ಬೆಂಗಳೂರು,ಎ.9 : ಮಿಥುನ ರಾಶಿಗೆ ಚಂದ್ರನು ಆರ್ಥಿಕತೆಯ ಭಾಗವಾಗಿ ಮುಖ್ಯವಾದ ಪರಿಣಾಮವನ್ನು ಬೀರಬಹುದು. ಅದರಲ್ಲೂ ಬುಧನ ಆಳ್ವಿಕೆಯೂ ಮಿಥುನ ರಾಶಿಗೆ ಪ್ರಮುಖವಾಗಿದೆ. ಚಂದ್ರನಿದ್ದಾಗ ಬುದ್ದಿವಂತಿಕೆಯ ಯೋಚನೆ ಮತ್ತು ಹೊಸ ವಿಚಾರಚನ್ನು ಕಲಿಯುವ ಹುಮ್ಮಸ್ಸು ಇರುತ್ತದೆ. ಉತ್ತಮ ಕೆಲಸ, ಕೌಶಲ್ಯ ಹೆಚ್ಚಿಸುವಲ್ಲಿ ಮಿಥುನ ರಾಶಿಗೆ ಚಂದ್ರ ಪ್ರಮುಖ ನಾಗುತ್ತಾನೆ. ಆದರೆ ಮಿಥುನವು 'ದ್ವಿಸ್ವಭಾವ' ರಾಶಿಯಾಗಿದ್ದಾಗ ಚಂದ್ರ ಋಣಾತ್ಮಕ ಪರಿಣಾಮ ಬೀರಿದರೆ ಯಾವುದೇ ನಿರ್ಧಾರ ತೆಗೆದು ಕೊಳ್ಳುವಾಗ ಸಮಸ್ಯೆ ಉಂಟು ಮಾಡಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.