ಬೆಂಗಳೂರು,ಮಾ.28: ಕುಂಭ ರಾಶಿಗೆ ಈ ವರ್ಷ ಶನಿಯ ಪ್ರಭಾವ ಹೆಚ್ಚಿದೆ. ಹೀಗಾಗಿ ಆಸ್ತಿ ವಿಚಾರವಾಗಿ ಮನಸ್ತಾಪ, ಕುಟುಂಬದಲ್ಲಿ ಕಲಹ ಇತ್ಯಾದಿ ಸಮಸ್ಯೆಗಳು ಸೃಷ್ಟಿ ಯಾಗಬಹುದು. ಎಲ್ಲ ಕೆಲಸ ಕಾರ್ಯದಲ್ಲಿ ಶತ್ರುಗಳ ತೊಂದರೆ ಕೂಡ ಇರಲಿದ್ದು ಸಹೋದ್ಯೋಗಿಗಳೊಂದಿಗೆ ಕೆಲವು ವಿಚಾರದಲ್ಲಿ ಮನಸ್ಸಾಪ, ಗೊಂದಲ ಉಂಟಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಂಡರೆ ಒಳಿತು. ಆದರೆ ಗುರು ಗ್ರಹದಿಂದಾಗಿ ನೀವು ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.