ನು ಆಡಬಾರದು. ಇಂತಹ ವರ್ತನೆ ಕುಟುಂಬದಲ್ಲಿ ಕಲಹ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.

ಗಣೇಶನ ಆರಾಧನೆಗೆ ಮಹತ್ವ

ಬುಧವಾರ ಗಣೇಶನಿಗೆ ದುರ್ವೆ, ಮೋದಕ ಮತ್ತು ಹಸಿರು ಬಣ್ಣದ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡಿದರೆ ಶುಭ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಗಣಪತಿಯ ಕೃಪೆಯಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಸುಖ ನೆಲೆಸುತ್ತದೆ ಎಂಬ ನಂಬಿಕೆಯೂ ಇದೆ.